ದೇಶದ ಏಳಿಗೆ ಬಿಜೆಪಿಯಿಂದ ಸಾಧ್ಯವಿಲ್ಲ
Team Udayavani, Mar 1, 2021, 12:30 PM IST
ದೇವನಹಳ್ಳಿ: ಬಿಜೆಪಿ ಸರ್ಕಾರದಿಂದ ಈ ದೇಶದ ಏಳಿಗೆ ಸಾಧ್ಯವಿಲ್ಲ. ಕೇವಲ ಸುಳ್ಳು ಆಶ್ವಾಸನೆ, ಭರವಸೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪಾ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ದೇವನಹಳ್ಳಿ, ವಿಜಯಪುರ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ವತಿಯಿಂದಹಮ್ಮಿಕೊಂಡಿದ್ದ ಮಾ.3ರಂದು ನಡೆಯಲಿರುವ ಜನಧ್ವನಿ ಯಾತ್ರೆಯ ಮಹಿಳಾ ಪದಾಧಿಕಾರಿಗಳಸಭೆಯಲ್ಲಿ ಮಾತನಾಡಿ ಅವರು, ಕೇಂದ್ರ ಸರ್ಕಾರ ಶ್ರೀಮಂತರ ಪರವಾದ ಸರ್ಕಾರವಾಗಿದೆ. ಕೆಪಿಸಿಸಿಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಎಲ್ಲ ನಾಯಕರು ಜನಧ್ವನಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಕೇಂದ್ರ ಮತ್ತುರಾಜ್ಯ ಸರ್ಕಾರದ ವೈಫಲ್ಯ ಹಾಗೂ ಬೆಲೆಏರಿಕೆ, ರೈತರ ವಿರುದ್ಧ ಕಾಯ್ದೆಗಳನ್ನು ತಂದಿರುವುದು. ಹೀಗೆಹಲವಾರು ಜನಪರ ಸಮಸ್ಯೆ ಮುಂದಿಟ್ಟುಕೊಂಡುಪಾದಯಾತ್ರೆಯ ಮೂಲಕ ಹೋರಾಟ ಮಾಡುತ್ತಿದ್ದೇವೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಪಿ. ಮುನಿರಾಜು, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ವಿಜಯಪುರ ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ರಾಮಚಂದ್ರಪ್ಪ, ಎಪಿಎಂಸಿ ನಿರ್ದೇಶಕ ಸುಧಾಕರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ,ತಾಪಂ ಅಧ್ಯಕ್ಷೆ ಶಶಿಕಲಾ, ಕೆಪಿಸಿಸಿ ಮಹಿಳಾ ಘಟಕದಕಾರ್ಯದರ್ಶಿ ರಾಧಾ, ದೇವನಹಳ್ಳಿ ಮಹಿಳಾಘಟಕದ ಅಧ್ಯಕ್ಷೆ ಮಮತಾ, ವಿಜಯಪುರ ಮಹಿಳಾಘಟಕದ ಅಧ್ಯಕ್ಷೆ ಮಂಜುಳಾ, ತೂಬಗೆರೆ ಮಹಿಳಾಘಟಕದ ಅಧ್ಯಕ್ಷೆ ಅನಂತಕುಮಾರಿ, ಪುರಸಭಾಧ್ಯಕ್ಷೆರೇಖಾ, ತಾಪಂ ಸದಸ್ಯರಾದ ಚೈತ್ರಾ, ನಂದಿನಿ,ಉಷಾರಾಣಿ, ಹೇಮಲತಾ, ನಾಗವೇಣಿ, ಪ್ರಭಾವತಿಇದ್ದರು.
ಬೂತ್‌ಮಟ್ಟದಲ್ಲಿ ಸಂಘಟಿಸಿ: ಮಹಿಳಾ ಕಾಂಗ್ರೆಸ್ ಅನ್ನು ಮತ್ತಷ್ಟು ಬೂತ್‌ಮಟ್ಟದಲ್ಲಿ ಸಂಘಟಿಸ ಬೇಕು. ಜನಧ್ವನಿ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನಮಹಿಳೆಯರು ಭಾಗವಹಿಸಬೇಕು. 101 ಕುಂಭಕಳಸಗಳೊಂದಿಗೆ ನಾಯಕರನ್ನು ಸ್ವಾಗತಿಸಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆ ಮತ್ತು ಜನರಬಗ್ಗೆ ಕಾಳಜಿ ಇಲ್ಲದ ಸರ್ಕಾರವಾಗಿದೆ. ಮಾಜಿಪ್ರಧಾನಿ ಇಂದಿರಾಗಾಂಧಿ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ್ದಾರೆ. ಅಂತಹ ಪಕ್ಷದಲ್ಲಿನಾವಿದ್ದೇವೆ ಎಂದು ಕೆಪಿಸಿಸಿ ಮಹಿಳಾ ಘಟಕದರಾಜ್ಯಾಧ್ಯಕ್ಷೆ ಪುಷ್ಪಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.