ಬೆಂಗಳೂರು ವಿಮಾನ ನಿಲ್ದಾಣದ ನೂತನ ರನ್‌ವೇ ಕಾರ್ಯಾಚರಣೆ ಆರಂಭ
Team Udayavani, Dec 7, 2019, 12:10 PM IST
ದೇವನಹಳ್ಳಿ : ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. 4000 ಮೀಟರ್ ಉದ್ದದ ಮತ್ತು 45 ಮೀಟರ್ ಅಗಲದ ಏರ್‌ಸ್ಟ್ರಿಪ್ ಮೇಲೆ ಮೊದಲ ವಿಮಾನ ಮೇಲೆ ಹಾರುವುದರೊಂದಿಗೆ ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣ ನೂತನ ದಕ್ಷಿಣ ರನ್‌ವೇ ಕಾರ್ಯಾಚರಣೆಗ ಆರಂಭಿಸಿದೆ.
ದೇಶದಲ್ಲೇ ಮೊದಲು: ಈ ಸ್ವತಂತ್ರ, ಸಮಾನಾಂತರ ರನ್‌ವೇಗಳೊಂದಿಗೆ ಕಾರ್ಯಾಚರಣೆ ನಡೆಸುವ ದೇಶದ ಮೊಟ್ಟ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. ಸಮನಾಂತರ ರನ್‌ವೇಗಳಿಂದ ಎರಡೂ ರನ್‌ವೇಗಳಲ್ಲಿ ಒಂದೇ ಸಮಯದಲ್ಲಿ ವಿಮಾನಗಳು ಮೇಲಕ್ಕೆ ಹಾರುವ ಅಥವಾ ಕೆಳಕ್ಕೆ ಇಳಿಯುವ ಕಾರ್ಯಾ ಚರಣೆ ನಡೆಸಲು ಸಾಧ್ಯವಿದೆ.
ಐತಿಹಾಸಿಕ ದಿನ: ನೂತನ ರನ್‌ವೇ ಕಾರ್ಯಾಚರಣೆ ಆರಂಭ ಕುರಿತು ಮಾಹಿತಿ ನೀಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್)ದ ವ್ಯವ ಸ್ಥಾಪಕ ನಿರ್ದೇಶಕರು ಮತ್ತುಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರಿ ಮಾರರ್, ಬೆಂಗ ಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ. ನಮ್ಮ ಮೊದಲ ರನ್‌ವೇ ಹನ್ನೊಂದು ವರ್ಷಗಳ ಹಿಂದೆ ಆರಂಭವಾಗಿದ್ದು, ಕಳೆದ ದಶಕದಲ್ಲಿ ಈ ಪ್ರದೇಶದ ಆರ್ಥಿಕ ಅಭಿವೃದ್ಧಿಯ ಆಧಾರವಾಗಿದೆ. ಭಾರತದಲ್ಲಿ ವಿಮಾನಯಾನ ಉದ್ಯಮ ಅಪಾರ ಬೆಳವಣಿಗೆಗೆ ಸಜ್ಜಾಗಿರುವುದರೊಂದಿಗೆ ಕಾರ್ಯಾ ಚರಣೆಯಲ್ಲಿರುವ ಎರಡು ರನ್‌ವೇಗಳು ಕರ್ನಾಟಕ ಮತ್ತು ಭಾರತದ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಲು ಹಾಗೂ ಈಗಿರುವ ಬೇಡಿಕೆಯನ್ನು ಪೂರೈಸಲಿವೆ ಎಂದರು.
ಹಲವಾರು ಪಾಲುದಾರರ ನಡುವಿನ ಅಸಾಧಾರಣ ಪಾಲುದಾರಿಕೆಯ ಫಲಿತಾಂಶ ಈ ಪ್ರಮುಖ ಮೂಲಸೌಕರ್ಯ ಆರಂಭ ವಾಗುವುದಾಗಿದೆ. ಉನ್ನತ ಮಟ್ಟದ ಮೌಲ್ಟ್ರಿಕರಣ ಮತ್ತು ಪ್ರಯತ್ನಗಳ ಮೂಲಕ ಅಭಿವೃದ್ಧಿಪಡಿಸಲಾದ ಪ್ರಕ್ರಿಯೆಗಳು ಮತ್ತು ಕ್ರಮಗಳ ಅನುಷ್ಠಾನದಿಂದ ಇದು ಸಾಧ್ಯವಾಗಿದೆ. ಬೆಂಗಳೂರು ವಿಮಾನ ನಿಲ್ದಾಣವನ್ನು ಭಾರತದ ನೂತನ ಪ್ರವೇಶ ದ್ವಾರವಾಗಿ ಪರಿವರ್ತಿಸುವ ನಮ್ಮ ದೃಷ್ಟಿಕೋನ ವನ್ನು ನೂತನ ರನ್‌ವೇ ಮತ್ತಷ್ಟು ವಿಸ್ತರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ್ಷಿಣ ರನ್‌ವೇಯಲ್ಲಿ ನಿಗದಿತ ಸಂಖ್ಯೆಯ ವಿಮಾನಗಳ ಕಾರ್ಯಾಚರಣೆ ಆರಂಭವಾಗಲಿದ್ದು, ಹಂತ ಹಂತವಾಗಿ ಕಾರ್ಯಾಚರಣೆಯನ್ನು ಹೆಚ್ಚಿಸಲಾಗುವುದು. ಇದರೊಂದಿಗೆ ಸಾಕಷ್ಟು ಕಡಿಮೆ ಬೆಳಕು ಇದ್ದಾಗಲೂ ಕೂಡ ವಿಮಾನ ಮೇಲಕ್ಕೆ ಹಾರುವ ಮತ್ತು ಇಳಿಯುವ ಅವಕಾಶ ಲಭ್ಯವಾಗಲಿದೆ. ನೂತನ ರನ್‌ವೇಗೆ ಆರ್ ಡಬ್ಲ್ಯುವೈ 09ಆರ್/27ಎಲ್ ಎಂಬ ಕೋಡ್ ನೀಡಲಾಗಿದ್ದು, ಪ್ರಸ್ತುತ ರನ್‌ವೇಗೆ ಈ ಹಿಂದೆ ಇದ್ದ ಆರ್‌ಡಬ್ಲ್ಯುಐ 09/27ರಿಂದ ಆರ್‌ಡಬ್ಲ್ಯುವೈ 09ಎಲ್ /27ಆರ್ ಎಂದು ಪುನರ್ ನಾಮಕರಣ ಮಾಡಲಾಗುವುದು.ಸುರಕ್ಷತೆ, ಅಗ್ರಮಾನ್ಯ ಆದ್ಯತೆಯಾಗಿರುವುದರೊಂದಿಗೆ ಬಿಐಎಎಲ್ ವಿಮಾನಗಳನ್ನು ರಕ್ಷಿಸುವ ಮತ್ತು ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಿದ್ದು, ಇವು ಉನ್ನತ ತಂತ್ರಜ್ಞಾನದ ಉಪಕರಣಗಳೊಂದಿಗೆ ಸಜ್ಜಾಗಿದೆ. ಅತ್ಯಾಧುನಿಕ ಕ್ರ್ಯಾಷ್ ಫೈರ್ ಟೆಂಡರ್‌ಗಳು(ಸಿಎಫ್ಟಿಎಸ್) ಇದ್ದು, ದಕ್ಷಿಣದ ರನ್‌ವೇಯಲ್ಲಿ ಬೆಂಕಿಗೆ ಸಂಬಂಧಿತ ಯಾವುದೇ ತುರ್ತು ಸ್ಥಿತಿಗಳನ್ನು ನಿಭಾಯಿಸಬಹುದಾಗಿದೆ.
ವಿಮಾನ ನಿಲ್ದಾಣದ ಅಗ್ನಿಶಾಮಕ ಟ್ರಕ್ ಗಳು ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಹೊಂದಿದ್ದು, ನವೀನ ಉತ್ಪನ್ನ ವೈಶಿಷ್ಟ್ಯಗಳಿಂದ ಕೂಡಿವೆ. ನೂರಕ್ಕೂ ಹೆಚ್ಚಿನ ಅಗ್ನಿಶಾಮಕ ಸಿಬ್ಬಂದಿಯನ್ನು ಕರ್ನಾಟಕದ ಎಲ್ಲೆಡೆಯಿಂದ ನೇಮಿಸಿಕೊಳ್ಳಲಾಗಿದೆ. ಪರಿಣತ ಅಗ್ನಿಶಾಮಕ ಇಂಜಿನಿಯರ್‌ಗಳನ್ನು ನಾಗಪುರದ ರಾಷ್ಟ್ರೀಯ ಅಗ್ನಿ ಸುರಕ್ಷತೆ ಕಾಲೇಜಿನಿಂದ ಸೇರಿಸಿಕೊಳ್ಳಲಾಗಿದ್ದು, ಅಗ್ನಿಶಾಮಕ ದಳವನ್ನು ದೃಢಗೊಳಿಸಲಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.