ಚೈತನ್ಯ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್!
Team Udayavani, Sep 29, 2021, 2:15 PM IST
ಆನೇಕಲ್: ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬಂದಿದೆ ಎಂದು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಬೆಂಗಳೂರಿನ ಕೂಗಳತೆ ದೂರದಲ್ಲಿರುವ ಹುಸ್ಕೂರಿನ ಕಾಲೇಜೊಂದರಲ್ಲಿ ಕೊರೊನಾ ಸ್ಫೋಟಗೊಂಡಿದೆ.
ಹುಸ್ಕೂರಿನ ಶ್ರೀ ಚೈತನ್ಯ ಕಾಲೇಜಿನ 60 ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಈಗಷ್ಟೇಪ್ರಾರಂಭಗೊಂಡಿದ್ದ ಕಾಲೇಜು ಇದೀಗ ಕೊವೀಡ್‌ಹಾಟ್‌ಸ್ಪಾಟ್ ಆಗಿ ಮಾರ್ಪಾಡಾಗಿದ್ದು, ಕೊರೊನಾಭಯದಿಂದ ವಿದ್ಯಾರ್ಥಿಗಳು ಲಗೇಜ್ ಸಮೇತಪೋಷಕರ ಜತೆ ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾಕೇಸ್ ಸದ್ಯ ನಿಯಂತ್ರಣದಲ್ಲಿದೆ. ಪ್ರತಿದಿನ ಸಾವಿರಕ್ಕಿಂತಕಡಿಮೆ ಪ್ರಕರಣ ದಾಖಲಾಗುತ್ತಿವೆ. ಆದರೆ, ಇಂತಹಸಂದರ್ಭದಲ್ಲಿ ಶ್ರೀ ಚೈತನ್ಯ ಇಂಟರ್ ನ್ಯಾಷನಲ್‌ಕಾಲೇಜಿನಲ್ಲಿ ಕೊರೊನಾ ಹೆಮ್ಮಾರಿ ಉಲ್ಬಣ ಗೊಂಡಿದ್ದು, ಆತಂಕಕ್ಕೀಡಾಗುವಂತೆ ಮಾಡಿದೆ.
ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಸಮೀಪದಲ್ಲಿ ರುವ ಶ್ರೀ ಚೈತನ್ಯ ಇಂಟರ್ ನ್ಯಾಷನಲ್ ಸ್ಕೂಲಿನ ದ್ವಿತೀಯ ಪಿಯುಸಿ 60 ಜನ ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ಅದು ಮೊದಲ ಪ್ರಕರಣ ಕಂಡ ಕೇವಲ 24 ತಾಸುಗಳ ಅಂತರದಲ್ಲಿಯೇ 60ಕ್ಕೆ ಏರಿದೆ ಎನ್ನುವುದು ಅತಂಕದ ವಿಚಾರವಾಗಿದೆ. ಈ ವಿಚಾರ ತಿಳಿದ ಕೂಡಲೇ ಪೊಷಕರು ಶಾಲೆಯ ಬಳಿ ಆಗಮಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಕೋವಿಡ್ ಪರೀಕ್ಷೆ: ಶ್ರೀ ಚೈತನ್ಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿರುವ ಪ್ರಥಮ ಹಾಗೂ ದ್ವೀತಿಯ ಪಿಯುಸಿ 350 ವಿದ್ಯಾರ್ಥಿನಿಯರ ಪೈಕಿ 60 ವಿದ್ಯಾರ್ಥಿಗಳಿಗೆ ಕೊವೀಡ್ ಪಾಸಿಟಿವ್ ಆಗಿದ್ದು,ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಒಬ್ಬ ವಿದ್ಯಾರ್ಥಿನಿಗೆ ವಾಂತಿ-ಭೇದಿ ಹಾಗೂ ಜ್ವರ ಕಾಣಿಸಿಕೊಂಡಿತ್ತು. ತದನಂತರ ಕ್ರಮೇಣವಾಗಿಮೂರನೇ ಬ್ಲಾಕ್‌ನಲ್ಲಿದ್ದ 60 ಜನ ವಿದ್ಯಾರ್ಥಿಗಳಿಗೆಕೋವಿಡ್ ಸೋಂಕು ತಗುಲಿದೆ. ವಿಷಯತಿಳಿಯುತ್ತಲೇ ಶಾಲೆಗೆ ಬಂದು ವಿದ್ಯಾರ್ಥಿ ಗಳನ್ನುಪ್ರತ್ಯೇಕ ಮಾಡಿರುವ ಆರೋಗ್ಯ ಇಲಾಖೆ ಎಲ್ಲ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿದ್ದಾರೆ.
ಕಾಲೇಜು ಬಂದ್: ಕೋವಿಡ್ ಉಲ್ಬಣದ ಕಾರಣದಿಂದ ಈಗಷ್ಟೇ ಪ್ರಾರಂಭವಾಗಿದ್ದ ಶಾಲೆಯ ಎಲ್ಲ ತರಗತಿ ಮೊಟಕುಗೊಳಿಸಿ ಬಂದ್ ಮಾಡಲಾಗಿದೆ. ಕೊವೀಡ್ ಕೇಸುಗಳಿಗೆ ಸರ್ಕಾರ ಫ್ರೀ ಆಗಿ ಚಿಕಿತ್ಸೆಕೊಡುತ್ತಿದ್ದರೂ, ಶಾಲಾ ಆಡಳಿತ ಮಂಡಳಿ ಖಾಸಗಿ ಆಸ್ಪತ್ರೆಯವರಿಂದ ಚಿಕಿತ್ಸೆ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದು, ಕಾಲೇಜಿನವರು ವಿದ್ಯಾರ್ಥಿಗಳ ಪೋಷಕರ ಬಳಿ ಸಾವಿರಾರು ರೂ. ದುಡ್ಡುಪಡೆಯುತ್ತಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರುಆರೋಪಿದ್ದಾರೆ. ಈ ಬಗ್ಗೆ ಕಾಲೇಜಿನವರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಶ್ನಿಸಿದಾಗ ಅಲ್ಲಗಳೆದಿದ್ದಾರೆ.
ಆರೋಗ್ಯ ಇಲಾಖೆಯಿಂದ ತಪಾಸಣೆ: ಸೋಮವಾರ ರಾತ್ರಿಯಿಂದಲೇ ಆನೇಕಲ್ ತಾಲೂಕು ಆರೋಗ್ಯ ಅಧಿಕಾರಿ ಡಾ.ವಿನಯ್ ಹಾಗೂ ತಂಡದ ವರು, ಹಿಮಲಾಲಯ ಆಸ್ಪತ್ರೆ ಸಹಭಾಗಿತ್ವದಲ್ಲಿ ಸ್ಥಳ ದಲ್ಲೇವಿದ್ಯಾರ್ಥಿಗಳಿಗೆ ತಪಾಸಣೆ ಮಾಡಿದ್ದು, 60 ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ 58 ವಿದ್ಯಾ ರ್ಥಿಗಳನ್ನು ಹಾಸ್ಟೆಲ್‌ನಲ್ಲಿಯೇ ಕ್ವಾರೆಂಟೈನ ಮಾಡಿದ್ದಾರೆ.
ಗುಂಪು ಗುಂಪಾಗಿ ಆಗಮಿಸಿದ ಪೋಷಕರು: ಬೆಂಗಳೂರು ಹಾಗೂ ತಮಿಳುನಾಡಿನ ಸಾಕಷ್ಟು ಜನ ವಿದ್ಯಾರ್ಥಿಗಳು ವ್ಯಾಸಾಂಗ ಮಾಡಲು ಶ್ರೀ ಚೈತನ್ಯ ಕಾಲೇಜಿನಲ್ಲಿ ಇದ್ದರು. ಕೊರೊನಾ ವಿದ್ಯಾರ್ಥಿಗಳಿಗೆ ಬಂದಿರುವ ಮಾಹಿತಿ ತಿಳಿಯುತ್ತಿದ್ದಂತೆ ಕಾರುಗಳಲ್ಲಿ, ದ್ವಿಚಕ್ರ ವಾಹನಗಳಲ್ಲಿ ಪೋಷಕರು ಗುಂಪು ಗುಂಪಾಗಿ ಆಗಮಿಸಿ ಮಕ್ಕಳನ್ನು ಕರೆದುಕೊಂಡು ಹೋದರು.
ಕಾಲೇಜಿಗೆ ಬಂದು ಕೆಲವೇದಿನಗಳಾಗಿವೆ. ದ್ವಿತೀಯ ಪಿಯುಸಿಅವರಿಗೆ ಪಾಸಿಟಿವ್ ಕಾಣಿಸಿಕೊಂಡ ಬಳಿಕವೂ ನಮ್ಮನ್ನು ಮನೆಗೆ ಕಳುಹಿಸಲುಆಡಳಿಯ ಮಂಡಳಿ ಮುಂದಾಗಿಲ್ಲ. ಕೊನೆಗೆ ನಾನೇ ಭಯವಾಗಿ ಮನೆಗೆ ಕರೆ ಮಾಡಿ ಪೋಷಕರನ್ನು ಕರೆಸಿಕೊಂಡಿದ್ದೇನೆ.– ಪೂಜಾ, ವಿದ್ಯಾರ್ಥಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.