ಧರ್ಮ ದ್ರೋಹಿಗಳನ್ನು ಕೂಡಲೇ ಬಂಧಿಸಿ
Team Udayavani, Nov 17, 2021, 12:40 PM IST
ವಿಜಯಪುರ: ಸಹಬಾಳ್ವೆಯಿಂದ ಜೀವನ ನಡೆ ಸಲು ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕನ್ನು ನೀಡಿದ್ದಾರೆ. ಅದನ್ನು ದುರುಪಯೋಗ ಪಡಿಸಿಕೊಂಡು ಹಿಂದು ಧರ್ಮದ ದೇವಾಲಯದಲ್ಲಿ ರಾತ್ರೋ ರಾತ್ರಿ ಅಮೇಧ್ಯವನ್ನು ತಂದು ದೇವರ ಮುಂದೆ ಬಿಸಾಡಿದ್ದು ಧರ್ಮಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಮುಂದೆ ಇದು ತೀವ್ರತರ ಹೋರಾಟಕ್ಕೆ ಮುನ್ನುಡಿ ಬರೆದಂತಾಗುತ್ತದೆ ಎಂದು ಬಿಜೆಪಿ ಟೌನ್ ಅಧ್ಯಕ್ಷ ಆರ್. ಸಿ. ಮಂಜುನಾಥ್ ತಿಳಿಸಿದರು.
ವಿಜಯಪುರ ಪಟ್ಟಣದ ಮೇಲೂರು ಮುಖ್ಯ ರಸ್ತೆ ನಾಗರಬಾವಿ ಬಳಿ ಇರುವ ವಿಜಯ ಮಾರುತಿ ಭಕ್ತ ಮಂಡಳಿ ದೇವಾಸ್ಥಾನ ದಲ್ಲಿ ಕಿಡಿಗೇಡಿಗಳು ದೇವಾಲಯದ ಗರ್ಭ ಗುಡಿಯಲ್ಲಿ ಮಲಮೂತ್ರಗಳನ್ನು ಗರ್ಭಗುಡಿಯ ತುಂಬಾ ಎಸೆದು ಹೋಗಿರುವ ವಿಚಾರ ಖಂಡಿಸಿ ಮಾತ ನಾಡಿದರು. ಯಾವುದೇ ಧರ್ಮದ ಆಚರಣೆಗೆ ಯಾರೂ ಧಕ್ಕೆ ತರುವಂತಿಲ್ಲ.
ರಾತ್ರೋ ರಾತ್ರಿ ಮಾಡಿರುವ ಕಿಡಿಗೇಡಿತನ ಹೇಡಿಗಳು ಮಾಡಿರು ವಂತಹ ಕೆಲಸ. ಇವತ್ತಿನ ಘಟನೆಯ ಬಗ್ಗೆ ಪೊಲೀ ಸರಿಗೆ ದೂರು ನೀಡುತ್ತಿದ್ದು, ಹಿಂದೆ ನಡೆದಂತಹ ಇಂತಹ ಕೃತ್ಯಗಳು ಮತ್ತು ಇಂದಿನ ಘಟನೆಗೆ ಕಾರಣರಾದವರನ್ನು ಕೂಡಲೇ ಕಂಡು ಹಿಡಿದು ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದರು. ಹಿಂದೂ ಜಾಗರಣಾ ವೇದಿಕೆಯ ಪ್ರಾಂತ್ಯ ಕಾರ್ಯದರ್ಶಿ ಮುನೀಂದ್ರ ಮಾತನಾಡಿ, ಹಿಂದುಗಳ ಭಾವನೆಗೆ ಧಕ್ಕೆ ತರುವ ಇಂತಹ ಕೆಲಸಗಳು ನಡೆದಾಗ ಅಧಿಕಾರಿ ವರ್ಗ ಶೀಘ್ರ ವಾಗಿ ಕ್ರಮ ತೆಗೆದುಕೊಳ್ಳಬೇಕು.
ನೆಲಮಂಗ ಲದ ಆಂಜನೇಯ ದೇವಾಲಯದಲ್ಲೂ ಇದೇ ರೀತಿ ಅಮೇಧ್ಯವನ್ನು ಎಸೆಯಲಾಗಿತ್ತು. ಡಿವೈ ಎಸ್‌ಪಿ ಹಾಗೂ ಜಿಲ್ಲೆಯ ಅಧಿಕಾರಿಗಳ ಗಮ ನಕ್ಕೂ ತಂದಿದ್ದೂ, ದೂರು ನೀಡಿದ್ದೇವೆ. ಇಂದಿ ನಿಂದ ಎರಡು ದಿನಗಳ ಕಾಲಾವಧಿ ಒಳಗೆ ತಪ್ಪಿತಸ್ಥರನ್ನು ಬಂಧಿಸಬೇಕು. ಯಾರೇ ಆಗಿರಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಇದು ಸಾಧ್ಯವಾಗದಿ ದ್ದರೆ ಧರಣಿ ಹೋರಾಟಕ್ಕೂ ನಾವು ಸಿದ್ಧ.
ಇದನ್ನೂ ಓದಿ:- ಹರಿ ಪಾತ್ರವನ್ನು ಎಂಜಾಯ್ ಮಾಡಿದ್ದೇನೆ – ನಟ ರಿಷಭ್ ಶೆಟ್ಟಿ
ಹಿಂದೂ ಜಾಗರಣಾ ವೇದಿಕೆಯ ಕಾರ್ಯ ಕರ್ತರು, ವಿಜಯಮಾರುತಿ ಭಕ್ತ ಮಂಡಳಿ ಹಾಗೂ ಹಿಂದೂ ಜನಾಂಗದವರು ಹಿಂದು ದೇವಾಯಲದಲ್ಲಿ ಆದ ಘಟನೆಯನ್ನು ಖಂಡಿಸಿ ಇದಕ್ಕೆ ಕಾರಣರಾದವರ ವಿರುದ್ಧ ಧಿಕ್ಕಾರ ಕೂಗಿ ಕೃತ್ಯ ಎಸಗಿದವರನ್ನು ಬಂಧಿಸು ವಂತೆ ಆಗ್ರಹಿಸಿದರು.
ಪಟ್ಟಣದ ಬಹುತೇಕ ಹಿಂದೂಗಳು ಸ್ಥಳಕ್ಕೆ ಆಗಮಿಸಿ ದೇವಾಲಯದಲ್ಲಿ ಆಗಿರುವ ಹೇಸಿಗೆ ಯನ್ನು ಕಂಡು ಆಕೊ›àಶ ವ್ಯಕ್ತಪಡಿಸಿ ದೇವಾ ಲಯವನ್ನು ಶುಚಿಗೊಳಿಸಲು ಗೋಮೂತ್ರವನ್ನು ಪ್ರೋಕ್ಷಣೆ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ವಿಜಯಪುರ ಠಾಣೆ ಯಲ್ಲಿ ದೂರು ದಾಖಲಿಸಿ ದರು. ಬೆಂಗಳೂರು ಡಿವೈಎಸ್‌ಪಿ ನಾಗರಾಜ್, ವಿಜಯಪುರ ವೃತ್ತ ನಿರೀಕ್ಷಕ ಕೆ. ಶ್ರೀನಿವಾಸ್, ಪಿ.ಎಸ್.ಐ ನಂದೀಶ್ ಆಗಮಿಸಿ ಸ್ಥಳ ಪರಿಶೀಲಿಸಿದರು.
“ಹಿಂದೂಗಳು ಶಾಂತಿ ಪ್ರಿಯರು, ದುಷ್ಕೃತ್ಯಗಳು ನಡೆದಾಗ ಹೆಚ್ಚು ಸಂಘಟಿತರಾಗುವುದಿಲ್ಲ ಎಂದು ಪೊಲೀಸರೇ ನಿರ್ಲಕ್ಷ್ಯ ಮಾಡಬೇಡಿ. ಕಡಿಮೆ ಸಂಖ್ಯೆಯಲ್ಲಿ ಬಂದು ವಿಚಾರಣೆ ಮಾಡಿಕೊಂಡು ಹೋಗಿದ್ದೀರಾ. ಇದೇ ರೀತಿ ಅಮೇಧ್ಯವನ್ನು ಚರ್ಚ್ ಅಥವಾ ಮಸೀದಿಯಲ್ಲಿ ಎಸೆದಿದ್ದರೆ ಪೊಲೀಸ್ ರಕ್ಷಣೆಗೆ ನಿಲ್ಲುತ್ತಿತ್ತು. ಜಿಲ್ಲೆಯಲ್ಲಿ ಹಿಂದೂ ದೇಗುಲಗಳಲ್ಲಿ ಇಂತಹ ಘಟನೆ ನಾಲ್ಕು ನಡೆದಿದ್ದರೂ ಇದನ್ನು ಸಾಮಾನ್ಯ ಎನ್ನುವಂತೆ ಪರಿಗಣಿಸಿದರೆ ಹಿಂದೂಗಳು ಇದನ್ನು ಸಹಿಸುವುದಿಲ್ಲ.” – ಆರ್.ಸಿ. ಮಂಜುನಾಥ್, ವಿಜಯಪುರ ಬಿಜೆಪಿ ಟೌನ್ ಅಧ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.