ಲಗ್ಗೆರೆಯಲ್ಲಿ ಬಡ ಕಲಾವಿದರಿಗೆ ನೆರವು
Team Udayavani, Jun 17, 2021, 6:31 PM IST
ದೊಡ್ಡಬಳ್ಳಾಪುರ: ಕಲಾವಿದರ ನೆರವಿಗೆ ಮತ್ತಷ್ಟು ದಾನಿಗಳು ಮುಂದೆ ಬರಬೇಕು. ಉಳ್ಳವರು ಅಸಹಾಯಕರಿಗೆ ಸಾಧ್ಯವಾದಷ್ಟು ನೆರವು ನೀಡಿದರೆ ಮಾತ್ರವೇ ಕೊರೋನಾ ಸಂಕಷ್ಟದ ದಿನಗಳಲ್ಲಿ ಬಡವರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಬಿಜೆಪಿ ಮುಖಂಡಲಗ್ಗೆರೆ ನಾರಾಯಣಸ್ವಾಮಿ ತಿಳಿಸಿದರು.
ಲಗ್ಗೆರೆಯಲ್ಲಿ ಬಾಲನಟಿ ಭೈರವಿ ನೇತೃತ್ವದಲ್ಲಿಗುರುತು ಚೀಟಿ ಇಲ್ಲದ 50ಕ್ಕೂ ಹೆಚ್ಚುಕಲಾವಿದರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ಕಲಾವಿದರ ಬವಣೆ ನೋಡಿ ಮನಸ್ಸಿಗೆ ನೋವು: ಬಾಲನಟಿ ಭೈರವಿ ಮಾತನಾಡಿ, ನಾನುಪ್ರಮುಖ ಪಾತ್ರದಲ್ಲಿ ನಟಿಸಿರುವ ಶವಸಂಸ್ಕಾರ, ಚಾರಣ ಮತ್ತು ಮಸಣದ ಚಿತ್ರಗಳಲ್ಲಿ ಗಳಿಸಿದಹಣವನ್ನು ನನ್ನ ಹುಟ್ಟುಹಬ್ಬದ ಆಚರಣೆಗಾಗಿ ಕೂಡಿಟ್ಟಿದ್ದೆ. ಅದರೆ, ಚಿತ್ರರಂಗದ ಗುರುತು ಚೀಟಿ ಇಲ್ಲದ ಕಲಾವಿದರ ಬವಣೆಯ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ನೋಡಿ ಮನಸ್ಸಿಗೆ ತುಂಬಾ ನೋವಾಯಿತು. ಆ ಹಣಮತ್ತು ನಮ್ಮ ತಂದೆ ಪತ್ರಿಕಾ ವಿತರಕಹುಲುಕುಂಟೆ ಮಹೇಶ ಪತ್ರಿಕಾಸರಬರಾಜಿನಿಂದ ಗಳಿಸಿದ್ದ ಹಣವನ್ನು ಒಗ್ಗೂಡಿಸಿಐವತ್ತು ಜನರಿಗೆ ನೆರವು ನೀಡಿದ್ದೇವೆ ಎಂದುತಿಳಿಸಿದರು.
ನೆರವು ಕಲ್ಪಿಸಲು ಪ್ರಯತ್ನ: ಪತ್ರಿಕಾ ವಿತರಕಹುಲುಕುಂಟೆ ಮಹೇಶ್ ಮಾತನಾಡಿ, ಕಳೆದವರ್ಷ ನಾವು 150ಕ್ಕೂ ಹೆಚ್ಚು ಮಂದಿಚಿತ್ರಮಂದಿರ ಸಿಬ್ಬಂದಿ, ಕಲಾವಿದರಿಗೆ ನೆರವು ನೀಡಿದ್ದೆವು. ಈ ಬಾರಿ ಎರಡು ಹಂತದಲ್ಲಿಸುಮಾರು 100 ಜನ ಬಡ ಕಲಾವಿದರಿಗೆ ನೆರವುನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟುಕಲಾವಿದರಿಗೆ ನೆರವು ಕಲ್ಪಿಸಲು ಪ್ರಯತ್ನಮಾಡುತ್ತೇವೆ ಎಂದರು.ಸಮಾರಂಭದಲ್ಲಿ ನಿರ್ದೇಶಕ ಕೃಷ್ಣಮೂರ್ತಿ,ರಮೇಶ್ ಜಯಸಿಂಹ, ಯುವ ಮುಖಂಡಬಾಬು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.