![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 4, 2021, 2:58 PM IST
ದೇವನಹಳ್ಳಿ: ದೇಶದಲ್ಲಿ ಕೊರೊನಾವ್ಯಾಪಕವಾದ ಹಿನ್ನೆಲೆಯಲ್ಲಿಸಾರ್ವಜನಿಕರು ಲಸಿಕೆ ಕೇಂದ್ರಗ ಳಲ್ಲಿಮುಗಿಬಿದ್ದು, ಲಸಿಕೆಹಾಕಿಸಿಕೊಳ್ಳುತ್ತಿರುವ ದೃಶ್ಯ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಲಸಿಕಾ ಕೇಂದ್ರಗಳಲ್ಲಿ ಕಂಡು ಬಂದಿದೆ.ಲಸಿಕೆ ಹಾಕಿಸಿಕೊಳ್ಳುವ ಆತುರದಲ್ಲಿಜನರು ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ಫೆಬ್ರವರಿ, ಮಾರ್ಚ್‌ತಿಂಗಳಲ್ಲಿ ಪ್ರಾರಂಭವಾಗಿ ಮೊದಲಹಂತದ ಲಸಿಕೆಯನ್ನು ಸರ್ಕಾರ 60ವರ್ಷ ಮೇಲ್ಪಟ್ಟ ಜನರು ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ಮನವಿಮಾಡಿದ್ದರು.
ಇದಕ್ಕೆ ಉತ್ತಮ ಸ್ಪಂದನೆದೊರೆಯದ ಕಾರಣ ಕೆಲವೇ ಮಂದಿ ಲಸಿಕೆ ಪಡೆದರು. ನಂತರ 65ವರ್ಷದವರಿಗೆ ಲಸಿಕೆ ಹಾಕಿಸಿಕೊಳ್ಳಲುಅವಕಾಶ ಕಲ್ಪಿಸಲಾಗಿತ್ತು. ಈ ಅವ ಕಾಶ ಕಲ್ಪಿಸಿದ್ದರೂ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು.
ಸರದಿ ಸಾಲಿನಲ್ಲಿ ಲಸಿಕೆ: ಇದೀಗ ಲಸಿಕೆಗಾಗಿ ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. 18-40 ರ ಫ್ರಂಟ್ ಲೈನ್ ವಾರಿಯರ್ಸ್ ಮತ್ತು45 ವರ್ಷ್ ಮೇಲ್ಪಟ್ಟವರಿಗೆ ನಿತ್ಯ ಲಸಿಕ ನೀಡಲಾಗುತ್ತಿದೆ. ಏಪ್ರಿಲ್, ಮೇತಿಂಗಳಲ್ಲಿ ಕೊರೊನಾ ಹೆಚ್ಚಾಗಿ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿರುವುದನ್ನು ಗಮನಿಸಿದಜನರು, ಲಸಿಕೆ ಪಡೆಯಲು ಲಸಿಕಾಕೇಂದ್ರಗಳತ್ತ ಮುಖಮಾಡಿದ್ದಾರೆ.ಆದರೆ, ಇಲ್ಲಿ ಪೊಲೀಸರುಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೇಳಿದರೂ, ಸರ್ಕಾರಿ ಮಾರ್ಗಸೂಚಿ ಪಾಲಿಸದೇ ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.