ರಾಜ್ಯಕ್ಕೆ ಮಾದರಿ ಜಿಲ್ಲೆ ಮಾಡುವ ಗುರಿ: ಸಿಇಒ
Team Udayavani, Jun 7, 2021, 5:49 PM IST
ದೇವನಹಳ್ಳಿ: ಕೊರೊನಾವನ್ನು ಗ್ರಾಮಗಳಿಂದ ಮುಕ್ತಮಾಡಿ, ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿಮಾಡುವುದೇ ನಮ್ಮ ಗುರಿಯಾಗಿದೆ. ಜಿಲ್ಲೆಯಲ್ಲಿ 365ಗ್ರಾಮಗಳಲ್ಲಿ ಕೊರೊನಾ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದು ಜಿಪಂ ಸಿಇಒಎಂ.ಆರ್ ರವಿ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯನ್ನು ಕೋವಿಡ್ ಮುಕ್ತ ಗ್ರಾಮಗಳನ್ನಾಗಿಮಾಡಬೇಕು ಎಂದು ಸಂಕಲ್ಪ ಮಾಡಿಸಂಘಟಿತರಾಗಿ ಕೆಲಸ ಮಾಡಲಾಗುತ್ತಿದೆ.ಇನ್ನೊಂದು ವಾರದೊಳ ಗಾಗಿ 700 ಗ್ರಾಮಗಳನ್ನುಕೊರೊನಾ ಮುಕ್ತ ಗ್ರಾಮ ಗಳನ್ನಾಗಿ ಮಾಡಲಾಗುವುದು.ಲಾಕ್‌ಡೌನ್ ಮುಗಿ ಯು ವೇಳೆಗೆ 1000 ಗ್ರಾಮಗಳಲ್ಲಿಕೊರೊನಾ ಮುಕ್ತ ಗ್ರಾಮಗಳನ್ನಾಗಿ ಮಾಡುವುದೇನಮ್ಮ ಉದ್ದೇಶ ವಾಗಿದೆ. ಪಂಚಾಯಿತಿ ಅಧಿಕಾರಿ ಗಳೊಂದಿಗೆ ಅಂಗನವಾಡಿ, ಆಶಾ ಕಾರ್ಯ ಕರ್ತೆಯರು,ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಸಹಕಾರ ನೀಡು ತ್ತಿರುವುದರಿಂದ ಗ್ರಾಮಗಳಲ್ಲಿಸೋಂಕು ಹೆಚ್ಚು ಹರಡದಂತೆ ನಿಗಾವಹಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮಗಳಲ್ಲಿ ಟಾಸ್ಕ್ಫೋರ್ಸ್ ಸಮಿತಿರಚನೆ: ಜಿಲ್ಲೆಯ ಪ್ರತಿಯೊಂದು ಗ್ರಾಪಂವ್ಯಾಪ್ತಿಯ ಗ್ರಾಮ ಗಳಲ್ಲಿ ಟಾಸ್ಕ್ಫೋರ್ಸ್‌ಸಮಿತಿ ರಚನೆ ಮಾಡ ಲಾ ಗಿದೆ. ಸ್ಯಾನಿಟೈಸರ್ ಸಿಂಪಡಣೆಮಾಡುವುದು, ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್‌ಹಾಕುವುದು. ಹಳ್ಳಿಯವರನ್ನು ಬಿಟ್ಟು ಹೊರಗಿನಿಂದಬರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಮಾಡಿಸಬೇಕು. ಮೊಬೈಲ್ ಕ್ಲೀನಿಕ್‌ಗಳ ಮೂಲಕಹಳ್ಳಿಗಳಿಗೆ ಕಳುಹಿಸಿ, ಗ್ರಾಮಗಳಲ್ಲಿನ ರೋಗದ ಲಕ್ಷಣಇರುವವರಿಗೆ ಅಲ್ಲಿಯೇ ತಪಾಸಣೆ ಮಾಡಿ ಕೊರೊನಾದೃಢ ಪಟ್ಟರೆ ಸ್ಥಳದಲ್ಲಿಯೇ ಔಷಧ ವಿತರಣೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ 1072 ಗ್ರಾಮಗಳುಬರಲಿದ್ದು, ಅದರಲ್ಲಿ 365 ಹಳ್ಳಿಗಳಲ್ಲಿ ಕೊರೊನಾಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ.ದೊಡ್ಡಬಳ್ಳಾಪುರ ತಾಲೂಕಿನಲ್ಲಿ 98 ಗ್ರಾಮಗಳು ,ದೇವನಹಳ್ಳಿಯಲ್ಲಿ 40, ನೆಲಮಂಗಲ ತಾಲೂಕಿನಲ್ಲಿ171 ಹಾಗೂ ಹೊಸಕೋಟೆಯಲ್ಲಿ 56 ಗ್ರಾಮಗಳಲ್ಲಿಕೊರೊನಾ ಮುಕ್ತ ಗ್ರಾಮಗಳು ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.