ಕೋವಿಡ್‌  ಪರಿಸ್ಥಿತಿ ಎದುರಿಸಲು ನಿರಂತರ ಶ್ರಮ


Team Udayavani, Jun 2, 2021, 4:03 PM IST

Constant effort to deal with the covid situation

ಡಿ.ಶ್ರೀಕಾಂತ್

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮೆಡಿಕಲ್‌ ಕಾಲೇಜು ಇಲ್ಲದಿದ್ದರೂ ಸುಸಜ್ಜಿತ ವಸತಿ ನಿಲಯಗಳನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಾಗಿ ಪರಿವರ್ತಿಸಲಾಗಿದೆ.

ಅಧಿಕಾರಿಗಳೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಕೋವಿಡ್‌ನಿಯಂತ್ರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದೇವೆಎನ್ನುವ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ,ಕೊರೊನಾಕುರಿತಾಗಿ “ಉದಯವಾಣಿ’ಯ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ…

 ಕ್ಷೇತ್ರದಲ್ಲಿಕೋವಿಡ್‌ ಪರಿಸ್ಥಿತಿ ಹೇಗಿದೆ?

ಕೋವಿಡ್‌ ಪರಿಸ್ಥಿತಿ ಕ್ಲಿಷ್ಟಕರವಾಗಿದೆ. ಆದರೆ, ಅಂಕಿ-ಅಂಶಗಳನ್ನು ನೋಡಿದರೆ ಮೊದಲಿಗಿಂತಲೂ ಸುಧಾರಿಸುತ್ತಿದೆ. ತಾಲೂಕಿನಲ್ಲಿ ಭಾನುವಾರ 144ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಮರಣಹೊಂದಿದ್ದಾರೆ.ಜಿಲ್ಲೆಯಲ್ಲಿಯೂಸೋಂಕಿತರಪ್ರಮಾಣ ಕಡಿಮೆಯಾಗುತ್ತಿದೆ. ಆದರೆ,ಜನರುನಿರ್ಲಕ್ಷ  ವಹಿಸಿದರೆಸೋಂಕಿತರಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

 ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿನಿಮ್ಮ ಪಾತ್ರ?

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಯಾವುದೇಮೆಡಿಕಲ್‌ ಕಾಲೇಜುಗಳಿಲ್ಲ. ಹಿಂದಿನ ಕಾಂಗ್ರೆಸ್‌ಸರ್ಕಾರವಿದ್ದಾಗ ತಾಯಿ- ಮಗುಆಸ್ಪತ್ರೆ ಆರಂಭಿಸಲಾಗಿದ್ದು,ಕೋವಿಡ್‌ ಚಿಕಿತ್ಸೆ ಉತ್ತಮವಾಗಿ ನಡೆಯುತ್ತಿದೆ.ಇದರೊಂದಿಗೆ ತಾಲೂಕಿನ ಇಸ್ತೂರು, ಮಾಡೇಶ್ವರ,ಬಚ್ಚಹಳ್ಳಿಯ ವಸತಿ ಶಾಲೆಗಳನ್ನು ಕೋವಿಡ್‌ ಕೇರ್‌ಸೆಂಟರ್‌ಗಳಾಗಿ ಪರಿವರ್ತಿಸಲಾಗಿದೆ. ವಿವಿಧಕೈಗಾರಿಕೋದ್ಯಮಿಗಳು ಹಾಗೂ ದಾನಿಗಳನ್ನುಸಂಪರ್ಕಿಸಿ, ಈ ವಸತಿ ನಿಲಯಗಳಿಗೆ ಅಗತ್ಯವಿರುವ ಆಮ್ಲಜನಕ ಸಾಂದ್ರಕಗಳು,ಬೆಡ್‌ಗಳು ಸೇರಿದಂತೆ ಮೂಲ ಸೌಲಭ್ಯಗಳನ್ನು ಪಡೆಯಲಾಗಿದೆ. ನಗರದಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 100ಆಮ್ಲಜನಕ,ಬೆಡ್‌ ವ್ಯವಸ್ಥೆಇರುವ ಆಸ್ಪತ್ರೆಗೆ ಕಂದಾಯ ಸಚಿವಆರ್‌.ಆಶೋಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೋವಿಡ್‌ ನಿಯಂತ್ರಣ ಕುರಿತಂತೆ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ.

ಕೋವಿಡ್‌ಕೇರ್‌ ಸೆಂಟರ್‌ಗಳಿಗೆ ಭೇಟಿ ನೀಡಲಾಗುತ್ತಿದೆ.ತಾಲೂಕಿನಲ್ಲಿ ಸಿಟಿ ಸ್ಕ್ಯಾನ್‌ ಪ್ರಯೋಗಾಲಯದಸ್ಥಾಪನೆಗೆ 1.25 ಕೋಟಿ ರೂ., ಯೋಜನೆರೂಪಿಸಲಾಗಿದೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆವಿವಿಧ ಸೌಲಭ್ಯಗಳನ್ನು ವೈಯಕ್ತಿಕವಾಗಿ ನೀಡಿದ್ದೇನೆ.ಪ್ರತಿದಿನ ಕ್ಷೇತ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳು, ಆರೋಗ್ಯ ಸಿಬ್ಬಂದಿಯೊಂದಿಗೆ ಚರ್ಚಿಸಿ ಮಾಹಿತಿ ಪಡೆಯುತ್ತಿದ್ದೇನೆ.ಗ್ರಾಮಾಂತರ ಪ್ರದೇಶಗಳಲ್ಲಿಯೂಕೋವಿಡ್‌ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನುಕೈಗೊಳ್ಳಲು ಆದ್ಯತೆ ನೀಡಲಾಗುತ್ತಿದೆ.

ಕೋವಿಡ್‌ ಸಂಕಷ್ಟ ನಿಯಂತ್ರಿಸಲು ಪರಿಹಾರಸಿಕ್ಕಿದೆಯೇ?

ಕೊರೊನಾ 2ನೇ ಅಲೆಯ ಆರಂಭದಲ್ಲಿ ತೀವ್ರಕಷ್ಟವಾಯಿತು. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಕೈಗಾರಿಕಾಪ್ರದೇಶದ ಆಮ್ಲಜನಕ ಉತ್ಪಾದಕರ ಸಭೆ ಕರೆದುತಾಲೂಕಿಗೆ ಮೊದಲ ಆದ್ಯತೆ ನೀಡುವಂತೆ ಸೂಚನೆನೀಡಿದ್ದೇವು. ತಾಲೂಕಿನಲ್ಲಿ ಆಮ್ಲಜನಕದ ಕೊರತೆನೀಗಿದೆ. ಲಸಿಕೆ ಸರಬರಾಜುದಾರರನ್ನು ಸಂಪರ್ಕಿಸಿ,ತಾಲೂಕಿಗೆ ಅಗತ್ಯವಿರುವಷ್ಟು ಲಸಿಕೆ ಸರಬರಾಜುಮಾಡಲು ಮನವಿ ಮಾಡಲಾಗಿದೆ. ಈಗ ಲಸಿಕೆಸಮಸ್ಯೆ ಬಹುಪಾಲು ಬಗೆಹರಿದಿದೆ. ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಇಂದಿರಾ ಕ್ಯಾಂಟಿನ್‌ನಲ್ಲಿ ಊಟಕ್ಕೆವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ, ವಿವಿಧಕೈಗಾರಿಕೋದ್ಯಮಿಗಳು ಹಾಗೂ ದಾನಿಗಳ ಸಹಕಾರದೊಂದಿಗೆ ನಿತ್ಯ ಬೆಳಗ್ಗೆ ಹಾಗೂ ಮಧ್ಯಾಹ್ನ ಊಟದವ್ಯವಸ್ಥೆ ಮಾಡಲಾಗುತ್ತಿದೆ.

ವೈದ್ಯರು ಕೋವಿಡ್‌ಸಂಚಾರಿ ಕ್ಲಿನಿಕ್‌ ಮೂಲಕ ಪ್ರತಿ ಗ್ರಾಮಗಳಿಗೆ ಭೇಟಿನೀಡಿ, ಕೋವಿಡ್‌ ಸೋಂಕಿತರಮಾಹಿತಿಪಡೆದು ಚಿಕಿತ್ಸೆನೀಡುತ್ತಿದ್ದಾರೆ. ಕೊರೊನಾ ವಾರಿಯರ್ಗಳಿಗಾಗಿ 50ಬೆಡ್‌ಗಳ ಪ್ರತ್ಯೇಕ ಕೋವಿಡ್‌ ಕೇರ್‌ ಸೆಂಟರ್‌ಆರಂಭಿಸಲಾಗಿದೆ.

 ಲಾಕ್‌ಡೌನ್‌ ವಿಸ್ತರಣೆ ಅಗತ್ಯವಿದೆಯೇ?

ಕೇಂದ್ರ ಸರ್ಕಾರ ಜೂನ್‌ 30ರವರೆಗೆ ಲಾಕ್‌ಡೌನ್‌ವಿಸ್ತರಿಸಲು ರಾಜ್ಯಗಳಿಗೆ ಸೂಚಿಸಿದೆ. ಆದರೆ, ರಾಜ್ಯಸರ್ಕಾರಇನ್ನೂಯಾವುದೇತೀರ್ಮಾನಕೈಗೊಂಡಿಲ್ಲ.ಜನರ ಹಿತದೃಷ್ಟಿಯಿಂದ ಪರಿಸ್ಥಿತಿ ಅವಲೋಕಿಸಿ,ತೀರ್ಮಾನಿಸುವುದು ಸೂಕ್ತ.z ಕೋವಿಡ್‌ ವಿಚಾರದಲ್ಲಿ ಶಾಸಕರಾಗಿ, ಒಬ್ಬವ್ಯಕ್ತಿಯಾಗಿ ನಿಮ್ಮ ಸಲಹೆ ಏನು?ನೇಕಾರರು, ಕೂಲಿ ಕಾರ್ಮಿಕರ ಜೀವನ ಭದ್ರತೆಗೆಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕೇಂದ್ರ ಹಾಗೂರಾಜ್ಯ ಸರ್ಕಾರಗಳು ಕೋವಿಡ್‌ 2ನೇ ಅಲೆ ಆರಂಭದಲ್ಲಿ ಮುಂಜಾಗ್ರತೆ ತೆಗೆದುಕೊಂಡಿಲ್ಲ. ಈ ಬಗ್ಗೆ ತಜ್ಞರಸಲಹೆಗಳನ್ನು ಪರಿಗಣಿಸಿಲ್ಲ. ಸಾರ್ವಜನಿಕರುಯಾವುದನ್ನೂ ಸಹ ನಿರ್ಲಕ್ಷ್ಯ ಮಾಡದೇ ಆರಂಭದಲ್ಲಿಯೇ ತಪಾಸಣೆ ಮಾಡಿಸಿಕೊಂಡು ಅಗತ್ಯವಿದ್ದರೆಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಪಡೆದರೆ ಗುಣಮುಖರಾಗಬಹುದು. ಈಗ 3ನೇಅಲೆಯ ಆತಂಕ ಪ್ರಾರಂಭವಾಗಿದೆ. ಇನ್ನು ಕನಿಷ್ಟಆರು ತಿಂಗಳು ಜನರು ಕಟ್ಟುನಿಟ್ಟಾಗಿ ಕೋವಿಡ್‌ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಗುಂಪುಗುಂಪಾಗಿ ಜನ ಸೇರದೇ, ಮಾಸ್ಕ್ ಧರಿಸಿ ವ್ಯಕ್ತಿಗತಅಂತರ ಕಾಪಾಡಿಕೊಂಡು ಕೋವಿಡ್‌ ಸೋಂಕುಹರಡುವುದನ್ನು ತಡೆಯಬೇಕಿದೆ.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.