ವಿಮಾನ ನಿಲಾಣದಲ್ಲಿ 150 ಹಾಸಿಗೆ ಚಿಕಿತ್ಸಾ ಕೇಂದ್ರ ಸ್ಥಾಪನೆ

ಮೇ 18 ರಿಂದ ಕೇಂದ್ರ ಕಾರ್ಯಾರಂಭ ಫೇರ್‌ !ಫ್ಯಾಕ್ಸ್‌ ಫೈನಾನ್ಷಿಯಲ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ ನೆರವು

Team Udayavani, May 13, 2021, 5:08 PM IST

vdfdfsd

ದೇವನಹಳ್ಳಿ: ಬೆಂಗಳೂರಿನಲ್ಲಿ ಕೋವಿಡ್‌ 2ನೇ ಅಲೆಯಿಂದಾಗಿ ಒತ್ತಡಕ್ಕೆ ಸಿಲುಕಿರುವ ಆರೋಗ್ಯ ಸೇವಾ ಮೂಲಸೌಕರ್ಯಕ್ಕೆ ಹೆಚ್ಚಿನ ನೆರವು ನೀಡುವುದಕ್ಕಾಗಿ ಫೇರ್‌ಫ್ಯಾಕ್ಸ್‌ ಫೈನಾನ್ಷಿಯಲ್‌ ಹೋಲ್ಡಿಂಗ್ಸ್‌ ಗ್ರೂಪ್‌ ಇದೀಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 150 ಹಾಸಿಗೆಗಳ ಆಕ್ಸಿಜನ್‌ ಬೆಂಬಲ ಹೊಂದಿರುವ ಕೋವಿಡ್‌-19 ಚಿಕಿತ್ಸಾ ಕೇಂದ್ರ-ಕೋವ್‌-ಏಯ್ಡ ಬಿಎಲ್‌ಆರ್‌ ಸ್ಥಾಪಿಸಲು ನಿಧಿ ಪೂರೈಸಿದೆ.

ಈ ಕೇಂದ್ರ ಮೇ 18 ರಿಂದ ಕಾರ್ಯಾರಂಭ ಮಾಡಲಿದೆ. ಫೇರ್‌ ಫ್ಯಾಕ್ಸ್‌ ಚಾಲಿತ ಕೇಂದ್ರ ಇದಾಗಿದ್ದು, ಗಿವ್‌ ಇಂಡಿಯಾ ಜೊತೆಗೆ ಪಾಲುದಾರಿಕೆ ಹೊಂದಿ ರು ತ್ತದೆ. ಇದಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೌಂಡೇಷನ್‌(ಕೆಐಎಎಫ್) ನಿಧಿ ನೆರವು ನೀಡಿದೆ. ಈ ಕೇಂದ್ರವನ್ನು ಫೇರ್‌ಫ್ಯಾಕ್ಸ್‌ ಫೈನಾನ್ಷಿಯಲ್‌ ಹೋಲ್ಡಿಂಗ್ಸ್‌ ಗ್ರೂಪ್ಸ್‌ನ ಹೂಡಿಕೆ ಕಂಪನಿಗಳಾದ ಕೆಐಎಎಫ್ ಮತ್ತು ಕ್ವೆಸ್‌ಕಾರ್‌ ಲಿಮಿಟೆಡ್‌ ನಿರ್ವಹಿಸಲಿವೆ.

ಈ ಚಿಕಿತ್ಸಾ ಕೇಂದ್ರ ಬೆಂಗಳೂರು ವಿಮಾನ ನಿಲ್ದಾಣದ ಸಾರಿಗೆ ಟರ್ಮಿನಲ್‌ಗ‌ಳ ಬಳಿ ಇದೆ. ಹಗುರ ವಾದ ಹೈಪಾಕ್ಷಿಯಾ (ಅಂಗಾಂಶಗಳ ಮಟ್ಟದಲ್ಲಿ ಸೂಕ್ತ ಅಕ್ಸಿಜನ್‌ ಪೂರೈಕೆಯಿಂದ ದೇಹದ ಅಥವಾ ದೇಹದ ಭಾಗ ವಂಚಿತವಾಗಿರುವ ಸ್ಥಿತಿ) ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಇದು ಸಜ್ಜಾಗಿದೆ. ಟ್ರಾÂನ್ಸಿಟ್‌ ಆಕ್ಸಿಜನ್‌ ಡೆಲಿವರಿ ಸೆಂಟರ್‌ ಆಗಿರುವಂತೆ ಈ ಸೌಲಭ್ಯವನ್ನು ವಿನ್ಯಾಸಗೊಳಿಸಲಾಗಿದೆ. ಆಸ್ಪತ್ರೆಯೊಂದಕ್ಕೆ ಪ್ರವೇಶ ಲಭ್ಯವಾಗುವವರೆಗೆ ಆಮ್ಲಜನಕದ ಬೆಂಬಲ ಅಗತ್ಯವಿರುವ ರೋಗಿಗಳಿಗೆ ಬಹು ಅಗತ್ಯದ ಪರಿಹಾರ ಮತ್ತು ಚಿಕಿತ್ಸೆಯನ್ನು ಇದು ಪೂರೈಸಲಿದೆ. ಈ ಕೇಂದ್ರವು ಔಷಧಾಲಯ, ಪೆಥಾಲಜಿ ಘಟಕ, ನರ್ಸ್‌ಗಳ ಸ್ಟೇಷನ್‌, ವಿಶ್ರಾಂತಿ ಕೊಠಡಿಗಳು ಮತ್ತು ಭೋಜನ ಕೊಠಡಿಗಳೊಂದಿಗೆ ಸಜ್ಜಾಗಿದೆ. ಹಗಲು-ರಾತ್ರಿ ತುರ್ತು ಅಗತ್ಯಗಳನ್ನು ಪೂರೈಸಲು ಒಂದು ಆ್ಯಂಬುಲೆನ್ಸ್‌ ಇಲ್ಲಿ ಸಿದ್ಧವಾಗಿದೆ. ಡಾ| ನರೇಶ್‌ ಶೆಟ್ಟಿ, ಡಾ|ನಂದಕುಮಾರ್‌ ಜೈರಾಮ್‌ ಮತ್ತು ಡಾ| ಅಲೆಕ್ಸಾಂಡರ್‌ ಥಾಮಸ್‌ ಸೇರಿದಂತೆ ಪರಿಣತ ವೈದ್ಯರ ಸಮಿತಿಯು ಈ ಕೇಂದ್ರದ ಕಾರ್ಯನಿರ್ವಹಣೆಗೆ ತಾಂತ್ರಿಕ ನೆರವು ನೀಡಲಿದೆ.

ವೈದ್ಯರು, ದಾದಿಯರನ್ನು ಒಳಗೊಂಡಂತೆ ಸಿಬ್ಬಂದಿ ಬೆಂಬಲವನ್ನು ಕರ್ನಾಟಕ ಸರ್ಕಾರ ಪೂರೈಸಲಿದೆ. ಫೇರ್‌ಫ್ಯಾಕ್ಸ್‌ ಫೈನಾನ್ಷಿಯಲ್‌ ಹೋಲ್ಡಿಂಗ್‌ ಲಿಮಿಟೆಡ್‌ ತನ್ನ ಅಂಗಸಂಸ್ಥೆಯಾದ ಫೇರ್‌ ಫ್ಯಾಕ್ಸ್‌ ಇಂಡಿಯಾ ಹೋಲ್ಡಿಂಗ್ಸ್‌ ಕಾರ್ಪೋರೆಷನ್‌ ಮೂಲಕ ಈ ಕೇಂದ್ರಕ್ಕೆ ನಿಧಿ ನೆರವು ನೀಡಿದೆ. ಫೇರ್‌ಫ್ಯಾಕ್ಸ್‌ ಫೈನಾನ್ಷಿಯಲ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ನ‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಚೇರ¾ನ್‌ ಪ್ರೇಮ್‌ ವತ್ಸಾ ಮಾತನಾಡಿ,ಕೋವಿಡ್‌-19 ಸಾಂಕ್ರಾಮಿಕದಿಂದಾಗಿ ಭಾರತದಲ್ಲಿ ಉಂಟಾಗಿರುವ ಪ್ರಸ್ತುತ ಬಿಕ್ಕಟ್ಟಿನಿಂದ ನಮಗೆ ಬಹಳ ಬೇಸರವಾಗಿದೆ. ನಂಬಲಾಗದಷ್ಟು ಕಷ್ಟಕರ ವಾದ ಈ ಸಮಯವನ್ನು ದಾಟಿ ಸಾಗಲು ಭಾರತಕ್ಕೆ ಫೇರ್‌ಫ್ಯಾಕ್ಸ್‌ ನೆರವು ನೀಡಲು ಇಚ್ಛಿಸುತ್ತದೆ. ನಮ್ಮ ಈ ಬದ್ಧತೆ ಭಾರತಕ್ಕೆ ಮತ್ತು ಅದರ ಆರೋಗ್ಯ ಸೇವಾ ವ್ಯವಸ್ಥೆಗೆ ಸ್ವಲ್ಪಮಟ್ಟಿನ ಪರಿಹಾರ ಪೂರೈಸಲಿದೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.

ಟಾಪ್ ನ್ಯೂಸ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.