ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ ನಿರ್ಮಾಣ


Team Udayavani, Mar 10, 2022, 12:22 PM IST

ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ ನಿರ್ಮಾಣ

ದೇವನಹಳ್ಳಿ: ಕಾಡ್ಗಿಚ್ಚು ಇಡೀ ಜಗತ್ತನ್ನೇ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಇತ್ತೀಚೆಗೆ ರಾಜ್ಯದ ವಿವಿಧ ಕಾಡಿನಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಹಬ್ಬುತ್ತಿದ್ದು, ಬೆಂಕಿಅನಾಹುತ ಜಿಲ್ಲೆಯಲ್ಲಿ ಆಗಬಾರದೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಬೆಂಕಿರೇಖೆ ನಿರ್ಮಿಸುವುದರ ಮೂಲಕ ಮುನ್ನೆಚ್ಚರಿಕಾ ಕ್ರಮ ವಹಿಸಿದೆ.

ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಕಡೆಗಳಲ್ಲಿ ಕಳೆದ ಮೂರ್‍ನಾಲ್ಕು ವರ್ಷದಿಂದಲೇ ಜೆಸಿಬಿ ಯಂತ್ರದ ಮೂಲಕ ಬೆಂಕಿರೇಖೆ ಅಳವಡಿಸಿ, ಬೆಂಕಿಯನ್ನು ನಂದಿಸುವುದಕ್ಕೆ ಅನುಕೂಲಕರ ವಾತಾವರಣಸೃಷ್ಟಿಸಲಾಗಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿನ ಅರಣ್ಯಪ್ರದೇಶದಲ್ಲಿ ಬೆಂಕಿರೇಖೆ ನಿರ್ಮಾಣ ಮಾಡಲಾಗಿದೆ. ತಾಲೂಕಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಪ್ರಾರಂಭವಾಗುವ ಸಂದರ್ಭದಲ್ಲಿ 540 ಎಕರೆವಿಮಾನ ಜಾಗವನ್ನು ನಿಲ್ದಾಣಕ್ಕಾಗಿ ವಶಕ್ಕೆಪಡೆದುಕೊಳ್ಳಲಾಗಿತ್ತು. ಅದಕ್ಕೆ ಬದಲಿ ಜಾಗವನ್ನುದೊಡ್ಡಬಳ್ಳಾಪುರದಲ್ಲಿ 540 ಎಕರೆ ಸರ್ಕಾರ ಕಾಡು ಬೆಳೆಸಲು ಜಾಗ ನೀಡಿದೆ. ಜಿಲ್ಲೆಯ ಎಲ್ಲೆಡೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಬಾರದೆಂಬ ಉದ್ದೇಶ ಹೊಂದಿದ್ದು, ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ.

ಬೆಂಕಿ ಹರಡುವುದು ಹೇಗೆ?: ಬೆಂಕಿ ರೇಖೆ ನಿರ್ಮಿಸುವುದರಿಂದ ಅನಾಹುತ ತಡೆಯಬಹುದು. ಕಾಡ್ಗಿಚ್ಚು ಆವರಿಸದ ಕೂಡಲೇ ಬೆಂಕಿ ನಂದಿಸಲು ಅನುಕೂಲವಾಗುವಂತೆ ರೇಖೆ ನಿರ್ಮಿಸಲಾಗಿದೆ. ಮಾನವ ಕಾಡಿನ ಅಂಚಿನಲ್ಲಿ ಒಡನಾಟ ಇದ್ದಾಗ ಬೀಡಿ, ಸಿಗರೇಟ್‌ ಸೇದಿಬಿಸಾಡುವುದು, ಅಕ್ರಮವಾಗಿ ಅರಣ್ಯ ಪ್ರವೇಶಿಸಿಮೋಜು - ಮಸ್ತಿ ಸಂದರ್ಭದಲ್ಲಿ ಅಡುಗೆ ಮಾಡಿಕೊಳ್ಳುವುದು. ಬೇಡದ ಗಿಡಗಳ ನಾಶಕ್ಕೆ ಬೆಂಕಿ ಹಚ್ಚುವುದರಿಂದ ಅರಣ್ಯಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ.

ಅರಣ್ಯೇತರ ಪ್ರದೇಶಗಳಲ್ಲೂ ಬೆಂಕಿ: ನೆಲಮಂಗಲ ತಾಲೂಕಿನ ಬಳಗೆರೆ ಸುತ್ತಮುತ್ತಲಿನ ಅರಣ್ಯ ಪ್ರದೇಶ, ಕೊರಟಗೆರೆ ಸುತ್ತಮುತ್ತಲಿನ ಅರಣ್ಯ ಪ್ರದೇಶ, ಕೊರಟಗೆರೆಮತ್ತು ನೆಲಮಂಗಲ ತಾಲೂಕಿನ ಗಡಿ ಅಂಚಿನಲ್ಲಿ ಮಾಗಡಿಮತ್ತು ನೆಲಮಂಗಲ ಗಡಿಪ್ರದೇಶ, ದೇವನಹಳ್ಳಿತಾಲೂಕಿನ ಕೊಯಿರಾ ಬೆಟ್ಟ, ಕೋಡಗುರ್ಕಿ, ಕಾರಹಳ್ಳಿಸಮೀಪದಲ್ಲಿರುವ ಪಂಚಗಿರಿಧಾಮಗಳಲ್ಲಿ ಒಂದಾದದಿಬ್ಬಗಿರಿ ಬೆಟ್ಟ ನಾರಾಯಣಪುರ, ಬೆಟ್ಟಕೋಟೆ,ರಾಯಸಂದ್ರ, ಕೋರಮಂಗಲ ಅರಣ್ಯೇತರಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗಿನದಿನಗಳಲ್ಲಿ ಕೊಯುರಾ ಬೆಟ್ಟದಲ್ಲಿ, ದೊಡ್ಡಬಳ್ಳಾಪುರತಾಲೂಕಿನ ಸಾಸಲು ಹೋಬಳಿ ಅರಣ್ಯ ಪ್ರದೇಶದಸುತ್ತಮುತ್ತಲಿನಲ್ಲೂ ಕಾಡ್ಗಿಚ್ಚು ಹರಡುತ್ತದೆ.

ನೀಲಗಿರಿ ಮರಗಳ ತೆರವು: ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ನೀಲಗಿರಿ ಮರಗಳೇ ಕಾಡಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಈ ಮರಗಳ ನೆರಳಿನಲ್ಲಿ ಯಾವುದೇ ಗಿಡಮರ ಬೆಳೆಯುವುದಿಲ್ಲ. ಭೂಮಿ ಯೊಳಗಿನ ನೀರಿನ ಅಂಶವನ್ನುಅತೀ ಹೆಚ್ಚು ಪ್ರಮಾಣದಲ್ಲಿ ಹೀರಿಕೊಳ್ಳುವ ಮರಇವಾಗಿವೆ. ಅಲ್ಲದೆ, ನೀಲಗಿರಿ ಮರಗಳು ಬೆಂಕಿ ಬಿದ್ದಂತಹ ಸಮಯದಲ್ಲಿ ಕಾಡಿಗೆ ಬೆಂಕಿ ವ್ಯಾಪಿಸುವುದಕ್ಕೆಸಹಕಾರಿಯಾಗುವುದಲ್ಲದೆ, ಶೀಘ್ರಗತಿಯಲ್ಲಿ ಬೆಂಕಿಯಕೆನ್ನಾಲಿಗೆ ಅರಣ್ಯಕ್ಕೆ ವ್ಯಾಪಿಸುತ್ತದೆ. ಹೀಗಾಗಿ ನೀಲಗಿರಿಮರ ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.

ಕಟ್ಟುನಿಟ್ಟಿನ ಕ್ರಮವಹಿಸಿ :

ಕಾಡ್ಗಿಚ್ಚನ್ನು ನಂದಿಸಲು ಅರಣ್ಯ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆಗೆ ಬಹಳ ಸಮಯಬೇಕಾಗುವುದರಿಂದ ಅರಣ್ಯ ಇಲಾಖೆಯು ಜಿಲ್ಲೆಯಲ್ಲಿನ ಪ್ರಗತಿಪರಸಂಘ, ಸಂಸ್ಥೆಗಳೊಂದಿಗೆ ಚರ್ಚಿಸಿ ಮುಂಗಾರಿನ ನಂತರ ಹೊಸ ಗಿಡನೆಡಲು ಆಹ್ವಾನಿಸಬೇಕು. ಅಗತ್ಯವಿರುವ ನೀರು, ಗೊಬ್ಬರಕಾಲಕಾಲಕ್ಕೆ ಒದಗಿಸಬೇಕು. ಪರಿಸರ ಕಾಳಾಜಿ ಇರುವರನ್ನು ಗುರುತಿಸಿ ಗುರುತಿನ ಚೀಟಿ ನೀಡುವ ವ್ಯವಸ್ಥೆ ಮಾಡಬೇಕು. ಕಳೆದಹಲವು ವರ್ಷಗಳಿಂದಲೂ ಅರಣ್ಯ ಇಲಾಖೆ ಸಿಬ್ಬಂದಿಗಳೇಅನಧಿಕೃತವಾಗಿ ಹಣ ಪಡೆದು ಮೋಜು-ಮಸ್ತಿಗೆ ಮತ್ತು ವನ್ಯಮೃಗಗಳ ಬೇಟೆಗೆ ಅವಕಾಶ ನೀಡುವುದು ಕಂಡುಬಂದಿದೆ.ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಪರಿಸರ ಪ್ರೇಮಿ ಮಂಜುನಾಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಅರಣ್ಯ ಪ್ರದೇಶಗಳು

ತಾಲೂಕು ಅರಣ್ಯ ಪ್ರದೇಶ

(ಹೆಕ್ಟೇರ್‌ಗಳಲ್ಲಿ )

ದೇವನಹಳ್ಳಿ / 2939.649

ದೊಡ್ಡಬಳ್ಳಾಪುರ / 8774.878

ನೆಲಮಂಗಲ / 4309.559

ಹೊಸಕೋಟೆ / 3600.367

ಜಿಲ್ಲೆಯಲ್ಲಿ ಒಟ್ಟು ಅರಣ್ಯ ಪ್ರದೇಶದ

ವಿಸ್ತೀರ್ಣ 19624.453 ಹೆಕ್ಟೇರ್‌ ಇದೆ.

ಅರಣ್ಯ ಇಲಾಖೆ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕಾಡಿಗೆ ಬೆಂಕಿತಗುಲದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ವಿದೇಶಗಳಲ್ಲಿ ಬೆಂಕಿ ನಂದಿಸಲುಹೆಲಿಕಾಪ್ಟರ್‌ ಬಳಸುತ್ತಾರೆ. ಹೊಸ ಮಾದರಿಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಬೆಂಕಿಯಿಂದ ಪರಿಸರ ನಾಶವಾದರೆ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ.ಚಿಕ್ಕೇಗೌಡ. ಸಾಮಾಜಿಕ ಕಾರ್ಯಕರ್ತ, ಕೊಯಿರಾ

ಜಿಲ್ಲೆಯಲ್ಲಿ ಕಾಡ್ಗಿಚ್ಚು ತಡೆಗೆ ಬೆಂಕಿರೇಖೆ ನಿರ್ಮಾಣ ಮಾಡಲಾಗುತ್ತಿದೆ.ಬೆಂಕಿ ಆರಿಸಲು ಸಿಬ್ಬಂದಿ ನೇಮಿಸಲಾಗಿದೆ.ಜನರಿಗೆ ಬೆಂಕಿ ಅನಾಹುತ ಬಗ್ಗೆ ಅರಿವುಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಸುಮಿತ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ

 

ಎಸ್‌.ಮಹೇಶ್‌

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Road Mishap ಬೈಕ್‌ ಡಿಕ್ಕಿ: ಪಾದಚಾರಿ ಸಾವು

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

14-ragi-crop

Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.