ಆರೈಕೆ ಕೇಂದ್ರದಲ್ಲೇ ಚಿಕಿತ್ಸೆ ಪಡೆಯುವಂತೆ ಮಾಡಿ
Team Udayavani, May 29, 2021, 5:50 PM IST
ದೇವನಹಳ್ಳಿ : ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೋಲೇಷನ್‌ನಲ್ಲಿ ಯಾರೂ ಇರದಂತೆ ಜನರಿಗೆ ಮನವರಿಕೆ ಮಾಡಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಅಧಿಕಾರಿಗಳು ಅವರನ್ನು ಕೋವಿಡ್‌ಸೆಂಟರ್‌ಗೆ ಕಳಿಸುವ ಕೆಲಸವಾಗಬೇಕು ಎಂದು ಶಾಸಕಎಲ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಸದಸ್ಯರು,ಅಧಿಕಾರಿಗಳ ಕೋವಿಡ್ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೋವಿಡ್‌ಕೇರ್ ಸೆಂಟರನಲ್ಲಿ ಉತ್ತಮ ಸೌಲಭ್ಯ ಕಲ್ಪಿಸಿದ್ದಾರೆ.ಗ್ರಾಮಗಳಲ್ಲಿ ಕೆಲವರು ಹೋಂ ಐಸೋಲೇಷನ್‌ಇರುವವರು ಮನೆಯಿಂದ ಓಡಾಡುತ್ತಿದ್ದಾರೆಂಬದೂರುಗಳಿವೆ. ಪ್ರತಿ ಗ್ರಾಮದಲ್ಲಿ ಕೊರೊನಾ ಕಟ್ಟಿಹಾಕಬೇಕಾದರೆ ಮೊದಲು ನಾವು ಎಚ್ಚರವಹಿಸಬೇಕು.
ಎಲ್ಲ ಸದಸ್ಯರು ಜನರಲ್ಲಿರುವ ಭಯದೂರಮಾಡಬೇಕು. ಅವರಲ್ಲಿ ಧೈರ್ಯ ತುಂಬುವಕೆಲಸ ಮಾಡಬೇಕು. ಲಕ್ಷಣಗಳು ತೀವ್ರವಾಗಿ ಕಂಡುಬಂದರೆ ಆಸ್ಪತ್ರೆಗೆ ಕಳಿಸುವ ಕೆಲಸವಾಗಬೇಕು. ಹೆಚ್ಚುಪ್ರಕರಣಗಳು ಇರುವ ಕಡೆ ಸೆಮಿ ಕಂಟೋನ್ಮೆಂಟ್‌ಜೋನ್‌ಗಳನ್ನಾಗಿ ಮಾಡಬೇಕು ಎಂದರು.ಗ್ರಾಮಗಳಲ್ಲಿ ಸಂಬಂಧಪಟ್ಟ ಪ್ರಾಥಮಿಕ ರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ನರ್ಸ್‌ಗಳಸಮಸ್ಯೆಯಿದ್ದರೆ ಕೂಡಲೇ ನಮ್ಮ ಗಮನಕ್ಕೆ ತನ್ನಿ.ನಿಮಗೆ ಯಾರಾದರೂ ವೈದರು ಮತ್ತು ನರ್ಸ್‌ಗಳುತಿಳಿದಿದ್ದರೆ ಅಂತಹವರನ್ನು ಜಿಲ್ಲಾಧಿಕಾರಿಗಳ ಮೂಲಕಕೆಲಸಕ್ಕೆ ನಿಯೋಜಿಸುವ ಆದೇಶ ಕೊಡಿಸುವ ಜವಾಬ್ದಾರಿ ನನ್ನದಾಗಿರುತ್ತದೆ. ಗ್ರಾಮದ ಜನರಲ್ಲಿಅರಿವು ಮೂಡಿಸಬೇಕಿದೆ.
ಪಿಡಿಓ ರವರು 24 7ತಮ್ಮ ದೂರವಾಣಿಗೆ ಪ್ರತಿಯೊಬ್ಬರ ಸಮಸ್ಯೆಗೆ ಸ್ಪಂದಿಸಬೇಕು. ಪ್ರತಿ ಗ್ರಾಮಗಳಲ್ಲಿ ಮೊಬೈಲ್‌ವೆಹಿಕಲ್‌ಗಳ ಮೂಲಕ ಗ್ರಾಮಗಳಲ್ಲಿ ಕೊರೊನಾಪರೀಕ್ಷೆ ಮಾಡುತ್ತಿದ್ದು ಗ್ರಾಮದ ಪ್ರತಿಯೊಬ್ಬರಪರೀಕ್ಷೆಯನ್ನು ಮಾಡಿಸಬೇಕು ಎಂದರು.ಗೊಡ್ಲುಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷೆ ಆನಂದಮ್ಮಮಾತನಾಡಿ, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಸೋಂಕಿತರು ಈ ಮುಂಚೆ ಹೋಂ ಐಸೋಲೇಷನ್ ನಲ್ಲಿರು ವವರನ್ನು ಪ್ರತಿನಿತ್ಯ ನಮ್ಮ ಆಸ್ಪತ್ರೆಯ ವೈದ್ಯರು ಸಂಪರ್ಕಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಾರೆ.ಅವರಿಗೆ ಅಗತ್ಯವಾದ ಔಷಧಿಗಳನ್ನೂ ಕೊಡುತ್ತಿದ್ದಾರೆ.
ಆದರೆ, ಎ.ರಂಗನಾಥಪುರ ಗ್ರಾಮದಲ್ಲಿ ಕಾರ್ಪೆಂಟರ್‌ಕೆಲಸ ಮಾಡುವ ಯುವಕನೊಬ್ಬನಿಗೆ ಪಾಸಿಟಿವ್‌ಬಂದಿದ್ದರೂ ಅವರನ್ನು ಕೇರ್ ಸೆಂಟರ್‌ಗೆಹೋಗುವಂತೆ ಹೇಳಲು ಹೋದ ಆಶಾಕಾರ್ಯಕರ್ತೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.ಈಗಲೂ ವಿಜಯಪುರದಲ್ಲಿ ಸುತ್ತಾಡುತ್ತಲೇ ಇದ್ದಾನೆಎಂದು ದೂರಿದರು.
ತಾಪಂ ಇಒ ಎಚ್.ಡಿ.ವಸಂತ್‌ಕುಮಾರ್ ಮಾತನಾಡಿ, ಕೊರೊನಾ 2ನೇ ಅಲೆ ಪ್ರತಿ ಗ್ರಾಮದಲ್ಲೂಕೊರೊನಾ ಅಲೆ ವ್ಯಾಪಿಸುತಿದೆ. ಜನರಲ್ಲಿ ಜಾಗೃತಿಮೂಡಿಸುವ ಕೆಲಸ ಮಾಡಬೇಕು ಎಂದರು.ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಮುನೇಗೌಡ, ಅಧ್ಯಕ್ಷ ಮುನಿರಾಜು, ಪುರಸಭಾಸದಸ್ಯ ಜಿ.ಎ. ರವೀಂದ್ರ, ವೈ.ಆರ್. ರುದ್ರೇಶ್, ವಿವಿಧಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು,ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.