ಕೊರೊನಾ ನಿಯಂತ್ರಣಕ್ಕೆ ಶಕ್ತಿ ಮೀರಿ ಶ್ರಮ
Team Udayavani, Jun 16, 2021, 6:14 PM IST
ದೊಡ್ಡಬಳ್ಳಾಪುರ: ಕೊರೊನಾ ಭೀಕರತೆಯಿಂದಹಲವು ಕುಟುಂಬಗಳು ತಮ್ಮ ಕುಟುಂಬಕ್ಕೆ ಆಸರೆಇದ್ದವರನ್ನು ಕಳೆದುಕೊಂಡಿದ್ದಾರೆ. ಇಂತಹಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಮುಂದಿನ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನೆರವುನೀಡುವ ಸೇವಾ ಸಂಸ್ಥೆಗಳ ಪಾತ್ರ ಅಭಿನಂದನೀಯ ಎಂದು ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ “ನೀವುಅನಾಥರಲ್ಲ’ ಮಕ್ಕಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿಸಾಂಕೇತಿಕವಾಗಿ ಮಕ್ಕಳನ್ನು ದತ್ತು ಸ್ವೀಕಾರ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಕೊರೊನಾ ಪರಿಸ್ಥಿತಿನಿರ್ವಹಣೆಯಲ್ಲಿ ಸರ್ಕಾರ ಶಕ್ತಿ ಮೀರಿ ಕೆಲಸಮಾಡುತ್ತಿದೆ. ಕೊರೊನಾದಿಂದ ಸಾವಿಗೀಡಾದ ಬಡಕುಟುಂಬಗಳಿಗೆ 1 ಲಕ್ಷ ರೂ. ನೀಡಲಾಗುತ್ತಿದೆ. ಕೇಂದ್ರಸರ್ಕಾರದ ಸಹಯೋಗದಲ್ಲಿ ಡಿಸೆಂಬರ್ ಒಳಗಾಗಿಎಲ್ಲರಿಗೂ ಲಸಿಕೆ ನೀಡಲಾಗುವುದು.
ಕೋವಿಡ್‌ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕಿಸಿದ್ದು, ಅನಾಹುತಗಳುಸಂಭವಿಸಿವೆ. ಪ್ರತಿಯೊಬ್ಬರು ಅಗತ್ಯ ಎಚ್ಚರಿಕೆ ವಹಿಸಿದರೆಕೊರೊನಾ ಮುಕ್ತ ಮಾಡಬಹುದು. ಮಾಸ್ಕ್ ಧರಿಸಿ,ಸ್ಯಾನಿಟೈಸರ್ ಬಳಸಿ ಹಾಗೂ ಸಾಮಾಜಿಕ ಅಂತರಪಾಲಿಸುವ ಮೂಲಕ ಎಲ್ಲರೂ ಮುನ್ನೆಚ್ಚರಿಕೆಕ್ರಮಗಳನ್ನು ಕೈಗೊಳ್ಳಬೇಕು. ಕೊರೊನಾ ನಮಗೆಮಾನವೀಯತೆ ಹಾಗೂ ಆತ್ಮಸಾಕ್ಷಿಯಿಂದ ಬದುಕುವಪಾಠ ಕಲಿಸಿದ್ದು, ಇನ್ನೊಬ್ಬರ ಕಷ್ಟಕ್ಕೆ ನೆರವಾಗಬೇಕಿದೆಎಂದು ಹೇಳಿದರು.
ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ: ನಟ ಸಂಚಾರಿವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು,ವಿಜಯ್ ಅವರು ಪರಿಸರ ಹಾಗೂ ಸಾಮಾಜಿಕ ಕಳಕಳಿಹೊಂದಿದ್ದ ಅಸಮಾನ್ಯ ವ್ಯಕ್ತಿಯಾಗಿದ್ದು, 20 ವರ್ಷಗಳನಂತರ ರಾಷ್ಟ್ರಪ್ರಶಸ್ತಿ ಸಿಕ್ಕಿದೆ ವಿಜಯ್ ಅವರಿಂದ.ಸಾವಿನಲ್ಲಿಯೂ ಅಂಗಾಂಗಗಳನ್ನು ದಾನ ಮಾಡುವಮೂಲಕ ಸಾರ್ಥಕತೆ ಮೆರೆದಿದ್ದಾರೆ ಎಂದರು.
ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ: ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಸಂಸ್ಥಾಪಕ ವಿನಯ್ ಗುರೂಜಿಮಾತನಾಡಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಮಾಡುವಲ್ಲಿ ಯಶಸ್ವಿಯಾಗಿದ್ದು, ಕೋವಿಡ್ ಸೋಂಕಿನಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ.ಕೇವಲ ಮತ ಹಾಕುವುದಷ್ಟೇ ಪ್ರಜೆಗಳ ಕೆಲಸವಲ್ಲ.ಸಾಂಕ್ರಾಮಿಕ ರೋಗಗಳಂತಹ ಸಮಸ್ಯೆಗಳು ಬಂದಾಗ,ಪಕ್ಷಾತೀತವಾಗಿ ಎಲ್ಲರೂ ಕೆಲಸ ನಿರ್ವಹಿಸಬೇಕು.ಕೋವಿಡ್ ಸಂದರ್ಭದಲ್ಲಿ ರಾಜಕೀಯ ಮಾಡುವುದುಸರಿಯಲ್ಲ. ಸರ್ಕಾರದ ಜೊತೆ ಕೈ ಜೋಡಿಸಿತಮ್ಮಿಂದಾಗುವ ಸಹಾಯ ಮಾಡಬೇಕು.
ರಾಜ್ಯದಲ್ಲಿನಿರಂತರವಾಗಿ 47ನೇ ದಿನ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದ್ದು, ಕೋವಿಡ್‌ನಿಂದ ತಂದೆ ಅಥವಾತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ದತ್ತು ಪಡೆದು, ಅವರ ಶಿಕ್ಷಣ, ಆಹಾರ, ಕೆಲಸ ಹಾಗೂ ಹೆಣ್ಣುಮಕ್ಕಳ ಮದುವೆಯನ್ನು ಟ್ರಸ್ಟ್ ವತಿಯಿಂದ ಮಾಡಲಾಗುತ್ತದೆ. ಗಂಡು ಮಕ್ಕಳಿಗೆ ಉದ್ಯೋಗ ಕಲ್ಪಿಸುವವರೆಗೆದತ್ತು ಪಡೆಯಲಾಗುವುದು. ಈಗಾಗಲೇ ರಾಜ್ಯಾದ್ಯಂತಜಿಲ್ಲಾ ಕೇಂದ್ರದಲ್ಲಿ ಟ್ರಸ್ಟ್ ವತಿಯಿಂದ ಅನ್ನಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೊರೊನಾದಿಂದ ಮೃತಪಟ್ಟಿದ್ದ 5ಪೋಷಕರ 7 ಮಕ್ಕಳನ್ನು ಸಾಂಕೇತಿಕವಾಗಿ ದತ್ತು ಪಡೆಯಲಾಯಿತು. ಆಶಾ ಕಾರ್ಯಕರ್ತೆಯರಿಗೆ ಆಕ್ಸಿಮೀಟರ್,ಮಾಸ್ಕ್, ಪೇಸ್ ಶೀಲ್ಡ್ ವಿತರಿಸಿದರು.
ಜಿÇÉಾಡಳಿತಕ್ಕೆಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಲಾಯಿತು.ಶಾಸಕ ಟಿ.ವೆಂಕಟರಮಣಯ್ಯ, ಉತ್ತರಹಳ್ಳಿಶಾಸಕ ಎಂ.ಕೃಷ್ಣಪ್ಪ, ಕರ್ನಾಟಕ ಕರಕುಶಲ ಅಭಿವೃದ್ಧಿನಿಗಮ ಹಾಗೂ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ,ಕಾರ್ಯದರ್ಶಿ ಎ.ಸಿ.ಶಿವರಾಜು, ಜಿಲ್ಲಾಧಿಕಾರಿಕೆ.ಶ್ರೀನಿವಾಸ್, ಎಂ.ಸಿ.ಎ ಅಧ್ಯಕ್ಷ ಮುನಿಕೃಷ್ಣ,ಮುಖಂಡರಾದ ಬಿ.ಸಿ.ನಾರಾಯಣಸ್ವಾಮಿ,ಧೀರಜ್ ಮುನಿರಾಜು ಮತ್ತು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.