ಜನ ಜಂಗುಳಿ ನಿಯಂತ್ರಿಸದೇ ಕೋವಿಡ್ ತಡೆ ಅಸಾಧ್ಯ
Team Udayavani, May 24, 2021, 5:59 PM IST
ದೊಡ್ಡಬಳ್ಳಾಪುರ: ಸರ್ಕಾರ ಜೂ.7ರವರೆಗೆಕೋವಿಡ್‌ಕಟ್ಟುನಿಟ್ಟಿನಕ್ರಮಕೈಗೊಳ್ಳಲುಅದೇಶಿಸಿದ್ದು, ಪಡಿತರ ಅಂಗಡಿಗಳ ಮುಂದೆ, ಮಾರುಕಟ್ಟೆ ಪ್ರದೇಶಗಳಲ್ಲಿನ ಜನಸಂದಣಿ ನಿಯಂತ್ರಿಸದ ಹೊರತು, ಕೋವಿಡ್ ನಿಯಂತ್ರಣಕ್ಕೆ ಬರುವುದಿಲ್ಲಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಶನಿವಾರ ನಗರದ ಖಾಸ್‌ಬಾಗ್‌ನ ಪಡಿತರ ಅಂಗಡಿ ಮುಂದೆ ವೈಯಕ್ತಿಕಅಂತರವಿಲ್ಲದೇ ಪಡಿತರದಾರರು ಪಡಿತರ ಪಡೆಯಲು ಮುಗಿಬಿದ್ದಿದ್ದ ಘಟನೆನಡೆದಿದೆ. ಅಂಗಡಿ ಮಾಲೀಕರು ಎಷ್ಟೇ ಮನವಿ ಮಾಡಿದರೂ ಜನರು ಸಹಕರಿಸದೆಇದ್ದಕಾರಣ ಪೊಲೀಸರನ್ನುಕರೆಸಿ ಜನರನ್ನು ನಿಯಂತ್ರಿಸಬೇಕಾಯಿತು.
ಇನ್ನು ಮಾರುಕಟ್ಟೆ ಪ್ರದೇಶಗಳಲ್ಲಿಯೂ ಬೆಳಗ್ಗೆ 6ರಿಂದ 10ಗಂಟೆಯವರೆಗೆಮಾಸ್ಕ್ ಇಲ್ಲದೇ ವ್ಯಾಪಾರ ನಡೆಸುವುದು. ವೈಯಕ್ತಿಕ ಅಂತರವಿಲ್ಲದೇ ಖರೀದಿಯಲ್ಲಿನಿರತರಾಗಿರುವುದು, ಓಡಾಟ ನಡೆಸುತ್ತಿರುವುದು ಸಾಮಾನ್ಯ ದೃಶ್ಯಗಳಾಗಿವೆ.
ಆಸ್ಪತ್ರೆಗಳ ಮುಂದೆಯೂ ಸಾಲು: ನಗರದಕೆ.ಆರ್.ವೃತ್ತದ ಸರ್ಕಾರಿ ಆಸ್ಪತ್ರೆ ಹಾಗೂಸಾರ್ವಜನಿಕ ತಾಯಿ ಮಗು ಆಸ್ಪತ್ರೆಗಳಲ್ಲಿ ಕೋವಿಡ್‌ನ ಆರ್‌ಟಿಪಿಸಿಆರ್‌ಪರೀಕ್ಷೆಗಾಗಿ ಜನರು ಸಾಲುಗಟ್ಟಿ ನಿಂತಿದ್ದರು. ಇನ್ನು ಹಲವಾರು ಕ್ಲಿನಿಕ್‌ಗಳಮುಂದೆಯೂ ಜನರು ತಮ್ಮ ಸರದಿಗಾಗಿ ಕಾಯುತ್ತಾ ಕುಳಿತಿರುವುದು ಸಾಮಾನ್ಯವಾಗಿದೆ.
ಲಸಿಕೆಗಾಗಿ 18ರ ಮೇಲಿನ ಮುಂಚೂಣಿ ಕೋವಿಡ್ ವಾರಿಯರ್Õಗಳಿಗೆ ಹಾಗೂ 45 ತುಂಬಿದ ಎಲ್ಲರಿಗೂ ಲಸಿಕೆ ಹಾಕುತ್ತಿರುವುದರಿಂದ ಲಸಿಕಾಕೇಂದ್ರಗಳ ಮುಂದೆಯೂ ಸಾಲು ಇತ್ತು. ಆದರೆ ಪೊಲೀಸ್‌ನಿಯಂತ್ರಣವಿದ್ದುದರಿಂದ ಜನಸಂದಣಿಯಾಗದಂತೆ ಲಸಿಕೆ ಪಡೆಯುವವರು ಸರದಿಸಾಲಿನಲ್ಲಿ ಅಂತರಕಾಪಾಡಿಕೊಂಡು ಲಸಿಕೆ ಹಾಕಿಸಿಕೊಳ್ಳುತ್ತಿದ್ದರು.ಬೆಳಗ್ಗೆ 10 ಗಂಟೆಯ ನಂತರ ಅನಗತ್ಯವಾಗಿ ಓಡಾಡುವ ವಾಹನಗಳಿಗೆ ಹಾಗೂಕೋವಿಡ್ ನಿಯಮ ಉಲ್ಲಂಘಿಸುವವರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.