ಗ್ರಾಮಾಂತರ ಜಿಲ್ಲೆಗೆ ಕೋವಿಡ್ 19 ಆಘಾತ!
Team Udayavani, May 23, 2020, 6:01 AM IST
ದೊಡ್ಡಬಳ್ಳಾಪುರ/ನೆಲಮಂಗಲ: ಹಸಿರು ವಲಯದಲ್ಲಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶುಕ್ರವಾರ ಕೋವಿಡ್ 19ಘಾತವಾಗಿದ್ದು, 4 ಪ್ರಕರಣಗಳು ಪತ್ತೆಯಾಗಿವೆ. ದೊಡ್ಡಬಳ್ಳಾಪುರದಲ್ಲಿ 3 ಹಾಗೂ ನೆಲಮಂಗಲದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿದ್ದರೂ, ಜಿಲ್ಲೆ ಪ್ರಕರಣಗಳಿಲ್ಲದೇ ಹಸಿರುವ ವಲಯದಲ್ಲಿತ್ತು.
ದೊಡ್ಡಬಳ್ಳಾಪುರದ ಮೂವರು ಸೋಂಕಿತರು ಮುಂಬೈನಿಂದ ಬಂದಿದ್ದವರಾಗಿದ್ದರೆ, ನೆಲಮಂಗಲ ತಾಲೂಕಿನ ತಾಲೂಕಿನ ವೀರಸಾಗರದ 55 ವರ್ಷದ ರೈತ ಮಹಿಳೆ ಯಲ್ಲಿ ಸೋಂಕು ಪತ್ತೆಯಾಗಿದೆ. ತಾಲೂಕಿನ ತಿಪ್ಪೂರು ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ತಾಂಡ್ಯದ 6 ಮಂದಿ ಕಾರ್ಮಿಕರು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದು, ಅವರಲ್ಲಿ 3 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಸೋಂಕು ದೃಢಪಟ್ಟಿರುವ 3 ಜನರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಿನ್ನಲೆ: ತಾಲೂಕಿನ ಹೊಸಹಳ್ಳಿ ತಾಂಡ ಗ್ರಾಮದವರು ಕೆಲಸದ ನಿಮಿತ್ತ ಮುಂಬೈ ಯಲ್ಲಿ ಐದು ವರ್ಷಗಳಿಂದ ನೆಲೆಸಿದ್ದರು. ಮುಂಬೈ ನಗರದಲ್ಲಿ ಕೂಲಿ ಕೆಲಸ ಮಾಡು ತ್ತಿದ್ದ 12 ಮಂದಿ ಬಾಡಿಗೆ ವಾಹನದಲ್ಲಿ ಮೇ 17ರಂದು ಬಾಗೇಪಲ್ಲಿಗೆ ತೆರಳಿ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಟ್ಟಿದ್ದರು.
ಮೂವರು ಬಾಗೇಪಲ್ಲಿ ನಿವಾಸಿಗಳು ಅಲ್ಲಿಯೇ ಉಳಿದು, ಉಳಿದವರು ಅವರ ತಾಲೂಕುಗಳಿಗೆ ತೆರಳುವಂತೆ ಸೂಚಿಸಿದಾಗ ಇವರಲ್ಲಿ ಮೂವರು ಗೌರಿಬಿದನೂರಿಗೆ ತೆರಳಿದ್ದಾರೆ. ಇನ್ನುಳಿದ ಆರು ಮಂದಿ ದೊಡ್ಡಬಳ್ಳಾಪುರಕ್ಕೆ ಬಂದು ಇಲ್ಲಿನ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿಕೊಂಡು ಐಸೋಲೇಷನ್ ನಲ್ಲಿದ್ದರು. ಅವರಲ್ಲಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರಾಗಿದ್ದು, ಈ 6 ಮಂದಿಯನ್ನು ಕೋವಿಡ್-19 ಪರೀಕ್ಷೆಗೊಳಪಡಿಸಿದಾಗ ಮೂವರಲ್ಲಿ ಕೋವಿಡ್ -19 ಪಾಸಿಟಿವ್ ವರದಿಬಂದಿದೆ.
ಮೂವರು ಸೋಂಕಿತರು ಮಹಿಳೆಯರಾಗಿ ದ್ದಾರೆ. ಏ.13ರಂದು ತಾಲೂಕಿನ ಮಧುರೆ ಹೋಬಳಿಯ ಕೋಡಿಪಾಳ್ಯದಲ್ಲಿ ರೈಲ್ವೆ ಉದ್ಯೋಗಿಯೊಬ್ಬರಿಗೆ ಕೋವಿಡ್-19 ದೃಢಪಟ್ಟು ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿತ್ತು. ಸೋಂಕಿತ ವ್ಯಕ್ತಿ ಗುಣಮುಖನಾದ ನಂತರ ಈವರೆಗೂ ತಾಲೂಕಿನಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿರಲಿಲ್ಲ.
ನೆಲಮಂಗಲಕ್ಕೆ ಕಾಲಿಟ್ಟ ಕೋವಿಡ್ 19: ತಾಲೂಕಿನ ವೀರಸಾಗರದ 55 ವರ್ಷದ ರೈತ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಪರೀಕ್ಷೆ ನಂತರ (ಪಿ.1686) ಕೋವಿಡ್ 19 ಪಾಸಿಟಿವ್ ಎಂದು ಗೊತ್ತಾಗಿದೆ. ಸೋಂಕಿತೆ 20 ದಿನಗಳ ಹಿಂದೆ ಕೊರಟಗೆರೆ ತಾಲೂಕಿನ ಬೈಚನಹಳ್ಳಿ ಗ್ರಾಮದ ಅಣ್ಣನ ಮನೆಗೆ ಹೋಗಿದ್ದರು. ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ವಾರಂಟೈನ್: ತಾಲೂಕಿನಲ್ಲಿ ಸೋಂಕಿತ ಮಹಿಳೆ ಸಂಪರ್ಕದಲ್ಲಿದ್ದ 11 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಬೇಕಾಗಿದ್ದು, ಸೋಂಕಿತ 1207ರ ಸಂಪರ್ಕದ ಅಲಂಕಾರ್ ಡಾಬದ 9 ಮಂದಿ, ಸೋಂಕಿತ 1364ರ ಸಂಪರ್ಕದ ಹುಲ್ಲರಿವೆ ಗ್ರಾಮದ 7 ಜನರು ಸೇರಿದಂತೆ ತಾಲೂಕಿನಲ್ಲಿ 82 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಮಹಿಳೆಗೆ ಪಾಸಿಟಿವ್ ಪತ್ತೆಯಾದ ಬೆನ್ನಲ್ಲೆ ವೀರಸಾಗರಕ್ಕೆ ಭೇಟಿನೀಡಿದ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಪ್ರಾಥಮಿಕ ಸಂಪರ್ಕದ ಮಾಹಿತಿ ಪಡೆದು ಮನೆಗಳ ಮೇಲೆ ಎಚ್ಚರಿಕೆ ಸಂದೇಶದ ಜತೆ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರುವಂತೆ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.