ಬೆಳೆ ಹಾನಿ: ಪ್ರಾಣಿಗಳ ನಿಯಂತ್ರಣದ ಬಗ್ಗೆ ಅರಿವು ಅಗತ್ಯ

Team Udayavani, Sep 27, 2021, 3:06 PM IST

ಬೆಳೆ ಹಾನಿ: ಪ್ರಾಣಿಗಳ ನಿಯಂತ್ರಣದ ಬಗ್ಗೆ ಅರಿವು ಅಗತ್ಯ

ದೊಡ್ಡಬಳ್ಳಾಪುರ: ರೈತರು ಬೆಳೆದ ಬೆಳೆಗಳನ್ನು ಇಲಿ, ಮೊದಲಾದ ಪ್ರಾಣಿ ಪೀಡೆಗಳು ನಾಶಪಡಿಸುವುದರೊಂದಿಗೆ ಹಲವಾರು ಆರೋಗ್ಯ ಸಮಸ್ಯೆ ತಂದೊಡ್ಡುತ್ತವೆ. ಈ ರೀತಿಯ ಪೀಡಕ ಪ್ರಾಣಿಗಳ ನಿಯಂತ್ರಣದ ಬಗ್ಗೆ ರೈತರು ಅರಿವು ಮೂಡಿಸಿಕೊಂಡು ವಿವಿಧ ತಂತ್ರಗಳ ಮೂಲಕ ಪ್ರಾಣಿಗಳ ಹಾವಳಿ ನಿಯಂತ್ರಿಸಿಕೊಳ್ಳಬೇಕಿದೆ ಎಂದು ಜಿಕೆವಿಕೆ ಪ್ರಾಧ್ಯಾಪಕ ಡಾ.ಮೋಹನ ನಾಯಕ್‌ ತಿಳಿಸಿದರು.

ತಾಲೂಕಿನ ವಡ್ಡರಹಳ್ಳಿಯಲ್ಲಿ ಬೆಂಗಳೂರು ಕೃಷಿ ವಿವಿಯ ಬಿಎಸ್ಸಿ(ಕೃಷಿ) ಅಂತಿಮ ವರ್ಷದವಿದ್ಯಾರ್ಥಿಗಳ ಸ್ಟೂಡೆಂಟ್‌ ರೆಡಿ ಕಾರ್ಯಕ್ರಮದಡಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಕಶೇರುಕಪ್ರಾಣಿ ಪೀಡೆಗಳ ನಿರ್ವಹಣೆ ವಿಷಯ ಕುರಿತುಮಾತನಾಡಿದ ಅವರು, ರೈತರಿಗೆ ಪ್ರಮುಖ ಸಮಸ್ಯೆ ಎಂದರೆ ಬೆಳೆಗಳಿಗೆ ಇಲಿ ಕಾಟ. ಬಿತ್ತನೆಯಿಂದಕೊಯ್ಲಿನವರೆಗೆ, ಕೊಯ್ಲಿನಿಂದ ಮಾರುಕಟ್ಟೆಗೆ ಬೆಳೆ ಕೊಂಡೊಯ್ಯುವವರೆಗೆ ಪ್ರತಿ ಹಂತದಲ್ಲಿಯೂ ಇಲಿ ಕಾಟ ರೈತರಿಗೆ ತಪ್ಪಿದ್ದಲ್ಲ. ಒಮ್ಮೊಮ್ಮೆ ಅವು ಮಾಡುವ ನಷ್ಟ ಬಲು ದುಬಾರಿ. ಹೀಗಾಗಿ ಇಲಿಗಳಿಂದ ರೈತರ ಆದಾಯವೂ ಕುಂಠಿತವಾಗುತ್ತಿದೆ ಎಂದರು.

ಇಲಿಗಳು ಮನೆ, ಹೊಲ, ಗದ್ದೆ, ತೋಟ, ಮೈದಾನ ಹೀಗೆ ಎಲ್ಲ ಕಡೆ ವಾಸಿಸುತ್ತವೆ. ಇವುಗಳು ಪುಟ್ಟ ಜೀವಿಗಳಾಗಿದ್ದರೂ ಸಹ ರಾಷ್ಟ್ರದ ಆಹಾರಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ಪರಿಣಾಮಬೀರುವುದರಿಂದ ಮನುಷ್ಯನಿಗೆ ಅನೇಕ ರೋಗಉಂಟು ಮಾಡುತ್ತವೆ. ಮುಖ್ಯವಾಗಿ ಆಮಶಂಕೆ, ಕಾಮಾಲೆ, ರಿಕೆಟ್ಸೆಯಾ, ಪ್ಲೇಗ್‌ ಮೊದಲಾದರೋಗಗಳನ್ನು ಹರಡುತ್ತವೆ. ಇಲಿಗಳಲ್ಲಿ ಹಲವಾರು ಪ್ರಬೇಧಗಳಿದ್ದು, ಅವುಗಳ ನಿಯಂತ್ರಣಕ್ಕೆ ಬೇರೆ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದರು.

ಗೋದಾಮುಗಳಲ್ಲಿ ಎಚ್ಚರವಹಿಸಿ: ಇಲಿಗಳನ್ನು ಜೀವಂತವಾಗಿ ಹಿಡಿಯಲು ಅಥವಾ ಕೊಲ್ಲಲು ಹಲವಾರು ಸಾಧನಗಳು ಈಗಾಗಲೇ ಮಾರುಕಟ್ಟೆ  ಯಲ್ಲಿ ಲಭ್ಯವಿದ್ದು, ಅವುಗಳನ್ನು ಬಳಸಿ ಇಲಿಗಳಹತೋಟಿ ಮಾಡಬಹುದು. ಬೋನ್‌ಗಳಲ್ಲಿ ಆಹಾರಇಟ್ಟು ಬೀಳಿಸಬಹುದು. ಆದರೆ, ಇಲಿಗಳು ಬಿದ್ದ ನಂತರ ಅವರನ್ನು ವಿಲೇವಾರಿ ಮಾಡಿ ನಂತರ ಬೋನ್‌ ಸೋಪು ನೀರಿನಿಂದ ಚೆನ್ನಾಗಿತೊಳೆಯಬೇಕು. ಇಲ್ಲವಾದಲ್ಲಿ ಇಲಿಗಳು ಹೊರಸೂಸಿದ್ದ ರಾಸಾಯನಿಕದ ವಾಸನೆಗೆ ಬೇರೆ ಇಲಿಗಳುಬೋನ್‌ಗಳಿಗೆ ಬೀಳುವುದಿಲ್ಲ. ಧಾನ್ಯಗಳನ್ನುಸಂಗ್ರಹಿಸುವ ಗೋದಾಮುಗಳಲ್ಲಿ ಇಲಿಗಳ ಪ್ರವೇಶ ಆಗದಂತೆ ಎಚ್ಚರ ವಹಿಸಬೇಕು ಎಂದರು.

ಕಾನೂನಿನ ನಿಯಂತ್ರಣವಿದೆ: ಬೆಳೆಗಳಿಗೆ ಹಾನಿ ಮಾಡುವ ಎಲ್ಲ ಪ್ರಾಣಿಗಳನ್ನು ಕೊಲ್ಲಲು ಕಾನೂನಿನ ನಿಯಂತ್ರಣವಿದೆ. ಉದಾಹರಣೆಗೆ ನವಿಲುಗಳು. ನವಿಲುಗಳು ಭಾರದಂತೆ ಸೆಣಬಿನ ದರವನ್ನು ಬೆಳೆ ಅಂತಿಮ ಹಂತಕ್ಕೆ ಬಂದಾಗ ಬೆಳೆಯ ಬೇಲಿ ಸುತ್ತಲೂ ಕಟ್ಟಬೇಕಿದೆ. ಬೆಳೆಗಳ ಹಾವಳಿ ಮಾಡುವ ಪ್ರಾಣಿಗಳ ನಿಯಂತ್ರಣದ ಬಗ್ಗೆ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆಯಬಹುದಾಗಿದೆ ಎಂದರು. ಜಿಕೆವಿಕೆ ಸಹಾಯಕ ಪ್ರಾಧ್ಯಾಪಕ ಡಾ.ಕೆ.ರವಿಕಿರಣ್‌, ಸಹಾಯಕ ಸಂಶೋಧಕ ಡಾ.ಬಸವ ದರ್ಶನ, ಸಿಬ್ಬಂದಿಚಂದ್ರಶೇಖರ್‌, ಕಂಟನಕುಂಟೆ ಗ್ರಾಪಂ ಅಧ್ಯಕ್ಷೆ ಶೋಭಾ, ಸದಸ್ಯ ರಾಮಚಂದ್ರ ರೆಡ್ಡಿ, ಶ್ರೀನಿವಾಸ ರೆಡ್ಡಿ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿ ಇದ್ದರು.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Stray dogs: ಅಂ.ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಾವಳಿ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Tragic: ಮರದ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ; ಕಾರ್ಮಿಕ ಸಜೀವ ದಹನ

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Market: ಬೆಲೆ ಕುಸಿತ; ಬೂದು ಕುಂಬಳ ಬೀದಿಪಾಲು!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

Crime: ಪಂಚೆ ಧರಿಸು ಎಂದಿದ್ದಕ್ಕೆ ಅಪ್ಪನನ್ನೇ ಕೊಂದ ಮಗ!

9-bng

Channapatna: ಸಾಲಕ್ಕೆ ಹೆದರಿ ದಂಪತಿ ನೇಣಿಗೆ ಶರಣು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.