ಹಲಸನ್ನು ಕಡಿಮೆ ಬೆಲೆಗೆ ಮಾರುವ ಸ್ಥಿತಿ
Team Udayavani, May 22, 2021, 4:08 PM IST
ದೊಡ್ಡಬಳ್ಳಾಪುರ: ಕೊರೊನಾ ಲಾಕ್‌ಡೌನ್ ಪರಿಣಾಮ ಹಲಸು ಮಾರಾಟದ ಮೇಲೂ ಬಿದ್ದಿದ್ದು,ತಾಲೂಕಿನಲ್ಲಿ ಹಲಸು ಕೊಳ್ಳುವವರಿಲ್ಲದೇ ರೈತರುತಂದಿರುವ ಹಲಸನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಹಿಂದೂಪುರ ಹೆದ್ದಾರಿಯ ನಗರದಹೊರವಲಯದ ಟಿ.ಬಿ ವೃತ್ತದ ಬಳಿಯ ರಸ್ತೆಯಬದಿಯಲ್ಲಿ ಪ್ರತಿವರ್ಷ ಹಲಸಿನ ಸೀಸನ್‌ನಲ್ಲಿ ಹಲಸಿನ ಹಣ್ಣುಗಳ ರಾಶಿ ಕಾಣುತ್ತಿತ್ತು, ಆದರೆ ಈ ಬಾರಿಫಸಲು ಬಂದಿದ್ದರೂ ಮಾರಾಟದ ಭರಾಟೆ ಕಾಣುತ್ತಿಲ್ಲ. ತಾಲೂಕಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮಾರಾಟಕ್ಕೆ ತೊಡಕಾಗಿದ್ದು, 10 ಗಂಟೆಯ ನಂತರ ಇಲ್ಲಿಮಾರಾಟ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದುಹಲಸು ಮಾರಾಟಗಾರರು ದೂರುತ್ತಾರೆ.
ತೂಬಗೆರೆ ಹೋಬಳಿ ಹಲಸು ಹೆಸರುವಾಸಿ,ಇದರೊಂದಿಗೆ ಕಸಬಾ ದೊಡ್ಡಬೆಳವಂಗಲ ಹೋಬಳಿಗಳಲ್ಲಿಯೂ ಹಲಸು ಬೆಳಯುತ್ತಾರೆ. ಹಲಸಿನಹಣ್ಣುಗಳು ಗಾತ್ರಕನ್ನನುಗುಣವಾಗಿ 50 ರಿಂದ 100ರೂಗಳವರೆಗೆ ಮಾರಾಟವಾಗುತ್ತಿವೆ. ನೆರೆಯ ಆಂಧ್ರಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ಹಲಸನ್ನುಖರೀದಿಸಲು ಆಗಮಿಸುತ್ತಿದ್ದರು.
ಆದರೆ ಕೊರೊನಾಲಾಕ್‌ಡೌನ್ ಹಿನ್ನಲೆಯಲ್ಲಿ ಆಂಧ್ರ ಹಾಗೂ ಹೊರಪ್ರದೇಶಗಳಿಂದ ಬರುವವರು ತೀರಾಕಡಿಮೆ ಆಗಿದೆ.
ಸಗಟು ಮಾರಾಟ ಕುಸಿತ: ಹಲಸಿನ ತೋಪುಗಳುಕಡಿಮೆಯಾಗುತ್ತಿದ್ದರೂ ತೋಟಗಳಲ್ಲಿ ಬೆಳಸಿರುವಹಲಸಿನ ಮರಗಳಲ್ಲಿ ಸೀಸನ್‌ನ6ತಂಗಳ ಮುಂಚೆಯೇ ವ್ಯಾಪಾರ ಮಾಡಿ ಅಡ್ವಾನ್ಸ್‌ನೀಡಲಾಗುತ್ತಿತ್ತು.
ಆದರೆ ಈ ಬಾರಿ ಕೊರೊನಾಪರಿಣಾಮ ರೈತರ ತೋಟಗಳಿಗೆ ಅಷ್ಟಾಗಿ ವ್ಯಾಪಾರಮಾಡಿಲ್ಲ. ಪರಿಸ್ಥಿತಿ ನೋಡಿ ಖರೀದಿ ಮಾಡೋಣಎಂದು ಮಾರಾಟಗಾರರು ಮುಂದೂಡಿದ್ದರಿಂದತೋಟಗಳಲ್ಲಿ ಹಣ್ಣುಗಳು ಹಾಗೆಯೇ ಉಳಿಯುತ್ತಿವೆಎನ್ನುತ್ತಾರೆ ಹಲಸು ಬೆಳೆದ ರೈತರು.
ಪ್ರತಿವರ್ಷ ರೈತರ ತೋಟದಲ್ಲಿ ಖರೀದಿಸುತ್ತಿದ್ದೇವೆ.ಒಂದು ಹುಂಡಿಗೆ (ಗುಡ್ಡೆ) ಸುಮಾರು 100ರಿಂದ200 ಕಾಯಿಗಳು ಇರುತ್ತವೆ. ಸಾಮಾನ್ಯವಾಗಿಕಾಯಿಗಳ ಗಾತ್ರದ ಮೇಲೆ ಹುಂಡಿಗೆ2 ಸಾವಿರದಿಂದ5 ಸಾವಿರದವರೆಗೆ ಬೆಲೆ ಇರುತ್ತದೆ. ಆದರೆ ಈ ಬಾರಿ ಕೊರೊನಾ ಪರಿಣಾಮದಿಂದ ಬೆಲೆ ಕಡಿಮೆಯಾಗಿದ್ದು, ನಾವು ಖರೀದಿಸಿ ಅಡ್ವಾನ್ಸ್ ನೀಡಿದ್ದ 150 ಮರಗಳಫಸಲನ್ನು ಮಾರಾಟ ಮಾಡುವುದು ಹೇಗೆ ಎಂಬಚಿಂತೆ ಎದುರಾಗಿದೆ ಎನ್ನುತ್ತಾರೆ ಮಾರಾಟಗಾರರು.
ತೋಟಗಳಲ್ಲಿ ಕಾಯಿ ಕೀಳಲು ಕೂಲಿಕಾರರಸಮಸ್ಯೆ ಎದುರಾಗಿದೆ. ಆಂಧ್ರಕ್ಕೆ ನಾವೇ ವಾಹನದಲ್ಲಿ ಹೋಗಿ ಮಾರಾಟ ಮಾಡಲು ಸಿದ್ದರಾದರೂ ಈಗಿನ ಸಂದರ್ಭದಲ್ಲಿ ಅವರು ಕೇಳಿದ ಬೆಲೆಗೆ ನಾವು ಮಾರಾಟ ಮಾಡಿ ಬರಬೇಕಿದೆ ಎನ್ನುತ್ತಾರೆ ಹಲಸು ಮಾರಾಟಗಾರ ನೆಲ್ಲುಕುಂಟೆ ಮಂಜುನಾಥ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ
Yamuna ನದಿಯಲ್ಲಿ ಡಾ| ಮನಮೋಹನ್ ಸಿಂಗ್ ಚಿತಾಭಸ್ಮ ವಿಸರ್ಜನೆ
Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.