ಜಿಲ್ಲೆಯ ಜನರಿಗೆ ಶೀತಜ್ವರ ಬಾಧೆ
Team Udayavani, Jan 19, 2022, 12:48 PM IST
ದೇವನಹಳ್ಳಿ: ಜಿಲ್ಲೆಯ ಮನೆ ಮನೆಗಳಲ್ಲಿ ಶೀತ, ನೆಗಡಿ, ಕೆಮ್ಮು, ಮೈಕೈ ನೋವು ಹಾಗೂ ಜ್ವರದಿಂದ ಬಳಲುತ್ತಿದ್ದಾರೆ. ಹವಾಮಾನ ಬದಲಾವಣೆ ಉಂಟಾಗಿರುವ ಹಿನ್ನೆಲೆ, ಈ ಸಮಸ್ಯೆಗೂ ಕೋವಿಡ್ ಲಕ್ಷಣಗಳಿಗೂ ಸಾಮ್ಯತೆ ಇರುವುದರಿಂದ ಹಲವಾರು ಜನ ಆತಂಕ ಪಡುವುದು ಕಂಡು ಬರುತ್ತಿದೆ. ಇದರಿಂದ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳ ಕಡೆ ಜನ ಮುಖ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರತಿನಿತ್ಯ ಸಾಕಷ್ಟು ಮಕ್ಕಳಲ್ಲಿ ಕೋವಿಡ್ ಸೋಂಕು ಲಕ್ಷಣ ಕಂಡು ಬರುತ್ತಿದೆ. ಪ್ರತಿದಿನ ಆಸ್ಪತ್ರೆಗಳಲ್ಲಿ 120ಕ್ಕೂ ಹೆಚ್ಚು ಮಂದಿ ಕೋವಿಡ್‌ತಪಾಸಣೆ ಮಾಡಿಸಲಾಗುತ್ತಿದೆ. ಇದರ ನಡುವೆ ಬರುತ್ತಿರುವ ಹೊರ ರೋಗಿಗಳನ್ನು ತಪಾಸಣೆ ಮಾಡಿಅವರಿಗೆ ಚಿಕಿತ್ಸೆ ನೀಡಲು ವೈದ್ಯರ ಸಿಬ್ಬಂದಿ ಪರದಾಡುವಸ್ಥಿತಿ ನಿರ್ಮಾಣವಾಗಿದೆ. ಕಾಯಿಲೆ ಗಂಭೀರವಾಗಿದ್ದರೆಮಾತ್ರವೇ ಆಸ್ಪತ್ರೆಗಳಿಗೆ ಹೋಗುವಂತೆ ಜಿಲ್ಲಾಧಿಕಾರಿಸೂಚನೆ ನೀಡಿದ್ದರೂ, ಜ್ವರ, ಮೈಕೈ ನೋವು, ನೆಗಡಿ,ಕೆಮ್ಮು ಲಕ್ಷಣಗಳಿರುವವರು ಹೆಚ್ಚಾಗಿ ಬರುತ್ತಿದ್ದಾರೆ. ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ 100 ಜನಶೀತಬಾಧೆಯಿಂದ ಪ್ರತಿನಿತ್ಯ ತೋರಿಸುತ್ತಿದ್ದಾರೆ.
ಜನರಿಗೆ ಶೀತಬಾಧೆ: ಕಳೆದ ಕೆಲದಿನಗಳಿಂದ ಖಾಸಗಿ ಕ್ಲಿನಿಕ್ ಮುಂದೆ ಜನರ ದಂಡು ಕಂಡು ಬರುತ್ತಿದೆ. ಸಾಲುಗಟ್ಟಿ ಕುಳಿತುಕೊಂಡಿರುವ ದೃಶ್ಯ ಕಂಡುಬರುತ್ತಿದೆ. ಅನೇಕ ಜನರಲ್ಲಿ ಕಾಲಿನ ಕೀಲು ನೋವು,ಜ್ವರ, ನೆಗಡಿ, ಕೆಮ್ಮು, ಗಂಟಲು ಕಿರಿಕಿರಿ ಮುಂತಾದಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಶೀತಬಾಧೆ ಜನರನ್ನುಕಾಡ ತೊಡಗುತ್ತಿದೆ. ಕೆಮ್ಮು ದೇಹ ಹೈರಾಣಾಗುವಂತೆಮಾಡುತ್ತಿದೆ. ಆಗಿನ ಕಾಲದಲ್ಲಿ ಚಳಿಗಾಲದಲ್ಲಿ ಜನರಿಗೆ ಶೀತಬಾಧೆ ಕಾಣಿಸುತ್ತಿತ್ತು.
ಇಲಾಖೆ ಮುಂದಾಗುತ್ತಿಲ್ಲ: ಇದೀಗ ಕೊರೊನಾ ಎಂಬ ಸಾಂಕ್ರಾಮಿಕ ರೋಗ ಬಂದಿರುವುದರಿಂದಕೆಮ್ಮ, ನೆಗಡಿ, ಜ್ವರ ಕೊರೊನಾ ಲಕ್ಷಣಗಳಾಗಿವೆ.ಮೂರನೇ ಅಲೆಯಲ್ಲಿ ಪಾಸಿಟಿವ್ ಪ್ರಮಾಣ ಹೆಚ್ಚಾಗಿಕಾಣಿಸಿಕೊಳ್ಳುತ್ತಿರುವುದು ಜನರ ಆತಂಕಕ್ಕೆ ಕಾರಣ ವಾಗಿದೆ. ಕೋವಿಡ್ ಲಕ್ಷಣವೆಂಬುವುದರ ಮಾಹಿತಿಯನ್ನು ಜನರಿಗೆ ಮುಟ್ಟಿಸುವಲ್ಲಿ ಹಾಗೂ ಅರಿವು ಮೂಡಿಸುವಲ್ಲಿ ಆರೋಗ್ಯ ಇಲಾಖೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಕೋವಿಡ್ ಪರೀಕ್ಷೆ: ಗ್ರಾಮೀಣ ಪ್ರದೇಶದ ಜನರಿಗೆಮೂರನೇ ಅಲೆಯ ಆತಂಕ ಹೆಚ್ಚಾಗಿದ್ದು, ಸಾಮಾನ್ಯಜ್ವರ, ನೆಗಡಿ, ಕೆಮ್ಮು ಕೋವಿಡ್ ಲಕ್ಷಣಗಳ ಬಗ್ಗೆ ಆಶಾ,ಆರೋಗ್ಯ ಇಲಾಖೆಯವರು ಜಾಗೃತಿ ಮೂಡಿಸಬೇಕು.ಕೆಲವರಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದರೆ ಕೋವಿಡ್‌ಲಕ್ಷಣ ಇಲ್ಲದಿದ್ದರೂ, ಪಾಸಿಟಿವ್ ಬರುತ್ತಿರುವುದು.ಜನರಲ್ಲಿ ಭಯ ಪಡುವಂತೆ ಮಾಡಿದೆ. ಕೋವಿಡ್‌ಪರೀಕ್ಷೆ ಮಾಡಿಸಲು ನಾಲ್ಕು ತಾಲೂಕುಗಳ ಆಸ್ಪತ್ರೆಗಳಮುಂಭಾಗದಲ್ಲಿ ಜನ ಸಾಲು ನಿಂತು ಮಾಡಿಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಜನಸಂದಣಿ ಹೆಚ್ಚಾಗುತ್ತಿದೆ. ಗರ್ಭಿಣಿಯರು, ಮಕ್ಕಳು, ಸೇರಿದಂತೆ ಸುತ್ತಮುತ್ತಲಿನ ಜನರು ಬರುತ್ತಿದಾರೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಿನನಿತ್ಯ 250ಕ್ಕೂ ಅಧಿಕಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ದಿನೇ ದಿನೆ ಆಸ್ಪತ್ರೆಗಳತ್ತ ಬರುತ್ತಿರುವ ರೋಗಿಗಳ ಸಂಖ್ಯೆಏರಿಕೆಯಾಗುವ ಸಾಧ್ಯತೆಯಿದೆ.
ಅರಿವು ಮೂಡಿಸುವಲ್ಲಿ ಆರೋಗ್ಯ ಇಲಾಖೆ ವಿಫಲ :
ಸರ್ಕಾರಿ ಶಾಲೆಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಸೋಂಕು ತಗುಲಿದೆ ಎಂಬುವುದನ್ನು ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಬಹಿರಂಗ ಪಡಿಸಿದ ಕಾರಣ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಕೊರೊನಾ ಪರೀಕ್ಷೆ ಮಾಡುತ್ತಾರೆ ಎಂದು ಹೆದರಿ ಖಾಸಗಿ ಆಸ್ಪತ್ರೆಗಳತ್ತ ಜನ ಮುಖ ಮಾಡುತ್ತಿದ್ದಾರೆ. ಸಾಮಾನ್ಯ ಜ್ವರ ಹಾಗೂ ಕೊರೊನಾ ಲಕ್ಷಣಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿಕೋವಿಡ್ ಪರೀಕ್ಷೆಮಾಡಿಸಲಾಗುತ್ತಿದೆ. ಶೀತದ ವಾತಾವರಣ ಇರುವುದರಿಂದ ನೆಗಡಿ, ಕೆಮ್ಮು, ಜ್ವರ,ಮೈಕೈ ನೋವು ಇರುವ ರೋಗಿಗಳಿಗೆಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ರೀತಿ ಭಯಪಡುವಅವಶ್ಯಕತೆಯಿಲ್ಲ. ಶೀತಬಾಧೆ ಏನಾದರೂಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. – ಡಾ.ಎ. ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ
ಗ್ರಾಮೀಣ ಭಾಗದ ಪ್ರದೇಶದ ಜನರಿಗೆ ಕೊರೊನಾ ಸೋಂಕಿನಮಾಹಿತಿ ಗೊತ್ತಾಗದೆ ಸೋಂಕಿತರಸಾಮಾನ್ಯ ಜನರ ಜೊತೆ ಓಡಾಡಿ ಮತ್ತಷ್ಟು ಸೋಂಕು ಹರಡಲು ಕಾರಣವಾಗುತ್ತಿದೆ.ಶೀತದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಗ್ರಾಮೀಣ ಜನರಿಗೆ ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯಇಲಾಖೆ ಅವರೊಂದಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕು. – ನಾರಾಯಣಸ್ವಾಮಿ, ನಾಗರಿಕ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.