ಕೊವ್ಯಾಕ್ಸಿನ್ ಲಸಿಕೆ ನೀಡದಿದ್ದರೆ ಧರಣಿ: ಶಾಸಕ
Team Udayavani, May 18, 2021, 11:24 AM IST
ದೊಡ್ಡಬಳ್ಳಾಪುರ: ಲಸಿಕೆ ನೀಡುವಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ತಾಲೂಕಿಗೆ ಅಗತ್ಯವಿರುವಷ್ಟು ಕೊವ್ಯಾಕ್ಸಿನ್ ಲಸಿಕೆಯನ್ನು ಪೂರೈಸಿ ಜನರು ಸಾಲುಗಟ್ಟಿ ನಿಲ್ಲುವುದು ತಡೆಗಟ್ಟಿ. ಇಲ್ಲವಾದಲ್ಲಿ ಜನರ ಪರವಾಗಿ ಧರಣಿ ನಡೆಸ ಬೇಕಾಗುತ್ತದೆ ಎಂದು ಶಾಸಕ ಟಿ. ವೆಂಕಟರಮಣಯ್ಯ ಆರೋಗ್ಯ ಇಲಾಖೆಯ ಲಸಿಕಾ ವಿತರಕರಿಗೆ ಎಚ್ಚರಿಸಿದರು.
ನಗರದ ಆಯುಷ್ ಸರ್ಕಾರಿ ಆಸ್ಪತ್ರೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆಎರಡನೇ ಡೋಸ್‌ಗೆ ಕೊವ್ಯಾಕ್ಸಿನ್ ಲಸಿಕೆ ಸಮರ್ಪಕವಾಗಿಲ್ಲದೇ ನಿತ್ಯ ಜನರು ಅಲೆದಾಡುವಂತಾಗಿದೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ಲಸಿಕಾವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಲಸಿಕಾ ಹಾಕುವ ಸಿಬ್ಬಂದಿ ಮಾಹಿತಿ ನೀಡಿ ತಾಲೂಕಿನಲ್ಲಿ ಸುಮಾರು 2,500 ಸಾವಿರ ಜನರಿಗೆ ಕೊವ್ಯಾಕ್ಸಿನ್ ಲಸಿಕೆಯ ಮೊದಲನೇ ಡೋಸ್ ಹಾಕಲಾಗಿದೆ. 500ಮಂದಿಗೆ ಮಾತ್ರವೇ ಎರಡನೇ ಡೋಸ್‌ನೀಡಲಾಗಿದ್ದು, ಲಸಿಕೆ ಲಭ್ಯತೆ ಇಲ್ಲ. ಆದರೆ ಜನರು ನಿತ್ಯ ಬಂದು ಸಿಬ್ಬಂದಿಯನ್ನು ಕೇಳುತ್ತಿರುತ್ತಾರೆ ಎಂದರು.
ಜಿಲ್ಲೆಗೆ ಲಸಿಕಾ ವಿತರಣೆ ಮಾಡುವವರೊಂದಿಗೆ ಮೊಬೈಲ್‌ನಲ್ಲಿ ಮಾತನಾ ಡದ ಶಾಸಕರು, ನೆರೆಯ ಚಿಕ್ಕಬಳ್ಳಾಪುರಕ್ಕೆ ಹೆಚ್ಚಿನ ಲಸಿಕೆ ಹೋಗ್ತಿದ್ದು, ಇಲ್ಲಿನವರು ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದಾರೆ ಎನ್ನುವ ದೂರುಗಳಿವೆ. ನಮ್ಮ ತಾಲೂಕಿಗೆ ಅಗತ್ಯ ವಿರುವಷ್ಟು ಕೊವ್ಯಾಕ್ಸಿನ್ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಲಸಿಕೆ ವಿತರಕರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ತಾಲೂಕಿನ ರೋಗಿಗಳಿಗೆ ಮೊದಲ ಆದ್ಯತೆ ನೀಡಿ :
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ತಾಲೂಕಿನವರು ದಾಖಲಾಗುತ್ತಿದ್ದಾರೆ. ಕೆಲವರು ವೈದ್ಯರ ಮೇಲೆ ಒತ್ತಡ ಹಾಕಿ ಬೆಡ್‌ಗಳನ್ನು ಬೇಕಾದವರಿಗೆ ನೀಡುತ್ತಿದ್ದಾರೆ ಎಂದು ದೂರುಗಳ ಬಂದ ಹಿನ್ನಲೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದರು. ನಮ್ಮ ತಾಲೂಕಿನ ರೋಗಿಗಳಿಗೆ ಮೊದಲ ಆದ್ಯತೆ ನೀಡಬೇಕು.ಆರೋಗ್ಯರಕ್ಷಾ ಸಮಿತಿ ಸೇರಿದಂತೆ ಯಾರೇ ಆಗಲಿ ಅನಗತ್ಯವಾಗಿ ಆಸ್ಪತ್ರೆಯ ಆಡಳಿತ ವಿಚಾರದಲ್ಲಿ ತಲೆ ಹಾಕಬಾರದು. ಬೆಡ್‌ಗಳನ್ನು ನಿಯಮ ಬಾಹಿರವಾಗಿ ಯಾರಿಗೂ ನೀಡಬಾರದು. ಆಡಳಿತ ವೈದ್ಯಾಧಿಕಾರಿಗಳು ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳಾಗದಂತೆ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.