ಮೂವರಲ್ಲಿ ಕೋವಿಡ್ 19 ಸೋಂಕು ಪತ್ತೆ
Team Udayavani, Jun 4, 2020, 7:50 AM IST
ದೇವನಹಳ್ಳಿ: ತಾಲೂಕಿನ ಇಲ್ಲತೊರೆ ಗ್ರಾಮದಲ್ಲಿ ಬುಧವಾರ ಮತ್ತಿಬ್ಬರು ಹಾಗೂ ದೊಡ್ಡ ಬಳ್ಳಾಪುರದ ವ್ಯಕ್ತಿಯೊಬ್ಬರಿಗೆ ಸೇರಿ ಬುಧ ವಾರ ಒಟ್ಟು 3 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವಾರದಲ್ಲಷ್ಟೇ ಮೊದಲ ಪ್ರಕರಣ ದೃಢಪಟ್ಟಿತ್ತು. ಸದ್ಯ ಇದು ಮೂರನೇ ಪ್ರಕರಣವಾಗಿದ್ದು, ಸಮುದಾಯಕ್ಕೆ ವ್ಯಾಪಿಸಿದೆಯೇ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.
ಗ್ರಾಮದ ಇಬ್ಬರು ಮಹಿಳೆಯರ ಗಂಟಲು ದ್ರವವನ್ನು ಕೋವಿಡ್ 19 ಸೋಂಕು ಪರೀಕ್ಷೆಗೆ ಕಳುಹಿಸಲಾಗಿತ್ತು. ಕೋವಿಡ್ 19 ವೈರಾಣು ಪರೀಕ್ಷೆ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ತಾಲೂ ಕಿನ ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಇಲ್ಲತೊರೆ ಗ್ರಾಮದ 29 ವರ್ಷದ (ಪಿ.3463) ಮತ್ತು ಅದೇ ಗ್ರಾಮದ 58 ವರ್ಷದ (ಪಿ.3464) ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಇದೇ ಗ್ರಾಮದಲ್ಲಿ ಸ್ಥಳೀಯ ರೈತ ಹಾಗೂ ತರಕಾರಿ ವ್ಯಾಪಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಆದರೆ ಮತ್ತೆ ಇಬ್ಬರಿಗೆ ಕಾಣಿಸಿ ಕೊಂಡು ತಾಲೂಕಿನಲ್ಲಿ 5 ದಿನ ದಲ್ಲಿಯೇ 3 ಪ್ರಕರಣ ವಾಗಿದೆ. ಕೋವಿಡ್ 19 ಹೆಮ್ಮಾರಿ ತಾಲೂಕಿಗೆ ಮಾರಕ ವಾಗಿದೆ. ಕೋವಿಡ್ 19 ಆರಂಭಗೊಂಡ ದಿನ ದಿಂದ ಮೇ.29ರವರೆಗೆ ಪ್ರಕರಣಗಳು ಕಂಡು ಬಂದಿರಲಿಲ್ಲ.
ಮೇ.29ರಂದು ಮೊದಲ ಪ್ರಕರಣದಿಂದ ತಾಲೂಕಿಗೆ ಕೋವಿಡ್ 19 ಹೆಜ್ಜೆ ಯಿಟ್ಟಿದೆ. ಜಿಲ್ಲೆಯಲ್ಲಿ ಮೊದಲು 5 ಪ್ರಕರಣ ಗಳಿದ್ದವು. ಅವರೆಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಮೇ 22ರಿಂದ ಜೂನ್ 2ರವರೆಗೆ, ಒಟ್ಟು 12 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ 17 ಪ್ರಕರಣಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಇಲ್ಲತೊರೆ ಗ್ರಾಮವನ್ನು ತಾಲೂಕು ಮಟ್ಟದ ಅಧಿಖಾರಿಗಳು ಸೀಲ್‌ಡೌನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಸಂಗ್ರ ಹಿಸಿದ 1,751 ಮಾದರಿಯಲ್ಲಿ (ತಬ್ಲಿ ಗೆ ಹೋಗಿ ಬಂದವರನ್ನು ಹೊರತುಪಡಿಸಿ) 15 ಜನರಲ್ಲಿ ಪಾಸಿಟಿವ್ ಕಂಡು ಬಂದಿತ್ತು. 1,430 ಜನರಲ್ಲಿ ಸೋಂಕು ಕಂಡು ಬಂದಿರಲಿಲ್ಲ. 248 ಜನರ ಫಲಿತಾಂಶಗಳ ವರದಿ ಬರಬೇಕಿದೆ. 723 ಜನರನ್ನು ಕಡ್ಡಾಯ ದಿಗ್ಬಂಧನಕ್ಕೆ ಒಳಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.