ಕರ್ನಾಟಕ ರಾಜ್ಯೋತ್ಸವ ಸರಳ ಆಚರಣೆಗೆ ನಿರ್ಧಾರ
Team Udayavani, Oct 25, 2019, 3:02 PM IST
ದೊಡ್ಡಬಳ್ಳಾಪುರ: ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬ ಗಳ ಆಚರಣೆ ಸಮಿತಿ ವತಿಯಿಂದ ನ.1ರಂದು ಆಚರಿಸಲಾಗುವ ಕರ್ನಾಟಕ ರಾಜ್ಯೋತ್ಸವ ಕುರಿತಂತೆ ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿ, ನೆರೆ ಸಂತ್ರ ಸ್ಥರಿಗೆನೆರವು ನೀಡುವುದು ಸೂಕ್ತ ಎಂದು ಕನ್ನಡ ಪರ ಸಂಘಟನೆಗಳ ಮು ಖಂಡರು ಅಭಿಪ್ರಾಯಪಟ್ಟರು.
ವಾಲ್ಮೀಕಿ ಜಯಂತಿಯನ್ನೂ ಸರಳವಾಗಿ ಆಚರಿಸಲಾಗಿದೆ. ವಾಲ್ಮೀಕಿಜಯಂತಿಗೆ ಸರ್ಕಾರದಿಂದ ಮೀಸಲಿರಿಸಿದ ಅನುದಾನ ನೆರೆ ಸಂತ್ರಸ್ತರ ನಿಧಿಗೆ ಬಳಕೆಯಾಗಿಲ್ಲ. ಸರಳವಾಗಿ ಆಚರಿಸಿದರೆ ಕಾರ್ಯಕ್ರಮದ ವೆಚ್ಚವನ್ನು ಸಂತ್ರಸ್ತರಿಗೆ ತಲುಪಸುವ ಕಾರ್ಯವಾಗ ಬೇಕು. ಕಾರ್ಯಕ್ರಮದ ಸನ್ಮಾನಿ ತರನ್ನು ಗೌ ರ ವ ಯು ತವಾಗಿ ನಡೆಸಿಕೊಳ್ಳಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿಯೂ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಬೇಕು. ಇನ್ನು ಮುಂದೆ ವಾಣಿಜ್ಯ ಮಳಿಗೆ, ಸಾ ರ್ವಜನಿಕ ಫಲಕಗಳಲ್ಲಿ ನಾಮಫಲಕ ಕಡ್ಡಾಯವಾಗಬೇಕು. ನಗರ ಸಭೆಯಲ್ಲಿ ಕನ್ನಡ ಭಾಷೆಯ ಬಳಕೆಗೆ ಆದ್ಯತೆ ನೀಡಬೇಕು. ರಾಜ್ಯೋತ್ಸವದ ಸಂದ ರ್ಭದಲ್ಲಿ ಕನ್ನಡ ಪರ ವಾತಾವರಣ ನಿರ್ಮಿಸುವ ನಿಯಮಗಳು ಜಾರಿ ಯಾಗಬೇಕು ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು.
ಪುರಭವನದಲ್ಲಿ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮ, ತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣದೊಂದಿಗೆ ನಾಡಪರಂಪರೆಯನ್ನು ಸಾರುವ ಮೆರವಣಿಗೆಗೆ ಚಾಲನೆ ನೀಡಬೇಕು ಎಂದು ಸಲಹೆ ನೀಡಿದರು. ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ವಾಲ್ಮೀಕಿ ಜಯಂತಿ ಆ ಚರಣೆ ಅನುದಾನವನ್ನು ನೆರೆ ಸಂತ್ರಸ್ತರಿಗೆ ತಲುಪಿಸುವ ಸಿದ್ಧತೆ ನಡೆದಿವೆ. ಒಟ್ಟಾರೆ ಎಲ್ಲಾ ಮೊ ತ್ತ ಕ್ರೋ ಢೀ ಕ ರಿಸಿ ನೀಡಲಾಗುವುದು. ಸಭೆಯಲ್ಲಿ ವ್ಯಕ್ತವಾಗಿರುವ ಅಭಿ
ಪ್ರಾಯಗಳನ್ನು ಮನ್ನಿಸಿ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುವುದು, ನಾಮಫಲಕ ಕಡ್ಡಾಯ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬ ಗಳ ಆಚರಣೆ ಸಮಿತಿ ಅಧ್ಯಕ್ಷ ಟಿ. ಎ ಸ್. ಶಿವರಾಜ್ ಮಾತನಾಡಿದರು. ತಾಪಂಅಧ್ಯಕ್ಷ ಡಿ.ಸಿ.ಶಶಿಧರ್, ಬಿಇಒ ಬೈಯಪ್ಪ ರೆಡ್ಡಿ, ನಗರಸಭೆ ವ್ಯವಸ್ಥಾಪಕ ಮುಮ್ತಾಜ್‌ಪಾಷಾ ಸೇ ರಿ ದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Abhimanyu Kashinath; ಸೂರಿ ಲವ್ ಗೆ ಉಪ್ಪಿ ಮೆಚ್ಚುಗೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.