ಥಂಡ ಥಂಡ ಕಲ್ಲಂಗಡಿಗೆ ಬಹುಬೇಡಿಕೆ
Team Udayavani, Feb 23, 2022, 12:36 PM IST
ದೇವನಹಳ್ಳಿ: ಜಿಲ್ಲೆಯಲ್ಲಿ ಬೇಸಿಗೆ ರಣಬಿಸಿಲಿನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲಿನತಾಪಮಾನ ಹೆಚ್ಚಾಗುತ್ತಿದ್ದು ತಂಪು ಪಾನೀಯ ಹಾಗೂಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಸುಡುಬಿಸಿಲಿಗೆ ದೇಹಾಯಾಸ, ದಾಹ ನೀಗಿಸಿ, ದೇಹಕ್ಕೆ ತಂಪು ಒದಗಿಸುತ್ತಿದೆ ಕಲ್ಲಂಗಡಿ ಹಣ್ಣು.
ಜಿಲ್ಲೆಯ ಹವಾಮಾನ ವೈಪರಿತ್ಯದ ಪರಿಣಾಮವೋಏನೋ ಮಾರ್ಚ್, ಏಪ್ರಿಲ್ ಮಾಸದಲ್ಲಿ ಸುಡುತ್ತಿದ್ದಸೂರ್ಯದೇವ ಬೇಸಿಗೆ ತಿಂಗಳ ಮೊದಲೇ ಜಿಲ್ಲೆಯಪ್ರವೇಶವಾಗಿದ್ದು ಇದರ ಪರಿಣಾಮ ಜನ ಬಿಸಿಲಿನಿಂದ ಕಂಗಾಲಾಗಿ ಏದುಸಿರುವ ಬಿಡುವಂತಾಗಿದೆ.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಬಿಸಿಲಧಗೆ ಹೆಚ್ಚಾಗಿದ್ದು ಪ್ರತಿ ವರ್ಷದಂತೆ ಜನವರಿತಿಂಗಳಿನಿಂದ ಮೇ ತಿಂಗಳ ತನಕ ಕಲ್ಲಂಗಡಿ ಹಣ್ಣುಗಳಿಗೆಎಲ್ಲಿಲ್ಲದ ಬೇಡಿಕೆ ಇದೆ. ಬಿರು ಬೇಸಿಗೆಯಲ್ಲಿ ಜನರ ಬಾಯಾರಿಕೆ ನೀಗಿಸುತ್ತಿದೆ ಕೆಂಪು ತಂಪು ಕಲ್ಲಂಗಡಿ. ರಸ್ತೆಬದಿಗಳಲ್ಲಿ ಮಾರುಕಟ್ಟೆ ಗಳಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಕಲ್ಲಂಗಡಿ ಹಣ್ಣು ಕೈ ಬೀಸಿ ಕರೆಯುತ್ತಿದೆ.ಮೊದಲೆಲ್ಲಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಭಾಗದಲ್ಲಿ ನೀರು ಹೆಚ್ಚಾಗಿದ್ದಾಗ ಈ ಹಣ್ಣನ್ನುವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದರು. ಬೀಜ ಬಿತ್ತನೆಮಾಡಿದಾಗಿನಿಂದ ಕಟಾವು ಆಗುವ ತನಕ ಕಲ್ಲಂಗಡಿ ಬೆಳೆ ಪೋಷಣೆ, ರಕ್ಷಣೆ ಮಾಡಲಾಗುತ್ತಿತ್ತು ಎಂಬುದುಈ ಭಾಗದ ರೈತರ ಅಭಿಪ್ರಾಯ.
ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆಯಿಂದ ಅಂತರ್ಜಲ ಮಟ್ಟ ಕುಸಿತವಾದ ನಂತರ ಈ ಭಾಗದಿಂದಕಲ್ಲಂಗಡಿ ದೂರವಾಗಿತ್ತು. ವ್ಯಾಪಾರಸ್ಥರು ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ಖರೀದಿಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ.
ಒಂದು ಪೀಸ್ 20 ರೂ.: ಬೃಹತ್ ಗಾತ್ರದ ಕಲ್ಲಂಗಡಿ ರಾಶಿ ನಗರಕ್ಕೆ ಲಗ್ಗೆಯಿಟ್ಟಿದೆ. ಒಂದೊಂದು ಕಲ್ಲಂಗಡಿಹಣ್ಣು ಕನಿಷ್ಠ 4 ರಿಂದ 10 ಕೆ.ಜಿ.ಯವರೆಗೆ ತೂಕವಿದೆ.ಉಂಡೆ ಕೊಳ್ಳುವ ಗ್ರಾಹಕರು ಗ್ರಾಮೀಣ ಭಾಗದಲ್ಲಿ ಅವಿಭಕ್ತ ಕುಟುಂಬಸ್ಥರಾಗಿದ್ದರೇ ಬೃಹತ್ ಗಾತ್ರದಕಲ್ಲಂಗಡಿ ಖರೀದಿಸಿದರೇ, ವಿಭಕ್ತ ಕುಟುಂಬದವರು ಕಿರುಗಾತ್ರದ ಕಲ್ಲಂಗಡಿ ಕೊಂಡೊಯ್ಯುತ್ತಿದ್ದಾರೆ. ಇನ್ನೂಕೆಲವರು ಮನೆಗೆ ಒಯ್ಯೋದು ಕಷ್ಟ ಅಂತ ಅಲ್ಲೇ ಪೀಸ್ ಒಂದಕ್ಕೆ ಎಷ್ಟಪ್ಪ..? 20 ರೂಪಾಯಿನಾ..? ಸ್ಪಲ್ಪ ಜಾಸ್ತಿ ಆಯ್ತಲ್ವಾ..? ಸರಿ ಕೊಡಪ್ಪ ಅಂತ ಹೇಳಿ ಅಲ್ಲೇರುಚಿ ನೋಡಿ ಸವಿದು ಹೋಗುತ್ತಿದ್ದಾರೆ. ಈ ಬಾರಿಕಲ್ಲಂಗಡಿ ವ್ಯಾಪಾರ ಜೂನ್ ತಿಂಗಳವರೆಗೂ ಬೆಲೆ ಸ್ಥಿರತೆ ಕಾಯ್ದುಕೊಳ್ಳಲಿದೆ ಎಂಬುದು ಕಲ್ಲಂಗಡಿ ಹಣ್ಣಿನ ವ್ಯಾಪಾರಸ್ಥರ ಮಾತು.
ಬಹುಪಯೋಗಿ ಕಲ್ಲಂಗಡಿ: ಕಲ್ಲಂಗಡಿ ಹಣ್ಣಿನಲ್ಲಿ ಔಷಧೀಯ ಗುಣಗಳಿದ್ದು, ದೇಹದ ಉಷ್ಣಾಂಶ ಸಮತೋಲನದಲ್ಲಿಡುತ್ತದೆ. ಮುಖದಲ್ಲಿ ಕಪ್ಪನೆಯಕಲೆಗಳಿದ್ದರೆ ಅದನ್ನು ಕಡಿಮೆ ಮಾಡಲು ಕಲ್ಲಂಗಡಿಉಪಯೋಗಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಣ್ಣಿನಿಂದ ತಯಾರು ಮಾಡುವ ಜ್ಯೂಸ್‌ಗಳಜೊತೆ ಕೆಲಅಡುಗೆಯವರು ಪಾಯಸ, ದೋಸೆ ಮಾಡಲು ಹೊರಟಿರುವುದು ಇದರ ಜನಪ್ರಿಯತೆ ಹೆಚ್ಚಿಸಿದೆ.
ಮದುವೆ ಮನೆಯಲ್ಲೂ ಕಲ್ಲಂಗಡಿ ಹಣ್ಣುಗಳಲ್ಲಿ ವಿವಿಧ ಕಲಾಕೃತಿಗಳನ್ನು ರಚಿಸಿ ಅವುಗಳನ್ನು ಅಲಂಕಾರಿಕ ವಸ್ತುವಾಗಿ ಗಮನಸೆಳೆಯಲಾಗುತ್ತಿದೆ. ಕಲ್ಲಂಗಡಿ ಹಣ್ಣು ಹೆಚ್ಚು ಎಂದರೆ ಏಪ್ರಿಲ್ ಕೊನೆಯ ವರೆಗೂ ಮಾರುಕಟ್ಟೆಯಲ್ಲಿ ಸಿಗಲಿದೆ. ಒಂದು ಪ್ಲೇಟ್ ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಬೆಲೆ 10 ರೂ ಇದೆ.
ಜಿಲ್ಲೆಯಲ್ಲಿ ನೆಲಮಂಗಲ ಮತ್ತುಹೊಸಕೋಟೆಗಳಲ್ಲಿ ಕಲ್ಲಂಗಡಿ ಹಣ್ಣನ್ನುಬೆಳೆಯುತ್ತಾರೆ. ನೆರೆಯ ಆಂಧ್ರಪ್ರದೇಶದಿಂದನಾವು ಕಲ್ಲಂಗಡಿ ತರಿಸುತ್ತಿದ್ದು ಸಾಗಾಣಿಕೆ ವೆಚ್ಚಹೆಚ್ಚಿಗಿರುವುದರಿಂದ ಹಣ್ಣಿನ ಬೆಲೆ ದುಬಾರಿಆಗಿದೆ. ಕಳೆದ ಬಾರಿ 10ರೂ.ಗೆ ಒಂದು ಪೀಸ್‌ಮಾರಾಟ ಮಾಡುತ್ತಿದ್ದೆವು. ಈಗ 20ರೂ.ಗೆಮಾರಾಟ ಮಾಡುತ್ತಿದ್ದೇವೆ.–ಲಕ್ಷ್ಮೀ, ಕಲ್ಲಂಗಡಿ ಹಣ್ಣು ಮಾರಾಟಗಾರ.
ಕಲ್ಲಂಗಡಿ ಹಣ್ಣಿನ ರಸ ಕಣ್ಣುರಿ, ಕಜ್ಜಿ, ತುರಿಕೆಗಳ ಶಮನಕ್ಕೂರಾಮಭಾಣದಂತೆ ಉಪಯೋಗಿಸಬಹುದು. ಹಣ್ಣಿನ ಸಿಪ್ಪೆಔಷಧಿಯಾಗಿ ಬಳಸುತ್ತಾರೆ. ಮಲಬದ್ದತೆ ಬಾಧೆಗೆ ಸಿಪ್ಪೆ ಬಳಕೆಮಾಡುತ್ತಾರೆ. ಎಲೆಗಳು ಕಹಿಯಾಗಿದ್ದು, ರಕ್ತ ಶುದ್ಧಿಗೊಳಿಸುತ್ತದೆ.ಕಾಲಿನ ಊತಕ್ಕೆ ಕಲ್ಲಂಗಡಿ ಬೀಜ ಬಳಸುತ್ತಾರೆ. ಕಲ್ಲಂಗಡಿ ಹಣ್ಣಿನಲ್ಲಿಪೊಟಾಶಿಯಂ, ಮಿಟಮಿನ್ ಸಿ, ಅತ್ಯಧಿಕ ಪ್ರಮಾಣದಲ್ಲಿದೆ. ಇದರಸೇವನೆಯಿಂದ ರಕ್ತದೊತ್ತಡ ಕಡಿಮೆ ಮಾಡಬಹುದು. ಬಿರು ಬೇಸಿಗೆಗೆ ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಬಾಯಾರಿಕೆ ಇರುವುದಿಲ್ಲ– ವೆಂಕಟರಾಜು, ನಾಟಿ ವೈದ್ಯ, ಬೈಜಾಪುರ ಗ್ರಾಮ
ಜಿಲ್ಲೆ ಪ್ರಸಕ್ತ ವರ್ಷದಲ್ಲಿ ಸುಮಾರು 54 ಹೆಕ್ಟೇರ್‌ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣಿನ ಬೆಳೆ ಬೆಳೆಯುತ್ತಾರೆ.ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭಗೊಂಡನಂತರ ಖಾಸಗಿ ಭೂಮಿ ಮಾರಾಟ ಹೆಚ್ಚಾಗಿದ್ದು, ಕೃಷಿಮತ್ತು ತೋಟಗಾರಿಕಾ ಬೆಳೆ ಶೇ.20%ರಷ್ಟು ಅಪೋಶನಮಾಡಿಕೊಂಡಿದೆ. ಈ ಬೆಳೆಯನ್ನು ಬೆಳೆಯಲು ನೀರುಯಥೇತ್ಛವಾಗಿ ಬೇಕಾಗುತ್ತದೆ.– ಗುಣವಂತ, ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ
-ಎಸ್. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.