ನೇಕಾರರಿಗೆ ಉಚಿತ ವಿದ್ಯುತ್ ನೀಡಲು ಆಗ್ರಹ
Team Udayavani, Jun 24, 2023, 2:11 PM IST
ದೊಡ್ಡಬಳ್ಳಾಪುರ: ವಿದ್ಯುತ್ ದರ ಏರಿಕೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಚುನಾವಣೆ ಪೂರ್ವ ಭರವಸೆ ನೀಡಿರು ವಂತೆ ನೇಕಾರರಿಗೆ 20ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡಬೇಕು. ನೇಕಾರರಿಗೆ ಗುರುತಿನ ಚೀಟಿ ವಿತರಣೆ ಸೇರಿದಂತೆ ನೇಕಾರರ 14 ವಿವಿಧ ಬೇಡಿಕೆಗಳನ್ನು ನೀಡುವಂತೆ ಒತ್ತಾಯಿಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನೇಕಾರರ ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಕನ್ನಡ ಜಾಗೃತ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ಸರ್ವ ಪಕ್ಷಗಳ, ನೇಕಾರರ ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್ ಅವರು, ಸರ್ಕಾರ ವಿದ್ಯುತ್ ದರ ಸೇರಿದಂತೆ ವಿದ್ಯುತ್ ಬಿಲ್‌ಗಳಲ್ಲಿ ವಿವಿಧ ಶುಲ್ಕಗಳನ್ನು ಹೇರಿ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದೆ. ಸಂಕಷ್ಟದಲ್ಲಿರುವ ನೇಕಾರರಿಗೆ ವಿದ್ಯುತ್ ಬಿಲ್‌ಗಳು ದುಬಾರಿಯಾಗಿ ಗಾಯದ ಮೇಲೆ ಬರೆ ಎಳೆದಿದೆ ಎಂದರು.
ಉಚಿತ ವಿದ್ಯುತ್ ಯೋಜನೆ ಶೀಘ್ರ ಜಾರಿ ಮಾಡಿ: ನೇಕಾರರು ನೇಯ್ದ ಸೀರೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೋವಿಡ್ -19, ಜಿಎಸ್‌ಟಿಗಳಿಂದಾಗಿ ತತ್ತರಿಸಿದ ಉದ್ಯಮ ಇನ್ನೂ ಚೇತರಿಸಿಕೊಳ್ಳುತ್ತಿಲ್ಲ. ಈಗ ವಿದ್ಯುತ್ ದರಗಳನ್ನು ಏರಿಸಲಾಗಿದೆ. ಇದರೊಂದಿಗೆ ಪಿ.ಎಫ್ ದಂಡ, ಬಡ್ಡಿ, ಇತರೆ ಶುಲ್ಕಗಳು ಸೇರಿದಂತೆ ನೂರಾರು ರೂ ಹೆಚ್ಚಿಗೆ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಬಿಲ್ ಗಳ ದರ ದುಪ್ಪಟ್ಟಾಗಿವೆ. ಸರ್ಕಾರ ಏರಿಕೆಯನ್ನು ನವರು ಕೂಡಲೆ ಹಿಂಪಡೆಯಬೇಕು. ಚುನಾವಣೆ ಪೂರ್ವ ಭರವಸೆ ನೀಡಿರುವಂತೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆ ಶೀಘ್ರ ಜಾರಿ ಮಾಡಬೇಕು ಎಂದರು.
ನೇಕಾರರಿಗೆ ಗುರುತಿನ ಚೀಟಿಯನ್ನು ವಿತರಿಸಲು ಕ್ರಮವಹಿಸಿ, ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ 19 ಬಗೆಯ ಸೌಲಭ್ಯ ನೇಕಾರರಿಗೂ ವಿಸ್ತರಣೆ ಮಾಡಬೇಕು ಎಂಬ ಒತ್ತಾಯ ಸೇರಿ ಒಟ್ಟು 14 ಅಂಶಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ, ಜವಳಿ, ಇಂಧನ ಸಚಿವರ ಬಳಿಗೆ ಸರ್ವಪಕ್ಷಗಳ ಮತ್ತು ನೇಕಾರರ ಸಂಘಟನೆಗಳ ನಿಯೋಗ ಹೋಗಲು ಸಮಿತಿ ತೀರ್ಮಾನಿಸಿದೆ ಎಂದರು.
ಎಲ್ಲರೂ ಪಕ್ಷಾತೀತವಾಗಿ ಹೋರಾಡಿ: ಶಾಸಕ ಧೀರಜ್ ಮುನಿರಾಜು ಅವರಿಗೆ ನೌಕರರ ಬೇಡಿಕೆಗಳ ಈಡೇರಿಕೆ ಕುರಿತಂತೆ ವಿವಿಧ ನೇಕಾರರ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಧೀರಜ್ ಮುನಿರಾಜು, ನೇಕಾರರು ಹಾಗೂ ರೈತರ ಹೋರಾಟಕ್ಕೆ ಎಲ್ಲರೂ ಪûಾತೀತವಾಗಿ ಹೋರಾಡಬೇಕಿದೆ. ಈಗಾಗಲೆ ಕಾರ್ಮಿಕ, ಕೈಗಾರಿಕಾ, ಐಟಿಬಿಟಿ, ಜವಳಿ ಸಚಿವರನ್ನು ಖುದ್ದು ಭೇಟಿಯಾಗಿ ತಾಲೂಕಿನ ನೇಕಾರರ ಸಂಕಷ್ಟಗಳ ಬಗ್ಗೆ ವಿವರಿಸಿದ್ದೇನೆ. ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿಸುವ ಮನವಿಯನ್ನು ಮಾಡಲಾಗುತ್ತಿದೆ ಎಂದರು.
ವಿದ್ಯುತ್ ಮಗ್ಗಗಳ ಸಂಖ್ಯೆ ಹೆಚ್ಚಳ: ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಮಾತನಾಡಿ, ತಾಲೂಕಾದ್ಯಂತ ವಿದ್ಯುತ್ ಮಗ್ಗಗಳ ಸಂಖ್ಯೆ ಹೆಚ್ಚಾಗಿದೆ. ಜವಳಿ ಇಲಾಖೆಯಿಂದ ನಡೆಯುತ್ತಿರುವ ಕಾರ್ಯದಲ್ಲಿ ದಾಖಲಾಗಿರುವ ನೇಕಾರರ ಸಂಖ್ಯೆಗೂ ವಾಸ್ತವವಾಗಿ ನೇಕಾರಿಕೆಯಲ್ಲಿ ತೊಡಗಿರುವ ವ್ಯತ್ಯಾಸವಿದೆ. ಹೀಗಾಗಿ, ಪ್ರತಿಯೊಬ್ಬ ನೇಕಾರರನೂ ಗಣತಿ ಕಾರ್ಯದಲ್ಲಿ ನೋಂದಾಯಿಸಿಕೊಳ್ಳಬೇಕು. ಪಕ್ಷದ ನಮ್ಮ ಅಕ್ಕಪಕ್ಕದ ರಾಜ್ಯದಲ್ಲಿ ನೇಕಾರರಿಗೆ ನೀಡುತ್ತಿರುವ ಸೌಲಭ್ಯವನ್ನು ರಾಜ್ಯ ಸರ್ಕಾರ ರಾಜ್ಯದ ನೇಕಾರರಿಗೂ ನೀಡುವ ಮೂಲಕ ನೇಕಾರರ ಪರವಾಗಿ ನಿಲ್ಲಬೇಕಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟರ್ಕಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರ ತೇಜಸ್ವಿ, ಮುಖಂಡ ಸಂಜೀವ್ ನಾಯಕ್,ಆರ್.ಎಸ್. ಶ್ರೀನಿವಾಸ್, ಸಿ.ಸುರೇಶ್, ಕೆ. ಮಲ್ಲೇಶ್, ಎಂ.ಮುನಿರಾಜು, ಎಂ. ಚೌಡಯ್ಯ, ಕೆ. ರಕುಮಾರ್, ಸದಾಶಿವಪ್ಪ, ಎನ್. ರಾಜಶೇಖರ್, ಸಿ.ಅಶ್ವತ್, ಡಿ.ಎನ್.ಪ್ರಭಾಕರ್ ಹಾಗೂ ಮತ್ತಿತರರು ಇದ್ದರು.
ಧರ್ಮಾವರಂ ಶೈಲಿಯಲ್ಲಿ ಮಾರುಕಟ್ಟೆ ವ್ಯವಸ್ಥೆ: ಭರವೆಸೆ: ಸಹಕಾರ ಇಲಾಖೆಯಲ್ಲಿ ರೈತರಿಗಾಗಿ ವ್ಯವಸ್ಥಿತ-ವಿಭಾಗಗಳು, ಘಟಕಗಳಿವೆ. ಆದರೆ, ನೇಕಾರರಿಗಾಗಿ ಯಾವುದೇ ವ್ಯವಸ್ಥಿತ ಘಟಕಗಳು ಇಲ್ಲ. ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕಾ ಅವಲಂಬಿತರಿಗೆ ಕೇಂದ್ರ ಸರ್ಕಾರ ಡಬ್ಲ್ಯೂಪಿಒ ಯೋಜನೆಯಡಿ ಶೇ.4 ಬಡ್ಡಿದರದಲ್ಲಿ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡುತ್ತಿದೆ. ನಗರದ ಡಿ.ಕ್ರಾಸ್ ರಸ್ತೆಯಲ್ಲಿ ನೇಕಾರರ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ 10 ಗುಂಟೆ ಜಮೀನು ಮೀಸಲಿಟ್ಟಿದೆ. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ದಾಖಲೆಗಳಲ್ಲಿ ಜವಳಿ ಇಲಾಖೆ ಎಂದು ಬದಲಾಗಿದ್ದು, ವಾಣಿಜ್ಯ ಸಂಕೀರ್ಣ ಜಾಗ ರೇಷ್ಮೆ ಇಲಾಖೆ ಎಂದು ಬರುತ್ತಿದೆ. ಇದನ್ನು ಸರಿಪಡಿಸಿ, ಧರ್ಮಾವರಂ ಶೈಲಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ವಿದ್ಯುತ್ ಜಾಲಿತ ಮಗ್ಗಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕ್ರಮ ವಹಿಸಲಾ ಗುವುದು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.