ಕೋವಿಡ್ ಸಂಚಾರ ಕ್ಲಿನಿಕ್ ಕಾರ್ಯಾರಂಭ
Team Udayavani, May 25, 2021, 8:39 PM IST
ದೊಡ್ಡಬಳ್ಳಾಪುರ: ಕೋವಿಡ್ ಸಂಚಾರಿಕ್ಲಿನಿಕ್ ವ್ಯವಸ್ಥೆ ಮಾಡಲಾಗಿದ್ದು, ನಗರದಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಕೋವಿಡ್ ಸಂಚಾರಿ ಕ್ಲಿನಿಕ್‌ನ ವಾಹನಗಳಿಗೆ ಚಾಲನೆ ನೀಡಿದರು.
ಉಪವಿಭಾಗಾಧಿಕಾರಿ ಅರುಳ್‌ಕುಮಾರ್ ಮಾತನಾಡಿ, ವೈದ್ಯರ ನಡೆಗ್ರಾಮಗಳಿಗೆ ಯೋಜನೆ ಆರಂಭಿಸಿದ್ದು,ಇಡೀ ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯಲ್ಲಿಮೊದಲ ಬಾರಿ ಕೋವಿಡ್ ಸಂಚಾರಿಕ್ಲಿನಿಕ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಗಳಲ್ಲಿ 15 ವಾಹನಗಳು ಚಿಕಿತ್ಸೆ ನೀಡುತ್ತಿವೆ.ನಗರದಲ್ಲಿ ಆರೋಗ್ಯ ಸಿಬ್ಬಂದಿ 5 ಆಟೋಕ್ಲಿನಿಕ್‌ಗಳಲ್ಲಿ ಪ್ರತಿ ವಾರ್ಡ್‌ಗಳಿಗೆ ತೆರಳಿಚಿಕಿತ್ಸೆ ನೀಡಲಿದ್ದಾರೆ ಎಂದರು
.ಶಾಸಕ ಟಿ.ವೆಂಕಟರಮಣಯ್ಯಮಾತನಾಡಿ, ಕೋವಿಡ್ ಲಕ್ಷಣಗಳುಕಾಣಿಸಿಕೊಂಡರೆ ನಿರ್ಲಕ್ಷ Â ವಹಿಸದೇಮೊದಲು ಸರ್ಕಾರಿ ಆಸ್ಪತ್ರೆಗಳ ವೈದ್ಯರಲ್ಲಿಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಸರ್ಕಾರಆಸ್ಪತ್ರೆಯ ಸಿಬ್ಬಂದಿ ಅರಿವು ಮೂಡಿಸಬೇಕಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನಜನಸಂದಣಿ ಸೇರುವ ಸಂಭವವಿರುವುದರಿಂದ ಕೋವಿಡ್ ನಿಯಮಗಳುಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಶಾಸಕರ ಅನುದಾನದಲ್ಲಿ ಸರ್ಕಾರಿಆಸ್ಪತ್ರೆಗೆ6ಸ್ಟ್ರೆಚರ್‌ಗಳನ್ನು ನೀಡಲಾಯಿತು. ತಹಶೀಲ್ದಾರ್ ಟಿ.ಎಸ್.ಶಿವರಾಜ್, ತಾಲೂಕು ಆರೋಗ್ಯಾಧಿಕಾರಿಡಾ.ಪರಮೇಶ್ವರ, ಆಸ್ಪತ್ರೆಯ ವೈದ್ಯಡಾ.ಮಂಜುನಾಥ್, ನಗರಸಭೆ ಪೌರಾಯುಕ್ತ ರಮೇಶ್‌ಎಸ್.ಸುಣಗಾರ್‌ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.