ಕೋವಿಡ್ ಸಂಕಷ್ಟ: ಹಾಲಿನ ದರ ಕುಸಿತ, ರೈತ ಕಂಗಾಲು
ಹೈನೋದ್ಯಮಕ್ಕೆ ಭಾರೀ ಹೊಡೆತ
Team Udayavani, Jul 20, 2020, 9:52 AM IST
ನೆಲಮಂಗಲ: ಹಾಲಿನ ಉತ್ಪಾದನೆ ಪ್ರಮಾಣ ಹೆಚ್ಚಿದ್ದು, ಕೋವಿಡ್ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಪ್ರಮಾಣ ಕಡಿಮೆ ಯಾಗಿದೆ. ಹೀಗಾಗಿ ಬಮೂಲ್ ನಷ್ಟ ಪರಿಹಾರಕ್ಕಾಗಿ ಲೀಟರ್ ಹಾಲಿಗೆ 4 ರೂ. ಕಡಿತಗೊಳಿಸಿದೆ. ಆದರೆ ಆದರೆ ಪಶು ಆಹಾರದ ದರ ಮಾತ್ರ ಯಥಾಸ್ಥಿತಿಯಲ್ಲಿ ಮುಂದು ವರಿದಿದ್ದು, ಹೈನೋದ್ಯಮಿಗಳು ಕಂಗಾಲಾಗಿದ್ದಾರೆ.
ಪ್ರತಿನಿತ್ಯ ಹಳ್ಳಿಗಳ ಡೇರಿಗಳಿಗೆ ಹಾಲು ಸರಬರಾಜು ಮಾಡುವ ಹೈನೋದ್ಯಮಿಗಳಿಗೆ ಒಂದು ಲೀಟರ್ ಹಾಲಿಗೆ ಈ ಹಿಂದೆ 28 ರೂ. ಜತೆ ಸಹಾಯ ಧನ 5 ರೂ. ನೀಡಲಾಗುತ್ತಿತ್ತು. ಒಂದು ತಿಂಗಳ ಹಿಂದೆ ಲೀಟರ್‌ಗೆ 1.5 ರೂ. ಕಡಿಮೆ ಮಾಡಿದ ಒಕ್ಕೂಟ ಮತ್ತೆ ಜು.16ರಿಂದ ಲೀಟರ್‌ಗೆ 2.5 ರೂ. ಕಡಿಮೆ ಮಾಡಿ, ಲೀಟರ್‌ಗೆ 24ರೂ. ಜತೆ 5 ರೂ. ಸಹಾಯ ಧನ ನೀಡಲು ಬಮೂಲ್ ನಿರ್ಧರಿಸಿ ಆದೇಶ ನೀಡಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಿಸುತಿದ್ದ ರೈತರಿಗೆ ಪಶುಸಂಗೋಪನೆ ವರವಾಗಿತ್ತು. ಆದರೆ ಈಗ ಹಾಲಿನ ದರ ಕಡಿಮೆ ಮಾಡಿ, ಪಶು ಆಹಾರ ದರ ದುಬಾರಿಯಾದ ಕಾರಣ ರೈತರು ಮತ್ತು ಹೈನುಗಾರಿಕೆ ಜೀವನೋಪಾಯ ಮಾಡಿಕೊಂಡಿರುವವರಿಗೆ ಸಂಕಷ್ಟ ಎದುರಾಗಿದೆ. ಹೆಚ್ಚಾಯ್ತು ಪಶು ಆಹಾರ ದರ: ಹಾಲಿನ ದರ ಏರಿಕೆ ವೇಳೆ ಪಶು ಆಹಾರದ ದರ ಹೆಚ್ಚಳವಾಗುತ್ತದೆ. 2-3 ತಿಂಗಳ ಹಿಂದೆಯಷ್ಟೇ ಒಕ್ಕೂಟ ನೀಡುವ 50 ಕೆ.ಜಿ.ಯ ಪಶು ಆಹಾರ (ಫೀಡ್)ದರ 25 ರೂ. ಹೆಚ್ಚಳ ಮಾಡಿತ್ತು. ಆದರೆ ಹಾಲಿನ ದರ ಕಡಿಮೆ ಮಾಡಿ, ಪಶು ಆಹಾರ ದರ ಇಳಿಕೆ ಮಾಡದಿರುವುದು ಹೈನೋದ್ಯಮಿ ಗಳು ಮತ್ತು ರೈತರಲ್ಲಿನ ಬೇಸರದ ಸಂಗತಿ ಎಂದು ಹಾಲು ಉತ್ಪಾದಕರು ಬೇಸರಿಸಿದ್ದಾರೆ.
ಆಹಾರ ನೀಡುವ ಪ್ರಮಾಣ: ಪಶು ಸಂಗೋಪನೆಯಲ್ಲಿ ತೊಡಗಿರುವ ಪ್ರಗತಿಪರ ರೈತ ಹಾಗೂ ಪಶು ವೈದ್ಯರ ಪ್ರಕಾರ 10 ಲೀ. ಹಾಲು ನೀಡುವ ಹಸುವಿಗೆ ದಿನಕ್ಕೆ 6 ರಿಂದ 7 ಕೆ.ಜಿ.ಯಷ್ಟು ಹಸಿಹುಲ್ಲು ಬಿಟ್ಟು ಎಲ್ಲ ರೀತಿಯ ಪಶು ಆಹಾರ ನೀಡಿದರೆ ತಿಂಗಳಿಗೆ ಒಂದು ಹಸುವಿಗೆ ಅಂದಾಜು 180ರಿಂದ 210 ಕೆಜಿ ಆಹಾರ ನೀಡಬೇಕಾಗುತ್ತದೆ. ಒಂದು ಹಸುವಿಗೆ ಕೇವಲ ಪಶು ಆಹಾರಕ್ಕಾಗಿಯೇ ಅಂದಾಜು 5ರಿಂದ 6 ಸಾವಿರದಷ್ಟು ಖರ್ಚು ಮಾಡಬೇಕಾಗಿದೆ.
ಮನವಿ: ಕೋವಿಡ್ ಸಂಕಷ್ಟದಲ್ಲಿ ಹಾಲಿನ ದರ ಕಡಿಮೆ ಮಾಡಿದಂತೆ ಪಶು ಆಹಾರ ಕಡಿಮೆ ಮಾಡುವುದು ಅಥವಾ ರಿಯಾಯಿತಿ ದರದಲ್ಲಿ ವಿತರಣೆ ಮಾಡಿದರೆ ಪಶುಸಂಗೋಪನೆ ಉಳಿಯಲು ಸಾಧ್ಯ. ಸರಕಾರ ಅದರ ಬಗ್ಗೆ ಗಮನ ವಹಿಸಿ, ರೈತರ ಪರ ನಿಲ್ಲ ಬೇಕು ಎಂದು ರೈತ ಸಂಘಟನೆಗಳು, ಹಾಲು ಉತ್ಪಾದಕರು ಮನವಿ ಮಾಡಿದ್ದಾರೆ.
16 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಬೇಕಾಗಿದ್ದ ಸಮಯದಲ್ಲಿ 19 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದೆ. 12 ಲಕ್ಷ ಲೀಟರ್ ಬೇಡಿಕೆಯಿದ್ದ ಹಾಲಿನ ಮಾರಾಟ ಕೋವಿಡ್ ಆರಂಭವಾದ ನಂತರ 8 ಲಕ್ಷ ಲೀಟರ್‌ಗೆ ಕುಸಿತವಾಗಿದೆ. ಹಾಲಿನ ದರ ಕಡಿಮೆ ಮಾಡುವ ಅನಿವಾರ್ಯವಿದೆ. ಪಶು ಆಹಾರದ ಬಗ್ಗೆ ಚರ್ಚೆ ಮಾಡಲಾಗುತ್ತದೆ –ನರಸಿಂಹಮೂರ್ತಿ, ಬಮೂಲ್ ಅಧ್ಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.