ಕಹಿಯಾದ ಟೊಮೆಟೋ, ಹುಣಸೆಹಣ್ಣಿಗೆ ಬೇಡಿಕೆ
Team Udayavani, Jul 20, 2023, 1:12 PM IST
ದೇವನಹಳ್ಳಿ: ಟೊಮೆಟೋ ಬೆಲೆ ಗಗನಕ್ಕೆ ಇರುವ ನಡುವೆಯೇ ಹುಣಸೆಹಣ್ಣಿನ ಬೆಲೆ ಹೆಚ್ಚಳವಾಗಿದೆ. ಕೆಂಪು ರಾಣಿ ಟೊಮೆಟೋ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದು, ಪರ್ಯಾಯವಾಗಿ ಹುಣಸೆಹಣ್ಣಿನ ಹೋಗುತ್ತಿದ್ದಾರೆ. ಇದೇ ಸಮಯಕ್ಕೆ ಹುಳಿ ರಾಜ ಹುಣಸೇಹಣ್ಣಿನ ಬೆಲೆಯೂ ಏರು ಮುಖದಲ್ಲಿದೆ. ಈ ವರ್ಷ ಹುಣಸೆ ಹಣ್ಣಿನ ದಾಟಿ ಮುಂದೆ ಹೋಗಿದೆ.
ಹುಣಸೆ ಹಣ್ಣಿನ ಬೆಲೆ 160ಕ್ಕೆ ಏರಿಕೆಗೊಂಡಿದೆ. ಟೊಮೆಟೋ ಹಣ್ಣಿಗೆ ಬೆಳೆ ಹೆಚ್ಚಾಗಿದೆ ಇದಕ್ಕೆ ಪೂರಕ ಎಂಬಂತೆ ದರ ಏರಿಕೆಯಾಗುತ್ತಿರುವುದು ಮಾತ್ರ ಸತ್ಯ. 15 ಕೆ.ಜಿ. ಟೊಮೆಟೋ ಬಾಕ್ಸ್ ದಾಖಲೆ 2300 ಮಾರಾಟವಾಗುತ್ತಿದ್ದು. ಚಿನ್ನದ ಮಾರುಕಟ್ಟೆಯಲ್ಲಿ ಕೆ.ಜಿ. ಟೊಮೆಟೋ 140, ಗುಣಮಟ್ಟದ ಟೊಮೆಟೋ 150 ಮಾರಾಟವಾಗುತ್ತಿದೆ. ಬಡವರು ಮಧ್ಯಮ ವರ್ಗದವರು ಟೊಮೆಟೋ ಖರೀದಿಗೆ ಹಿಂದೇಟು ಹಾಕು ವಂತಾಗಿದೆ. ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಳ್ಳಲು ಜನರು ಹುಣಸೆಹಣ್ಣಿನ ಮೊರೆ ಹೋಗಿದ್ದಾರೆ. ಈಗ ಅದು ಕೂಡ ದುಬಾರಿ ಆಗುತ್ತಿದೆ. ಈಗ ಟೊಮೆಟೋ ಪರ್ಯಾಯವಾಗಿ ಹುಣಸೆಹಣ್ಣು ಬಳಸುತ್ತಿದ್ದವರಿಗೂ ಈಗ ಅದರ ಬಿಸಿ ತಟ್ಟಿ ತೊಡಗಿದೆ. ಕಳೆದ 2 ವರ್ಷಗಳ ಹಿಂದೆ ಹುಣಸೇಹಣ್ಣಿನ ಬೆಲೆ ಇಳಿಕೆಯಾಗಿ ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು. ಟೊಮೆಟೋ ಏರಿಕೆ ಇಳಿಯಂಗಿಲ್ಲ.
ಹುಣಸೆಹಣ್ಣು ಏರಂಗಿಲ್ಲ: ಮಾರುಕಟ್ಟೆಯಲ್ಲಿ ಟೊಮೆಟೋ ದರ ಗಗನಕ್ಕೇರುತ್ತಿದ್ದಂತೆ ಸಾರು ಮಾಡಲು ಹುಣಸೇಹಣ್ಣು ಇದೆ ಎಂದು ಹೆಣ್ಣುಮಕ್ಕಳು ಹೇಳುತ್ತಿದ್ದ ಮಾತು ಅದ್ಹೇಕೋ ಈ ಬಾರಿ ಹುಸಿಯಾದಂತೆ ಕಾಣಿಸುತ್ತಿದೆ. ಟೊಮೆಟೋ ಏರಿಕೆ ಇಳಿಯಂಗಿಲ್ಲ. ಹುಣಸೆಹಣ್ಣು ಏರಂಗಿಲ್ಲ ಎಂಬಂತಾಗಿದೆ ಸದ್ಯದ ಪರಿಸ್ಥಿತಿಯಾಗಿದೆ.
ರೈತರಿಗೆ ದಿಕ್ಕು ತೋಚದ ಪರಿಸ್ಥಿತಿ: ಜಿಲ್ಲೆಯ ಹುಣಸೆಹಣ್ಣಿನ ವಹಿವಾಟು ನಡೆಯುತ್ತಿದ್ದು ದಿಡೀರ್ ಬೆಲೆ ಇಳಿಕೆ ಕಂಡಿರುವುದು ಬೆಳೆ ಗಾರರನ್ನು ಚಿಂತೆಗೀಡು ಮಾಡಿದೆ. ಹುಣಸೇಹಣ್ಣು ಮಾರುಕಟ್ಟೆ ಪ್ರವೇಶಿಸುವ ಆರಂಭದಲ್ಲಿ ಬೆಲೆ ಇದ್ದು ಬೆಳೆಗಾರರಲ್ಲಿ ಸಂತಸ ತಂದಿತ್ತು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಹುಣಸೇ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಬೆಲೆ ಇಲ್ಲದಂತಾಗಿದ್ದು, ರೈತರಿಗೆ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ.
ಹುಣಸೆಹಣ್ಣಿನ ಮಾರುಕಟ್ಟೆಗೆ ಹೆಸರಾದ ಚಿಂತಾಮಣಿ: ತುಮಕೂರು ಬಿಟ್ಟರೆ ಬಯಲುಸೀಮೆ ಕೋಲಾರ, ಚಿಕ್ಕಬಳ್ಳಾಪುರ ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಹುಣಸೆಹಣ್ಣನ್ನು ರಫ್ತು ಮಾಡುತ್ತಾರೆ. ಏಕೈಕ ಹುಣಸೆಹಣ್ಣಿನ ಮಾರುಕಟ್ಟೆಗೆ ಹೆಸರಾದ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇದೆ. ಆದರೆ, ಬೆಲೆ ಕುಸಿತದಿಂದ ಹುಣಸೆ ಬೆಳೆಗಾರರಿಗೆ ಹಾಕಿದ ಬಂಡವಾಳವೂ ಕೈಸೇರುತ್ತಿಲ್ಲ ಎಂಬ ಅಳಲು ಬೆಳೆಗಾರರಿಂದ ಕೇಳಿ ಬರುತ್ತಿದೆ. ಬಯಲು ಸೀಮೆ ಜಿಲ್ಲೆಗಳ ರೈತರಿಗೆ ಹುಣಸೆ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಳೆದ ವರ್ಷ ಉತ್ತಮ ಮಳೆ ಆಗಿ ಫಸಲು ನಿರೀಕ್ಷೆಗೂ ಮೀರಿ ಬಂದಿದೆ. ಕೊಯ್ಲು ಮಾಡಿ ಹೊಟ್ಟು ತೆಗೆದು ಕಾಯಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಹುಣಸೆ ಕಡಿಮೆ ಬೆಲೆಗೆ ಮಾರಾಟ ಹಾಕುತ್ತಿದ್ದ ಕೂಲಿ ಸಾಗಾಟದ ವೆಚ್ಚ ಕೈಗೆ ಬರುತ್ತಿಲ್ಲ ಎಂದು ಹುಣಸೆ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡರು.
ಹುಣಸೆಹಣ್ಣು ಎಷ್ಟು ಹಳೆಯದಾಗಿರುತ್ತದೋ ಅಷ್ಟು ಗುಣಮಟ್ಟವನ್ನು ಪಡೆಯುತ್ತದೆ. ಸಾರಿಗೂ ಹಳೇ ಹುಣಸೆ ಹಣ್ಣನ್ನು ಬಳಸುತ್ತಾರೆ. ಸಾರು ಮತ್ತಷ್ಟು ರುಚಿಕರವಾಗಿರುತ್ತದೆ. ಹಳೇ ಹುಣಸೆಹಣ್ಣಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಹುಣಸೆ ಹಣ್ಣು ಬೆಲೆ ಕುಸಿದಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾದರೆ ತಿಂಗಳಗಟ್ಟಲೆ ಕಾಯಬೇಕು. ಆದರೆ ಬೆಲೆ ಕುಸಿತ ಕಂಡಾಗ ಸರ್ಕಾರಗಳು ರೈತರ ನೆರವಿಗೆ ಬರುವುದಿಲ್ಲ ಎಂದು ಬೆಳೆಗಾರರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸರ್ಕಾರ ಹುಣಸೆ ಬೆಳೆಗಾರರ ನೆರವಿಗೆ ಧಾವಿಸಿ ಬೆಂಬಲ ಬೆಲೆ ನೀಡಬೇಕೆಂದು ಒತ್ತಯ ಮಾಡುತ್ತಿದ್ದಾರೆ. ಹುಣಸೆಹಣ್ಣನ್ನು ಮರದಿಂದ ಕಿತ್ತ ನಂತರ ಮೇಲ್ಭಾಗದ ತೊಗಟೆ ತೆಗೆದು ಬೀಜವನ್ನು ಹುಣಸೆಹಣ್ಣಿನಿಂದ ಬೇರ್ಪಡಿಸಬೇಕು. ವಾತಾವರಣ ತುಸು ಬಿಸಿಲಿನಿಂದ ಕೂಡಿದರೆ ಹಣ್ಣು ಪ್ರತ್ಯೇಕಿಸುವುದು ಸುಲಭ. ಆದರೆ ಕಳೆದ ಒಂದು ತಿಂಗಳಿನಿಂದ ಎಡೆಬಿಡದೆ ಸುರಿದ ಮಳೆ ಕೂಡಾ ಹುಣಸೆ ಫಸಲು ಕೊಯ್ಯಲು ಅಡ್ಡಿ ಮಾಡಿತು. ತೇವಾಂಶವಿದ್ದರೆ ಹುಣಸೆಹಣ್ಣು ಕೈಗೆ ಅಂಟುತ್ತದೆ. ಹಾಗಾಗಿ ರೈತರು ಮರದಿಂದ ಕೀಳುವುದೇ ಮರೆತರು. ಹುಣಸೆಹಣ್ಣು ಕೃಷಿಗೆ ಬರುತ್ತದೋ, ತೋಟಗಾರಿಕೆ ವ್ಯಾಪ್ತಿಗೋ ಎಂಬಿತ್ಯಾದಿ ಗೊಂದಲದಲ್ಲಿ ಇದ್ದಾರೆ.
ಹುಣಸೆಹಣ್ಣು ದರ ಹೆಚ್ಚಾಗಿದ್ದಾಗ ರೈತರಲ್ಲಿ ಸಂತಸ ಇತ್ತು. ಇದೀಗ ಬೆಲೆ ಇಳಿಕೆಯಾಗಿರುವುದರಿಂದ ದಿಕ್ಕು ತೋಚದಂತಾಗಿದೆ. ಹತ್ತು ಹದಿನೈದು ರೂ. ಗೆ ನೀಡಿದರೆ ಯಾವುದೇ ಉಪಯೋಗವಾಗುವುದಿಲ್ಲ. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಹೆಚ್ಚಳವಾಗಿರುವುದರಿಂದ ಜೀವನ ಸಾಗಿಸುವುದೇ ಕಷ್ಟವಾಗಿದೆ. ● ದೇವರಾಜ್, ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.