ಜಿಲ್ಲೆಯಲ್ಲಿ ಬೆಳಕಿನ ಹಬ್ಬದ ಸಡಗರ
Team Udayavani, Oct 25, 2022, 3:10 PM IST
ದೇವನಹಳ್ಳಿ: ಕತ್ತಲಿನಿಂದ ಬೆಳಕಿ ನಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವ ಭಾರತೀಯ ಪರಂಪರೆಯ ಬಹುದೊಡ್ಡ ಹಬ್ಬ ದೀಪಾವಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು.
ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಗೌರಿ ಪೂಜೆ ಮತ್ತು ಎಲ್ಲಾ ದೇವಾಲಯಗಳಲ್ಲೂ ಭಕ್ತರು ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು. ದೀಪಾವಳಿ ಎಂದರೆ ಕತ್ತಲೆಯಿಂದ ಬೆಳಕಿನೆಡೆ ಸಾಗುವುದನ್ನು ಸಂಕೇತಿಸುವ ಆಚರಣೆಯೇ ಬದುಕಿನ ಧ್ಯೇಯವಾಗಿರಬೇಕೆಂದು ಪುರಾಣ ಪೂರ್ವದ ಅನಾದಿಕಾಲದ ಉಪನಿಷತ್ತಿನ ಆಶಯವಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಎಂಬ ಹೆಮ್ಮಾರಿಯಿಂದ ದೀಪಾವಳಿ ಹಬ್ಬ ಸರಳ ವಾಗಿ ಆಚರಿಸಿದ್ದರು. ಈ ಬಾರಿ ಕೊರೊನಾ ಇಳಿಮುಖವಾಗಿರುವುದರಿಂದ ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ.
ಅಂಗಡಿಗಳಿಗೆ ವಿಶೇಷ ಅಲಂಕಾರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿಯೂ ವಿವಿಧ ದೇವಾಲಯಗಳಲ್ಲಿ ನರಕ ಚತುರ್ದಶಿ ದಿನದಂದು ಹಲವು ಮನೆತನಗಳಲ್ಲಿ ಪಾರಂಪರಿಕವಾಗಿ ಆಚರಿಸುವ ದೀಪಾ ವಳಿ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸ ಲಾಯಿತು. ಜಿಲ್ಲೆಯಲ್ಲಿ ಅಮವಾಸ್ಯೆಯ ಅಂಗವಾಗಿ ಲಕ್ಷ್ಮೀಪೂಜೆಯನ್ನು ನರೆವೇರಿಸಲಾಯಿತು. ರಾಜಸ್ಥಾನ ಮೂಲದ ವರ್ತಕರು ದೀಪಾವಳಿ ಅಮವಾಸ್ಯೆಯ ದಿನ ಹೊಸ ಲೆಕ್ಕಾಪುಸ್ತಕಗಳಿಗೆ ಪೂಜೆ ಮಾಡುವ ಪರಿ ಪಾಠವಿದ್ದು, ವಿಶೇಷವಾಗಿ ವರ್ತಕರು ಅಂಗಡಿಗಳನ್ನು ಅಲಂಕರಿಸಿ, ಲಕ್ಷ್ಮೀ ಪೂಜೆ ಮಾಡಿ, ಸಿಹಿ ಹಂಚಿದರು.
ದೀಪ ಬೆಳಗಿಸಿ ಭಕ್ತಿ ಭಾವದಿಂದ ಆಚರಣೆ: ದೇವನಹಳ್ಳಿ ಪಟ್ಟಣದ ವೀರಭದ್ರ ಸ್ವಾಮಿ, ಪರ್ವತೇಶ್ವರ, ನಗರೇಶ್ವರ, ಗಂಗಮ್ಮ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಗೌರಿ ದೇವಿ ಮತ್ತು ಕೇದಾರೇಶ್ವರ ಸ್ವಾಮಿಯ ಪ್ರತಿಷ್ಠಾಪನಾ ಕಾರ್ಯಗಳು ಬೆಳಗಿನಿಂದಲೇ ನಡೆದವು. ಮಹಿಳೆಯರು ಬಿದುರಿನ ಮರ ಮತ್ತು ಬೆಳ್ಳಿಯ ತಟ್ಟೆಯಲ್ಲಿ ಕಜ್ಜಾಯ, ಬಾಳೆಹಣ್ಣು, ಇತರೆ ವಸ್ತುಗಳನ್ನು ಇರಿಸಿ ಗೌರಿದೇವಿಗೆ ಸಮರ್ಪಿಸಿದರು. ಹಬ್ಬದಲ್ಲಿ ಕುಟುಂಬಸ್ಥರು ನೋಮಿದ ದಾರವನ್ನು ಕೈಗೆ ಕಟ್ಟಿಕೊಂಡಿದ್ದರು. ಮನೆ ಮನಬೆಳಗುವ ದೀಪದ ಬೆಳಕು ಎಲ್ಲೆಡೆ ಪಸರಿಸಬೇಕೆಂಬುವುದು ದೀಪಾವಳಿ ಹಬ್ಬದ ಸಂಕೇತವಾಗಿದ್ದು, ಪ್ರತಿ ಮನೆಯ ಬಾಗಿಲಿನಲ್ಲಿ ಸಂಜೆ ದೀಪ ಬೆಳಗಿದಿ ಭಕ್ತಿ ಭಾವದಿಂದ ಆಚರಿಸಲಾಯಿತು.
ಅದ್ದೂರಿ ಲಕ್ಷ್ಮೀ ಪೂಜೆ: ದೀಪಾವಳಿ ದಿನದಂತೆ ಲಕ್ಷ್ಮೀ ಹುಟ್ಟಿ ದ್ದಾಳೆಂಬ ಪ್ರತೀತಿ ಇದ್ದು, ಲಕ್ಷ್ಮೀದೇವಿಯನ್ನು ಪೂಜೆ ಮಾಡಿದರೆ, ಲಕ್ಷ್ಮೀ ಕಟಾಕ್ಷ ಇರುತ್ತದೆ ಎಂದು ಹಿರಿ ಯರು ಹೇಳುತ್ತಾರೆ. ದೀಪಾವಳಿ ದಿನವನ್ನು ಕೆಲವು ಪ್ರದೇಶಗಳಲ್ಲಿ ಕಾಳಿ ಚೌದಾಸ್, ಛೋಟಿ ದೀಪಾವಳಿ, ರೂಪ್ ಚತುರ್ದಶಿ ಅಥವಾ ರೂಪ್ ಚೌದಾಸ್ ಎಂದು ಕರೆಯುತ್ತಾರೆ. ಅನೇಕ ಕಡೆ ಲಕ್ಷ್ಮೀ ಪೂಜೆಯ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಮನೆಯ ಅಲಂಕಾರ ಮತ್ತು ದೀಪ ಬೆಳಗುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.
ಹಿಂದಿನ ಕಾಲದಲ್ಲಿ ಮನೆಯಲ್ಲಿರುವ ಹಂಡೆ ಮತ್ತು ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರು ತುಂಬಿ ಇಡಲಾಗುತ್ತದೆ. ತ್ರಯೋದಶಿಯ ದಿನ ಸಂಜೆ ನೀರನ್ನು ತುಂಬುವ ಈ ಕಾರ್ಯಕ್ಕೆ ನೀರು ತುಂಬುವ ಹಬ್ಬ ಎಂದು ಕರೆಯುತ್ತಾರೆ. ಮನೆಯಲ್ಲಿ ಪ್ರತಿಯೊಂದು ಪಾತ್ರೆ ಗಳಲ್ಲಿ ನೀರು ತುಂಬಿ ಇಡುವುದರಿಂದ ಗಂಗಾ ದೇವಿ ಯನ್ನು ಮನೆಗೆ ಆಹ್ವಾನಿಸಿದಂತೆ, ಶುದ್ಧತೆಯ ಪ್ರತೀಕ ವಾದ ಗಂಗಾದೇವಿಯನ್ನು ಸಾಂಪ್ರದಾಯಿಕವಾಗಿ ಆಹ್ವಾನಿಸಲಾಗುತ್ತದೆ. ವಿಷ್ಣು ದೇವರ ಪಾದವನ್ನು ತೊಳೆಯುವುದರ ಮೂಲಕ ಶುದ್ಧತೆಯನ್ನು ಗಂಗಾದೇವಿ ಪಡೆದುಕೊಂಡಿದ್ದಾಳೆ ಎನ್ನುವ ಕಥೆಯಿದೆ ಎಂದು ಹಿರಿಯರು ಹೇಳುತ್ತಾರೆ.
ನಮ್ಮ ಹಿರಿಯರು, ಪೂರ್ವಿಕರು ಆಚರಿಸಿಕೊಂಡು ಬಂದಿರುವ ಹಬ್ಬಗಳನ್ನು ನಾವೆಲ್ಲರೂ ಮುಂದುವರಿಸಿ ಕೊಂಡು ಹೋಗಬೇಕು. ಪ್ರತಿವರ್ಷ ದೀಪಾವಳಿಯಲ್ಲಿನ ಪರ್ವತೇಶ್ವರ ದೇವಾಲಯದಲ್ಲಿ ಗೌರಿದೇವಿಯನ್ನು ಪ್ರತಿಷ್ಠಾಪಿಸಿ, ಗೌರಿದೇವಿಗೆ ಮಹಿಳೆಯರು ಪೂಜೆ ಮಾಡುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.-ವೀರಭದ್ರಯ್ಯ, ಅರ್ಚಕರು, ಪರ್ವತೇಶ್ವರ ದೇಗುಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.