![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jun 7, 2020, 6:30 AM IST
ವಿಜಯಪುರ: ಪ್ರಕೃತಿಯಲ್ಲಿ ಹೆಚ್ಚುತ್ತಿರುವ ಪ್ರಾಕೃತಿಕ ಅಸಮತೋಲನ ಮತ್ತು ಹವಾ ಮಾನ ವೈಪರೀತ್ಯ ನಿವಾರಣೆಗೆ ಕಡ್ಡಾಯವಾಗಿ ಮರಗಿಡಗಳನ್ನು ಬೆಳೆಸಿ ಪರಿಸರ ಸಮೃದ್ಧಿಗೊಳಿಸುವುದು ಅನಿವಾರ್ಯ ಎಂದು ಬಸವ ಕಲ್ಯಾಣಮಠಾಧ್ಯಕ್ಷ ಮಹದೇವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಮೇಲೂರು ಮುಖ್ಯರಸ್ತೆ ಯಲ್ಲಿರುವ ಬಸವ ಕಲ್ಯಾಣಮಠದ ಆವರಣ ದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾ ನೆಹರು ಯುವ ಕೇಂದ್ರ, ರಾಷ್ಟ್ರೀಯ ಯುವ ಯೋಜನೆ, ಬೆಂಗಳೂರಿನ ಕರ್ನಾಟಕ ಗಾಂಧಿಸ್ಮಾರಕ ನಿಧಿ, ಸ್ಪಂದನ ಯುವಜನ ಸೇವಾ ಸಂಘಗಳ ಆಶ್ರಯದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಮತ್ತು ಹುಣ್ಣಿಮೆ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಿನೇ ದಿನೆ ಹೆಚ್ಚುತ್ತಿರುವ ಅರಣ್ಯ ನಾಶದಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಪ್ರಕೃತಿ ವೈಪರೀತ್ಯದಿಂದಾಗಿ ಮಾನವ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿಯಾಗುತ್ತಿದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ಸಮಯದ ಅಭಾವ, ಕೃಷಿ ಭೂಮಿ ಕೊರತೆ, ಅಂತರ್ಜಲ ಮಟ್ಟ ಕುಸಿತ, ಕಿರಿಯರಲ್ಲಿ ಕೃಷಿ ಬಗೆಗಿನ ಅಸಡ್ಡೆಗಳಿಂದಾಗಿ ಮರ ಬೆಳೆಸಲು ಪರಿಸರ ದಿನಾಚರಣೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಸರ್ಕಾರಿ ಸಂಯುಕ್ತ ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ.ಶ್ಯಾಮಸುಂದರ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮ ಜೀವನ ಶೈಲಿಯಾಗಿ ರೂಪಿಸಿಕೊಳ್ಳಬೇಕು ಎಂದರು. ರಾಷ್ಟ್ರೀಯ ಯುವ ಯೋಜನೆ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಶಾಲೆಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾ ಗಬೇಕು ಎಂದರು. ತಾಲೂಕು ಡಿ.ಕೆ.ಅಭಿಮಾನಿಗಳ ಸಂಘಟನೆಯ ಯುವ ಘಟಕದ ಅಧ್ಯಕ್ಷ ಎಂ.ಚೇತನ್ ಕುಮಾರ್, ಶ್ರೀ ವೆಂಕಟೇಶ್ವರ ವಾಣಿಜ್ಯ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಎನ್.ಪುಟ್ಟರಾಜು,
ಶಿಕ್ಷಕಿ ಎಂ.ಗಿರಿಜಾಂಬಾ, ಶಿಕ್ಷಕ ಎಸ್.ಎ. ನಾಗೇಶ್, ಜಿಲ್ಲಾ ಎನ್‌ವೈಕೆ ರಾಷ್ಟ್ರೀಯ ಸೇವಾ ಕಾರ್ಯ ಕರ್ತ ಶ್ರೀಧರ್, ಮಹೇಶ್ ಬಾಬು, ಇನ್ನೊಧೀಸನ್, ಚಿಕ್ಕತತ್ತಮಂಗಲ ಎನ್.ಸುದರ್ಶನ್, ಕೆನರಾ ಬ್ಯಾಂಕ್ ನೌಕರ ಪ್ರಶಾಂತ ಕುಮಾರ್, ಪ್ರಜ್ವಲ್, ಶ್ರೀಮಠದ ಕಾರ್ಯ ದರ್ಶಿ ಬಸವರಾಜು, ನಾರಾಯಣಸ್ವಾಮಿ, ನಂಜುಂಡಪ್ಪ ಮತ್ತಿತರರು ಇದ್ದರು. ಶ್ರೀಮಠದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಉಚಿತ ಸಸಿಗಳ ವಿತರಣೆ, ಪರಿಸರ ಗೀತೆಗಳ ಗಾಯನ ನಡೆಯಿತು.
You seem to have an Ad Blocker on.
To continue reading, please turn it off or whitelist Udayavani.