ಶ್ರೀರಾಮ ಮಂದಿರ ನಿರ್ಮಾಣ; ಕರ ಸೇವಕರ ಶಕ್ತಿ ಪ್ರದರ್ಶನಕ್ಕೆ ಫಲ
Team Udayavani, Aug 6, 2020, 10:41 AM IST
ನೆಲಮಂಗಲ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಲಕ್ಷಾಂತರ ಕರಸೇವಕರು ಭಜರಂಗಿಗಳಂತೆ ಶಕ್ತಿ ಪ್ರದರ್ಶನ ಮಾಡಿದ ಫಲವಾಗಿ ಭವಿಷ್ಯದ ಕನಸು ನನಸಾಗಿದೆ ಎಂದು ಭಜರಂಗದಳ ಜಿಲ್ಲಾ ಸಹ ಸಂಯೋಜಕ ಶಶಿ ಕಿರಣ್ ಅಭಿಪ್ರಾಯಪಟ್ಟರು. ತಾಲೂಕಿನ ವಿವರ್ ಕಾಲೋನಿಯಲ್ಲಿ ಶ್ರೀ ರಾಮಾಂಜನೇಯ ಸೇವಾ ಸಮಿತಿ, ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ರಾಮಾಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಕರಸೇವಕರಿಗೆ ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಶ್ರೀರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷ ಚನ್ನ ರಾಜು ಮಾತನಾಡಿ, ನಮ್ಮ ದೇವಾಲಯದಿಂದ 1991ರಲ್ಲಿ ತಾಲೂಕಿನ ಪುಣ್ಯಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಿ ಇಟ್ಟಿಗೆ ಗಳ ಪೂಜೆ ಮಾಡಿಸಿ ಕಳುಹಿಸಿದ್ದೆವು. ಅದೇ ಸಂದರ್ಭ ದಲ್ಲಿಯೇ ಜ್ಯೋತಿಯಾತ್ರೆ ಸಹ ದೇವಾಲಯದಿಂದ ಆರಂಭ ಮಾಡಲಾಗಿತ್ತು ಎಂದು ಮೆಲುಕು ಹಾಕಿದರು. ಕರಸೇವಕರಿಗೆ ಸನ್ಮಾನ: ಅಯೋಧ್ಯೆ ಹೋರಾಟದಲ್ಲಿ ಕರಸೇವಕರಾಗಿ ಹೋರಾಟ ಮಾಡಿದ್ದ ತಾಲೂಕಿನ ಮೃತ್ಯುಂಜಯ, ಶಿವಾಜಿರಾವ್ ಸಿಂಧ್ಯೆ, ಜಗದೀಶ್ ಪ್ರಸಾದ್, ವರದರಾವ್‌ಸ್ವಾಮಿ, ಲಕ್ಷ್ಮೀನರಸಿಂಹಯ್ಯ ರವರಿಗೆ ಭಜರಂಗದಳ ಹಾಗೂ ಬಿಜೆಪಿ ತಾಲೂಕು ಘಟಕದಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಸಿಹಿ ಹಂಚಿ ಸಂಭ್ರಮ: ತಾಲೂಕಿನ ಹಿಂದೂಪರ ಕಾರ್ಯಕರ್ತರು ರಾಮಾಂಜನೇಯ ಸ್ವಾಮಿ ದೇವಾ ಲಯಕ್ಕೆ ಪೂಜೆ ಸಲ್ಲಿಸಿ ಘೋಷಣೆ ಕೂಗಿ ಸಿಹಿ ಹಂಚಿ
ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಭಜರಂಗದಳದ ಜಿಲ್ಲಾ ಸಹ ಸಂಯೋಜಕ್ ಶಶಿಕಿರಣ್, ಮಾಧ್ಯಮ ಪ್ರಮುಖ್ ಪವನ್‌ಕುಮಾರ್, ಅಖಂಡ ಪ್ರಮುಖ್ ಸ್ನೇಕ್ ರಾಜು, ಶ್ರೀ ರಾಮಾಂಜನೇಯ ಸ್ವಾಮಿ ಸೇವಾ ಸಮಿತಿ ಸದಸ್ಯ ರಾದ ಕೃಷ್ಣಪ್ಪ, ರಮೇಶ್, ರಾಮಕೃಷ್ಣಪ್ಪ, ಬಿಜೆಪಿ ಜಿಲ್ಲಾ ಎಸ್ಸಿ ಎಸ್ಟಿ ಮೋರ್ಚಾದ ಅಧ್ಯಕ್ಷ ಎಂ.ವಿರಾಮು, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನಗರಸಭೆ ಸದಸ್ಯ ಗಣೇಶ್, ಜಿ.ವಿ.ಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ, ಮುಖಂಡರಾದ ಪ್ರಕಾಶ್, ಪುನೀತ್, ರುದ್ರೇಶ್, ವಿಜಯಕುಮಾರ್, ಕರ್ನಾಟಕ ಜನಸೈನ್ಯ ರಾಜ್ಯಾಧ್ಯಕ್ಷ ನರಸಿಂಹಯ್ಯ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.