ಪ್ರಕಾಶ್‌ಮೂರ್ತಿಗೆ ಸಿಜಿಕೆ ರಂಗ ಪುರಸ್ಕಾರ
Team Udayavani, Jun 28, 2020, 7:22 AM IST
ನೆಲಮಂಗಲ: ರಂಗಭೂಮಿಗೆ ಪ್ರಾಮುಖ್ಯತೆ ಇಲ್ಲದಿದ್ದ ಸಮಯದಲ್ಲೂ ಸಿಜಿಕೆ, ಬೀದಿನಾಟಕಗಳಿಂದ ಕಲಾವಿದರಿಗೆ ಯಶಸ್ಸಿನ ವೇದಿಕೆ ಸೃಷ್ಟಿಸಿದ್ದನ್ನುಮರೆಯುವಂತಿಲ್ಲ. ಹಿರಿಯ ಕಲಾವಿದೆ ಮಾಜಿ ಸಚಿವೆ ಉಮಾಶ್ರೀ ಕಲೆ ಗುರುತಿಸಿ, ಪ್ರೋತ್ಸಾಹಿಸಿದ್ದು ಸಿಜಿಕೆ ಎಂದು ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ದರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಸದಾಶಿವ ನಗರದ ರಂಗ ಶಿಕ್ಷಣ ಕೇಂದ್ರದ ಸಭಾಂಗಣದಲ್ಲಿ ರಂಗ ಶಿಕ್ಷಣ ಕೇಂದ್ರ ಕರ್ನಾಟಕ ಬೀದಿ ನಾಟಕ ಅಕಾಡೆಮಿಯಿಂದ ಆಯೋಜಿಲಾಸಗಿದ್ದ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಬಡದಂಪತಿ ಮಗನಾಗಿ ದಿವ್ಯಾಂಗನಾಗಿದ್ದರೂ ಎದೆಗುಂದದೆ ಆತ್ಮ ಸ್ಥೈರ್ಯದಿಂದ ರಂಗ ಸೇವೆಯಲ್ಲಿ ಸಾಧನೆ ಮಾಡಿದ್ದಾರೆ.
ಮಹಾತಪಸ್ವಿ ಶ್ರೀಮರುಳಸಿದ್ಧರ ಜೀವನ ಚರಿತ್ರೆ ರಂಗದ ಮೇಲೆ ತರುವ ಯತ್ನದ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದು, ರಂಗಭೂಮಿಗೆ ತುಂಬಲಾರದ ನಷ್ಟವಾ ಗಿದೆ ಎಂದರು. ತಾಲೂಕು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಚಿಕ್ಕನಹಳ್ಳಿ ಗಂಗರಾಜು, ಸಿಜಿಕೆ ರಂಗ ಪುರಸ್ಕೃತ ಬೈರನಹಳ್ಳಿ ಪ್ರಕಾಶ್‌ಮೂರ್ತಿ ಮಾತನಾಡಿದರು.
ಸಿಜಿಕೆ ರಂಗಪುರಸ್ಕಾರ: ತಾಲೂಕಿನ ಬೈರನಹಳ್ಳಿ ಎಂಬ ಸಣ್ಣ ಗ್ರಾಮದಿಂದ ಬಂದಂತಹ ಪ್ರಕಾಶ್‌ಮೂರ್ತಿ ರಂಗ ಕಲಾವಿದನಾಗಿ, ಛಾಯಚಿತ್ರಗಾರ ಹಾಗೂ ನಾಟಕಕಾರ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಯೊಂದಿಗೆ ರಂಗಸೇವೆ ಗುರುತಿಸಿ, ರಂಗ ಶಿಕ್ಷಣ ಕೇಂದ್ರ 2020ರ ಸಿಜಿಕೆ ರಂಗ ಪುರಸ್ಕಾರ ನೀಡಿ ಗೌರವಿಸಿತು. ಹೊಯ್ಸಳ ಪದವಿ ಕಾಲೇಜಿನ ಪ್ರಾಂಶುಪಾಲ ಭೋಗಣ್ಣ, ಕಣೇಗೌಡನಹಳ್ಳಿ ಪಂಚಾಯತಿ ಸದಸ್ಯ ಯಲ್ಲಪ್ಪ, ಕಲಾವಿದ ವಿಜಯ್‌ಹೊಸಪಾಳ್ಯ, ಸಿದ್ದಪ್ಪ, ದಿನೇಶ್, ಟಿ.ಕೃಷ್ಣಪ್ಪ, ವೆಂಕಟೇಶ್, ಮಾರುತಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.