ಮತಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ
Team Udayavani, Apr 9, 2018, 4:13 PM IST
ದೇವನಹಳ್ಳಿ: ಗಣಕಯಂತ್ರದ ಮುಖಾಂತರ ಮತ ಹಾಕುವುದಕ್ಕೆ ಭಯ ಪಡುವ ಸ್ಥಿತಿ ನಿರ್ಮಾಣವಾಗಬಾರದು. ತಾವು ಯಾವ ಗುರುತಿಗೆ ಮತ ಹಾಕಿದ್ದೇವೆ ಎಂಬುದು 7 ಸೆಕೆಂಡ್‌ಗಳ ಕಾಲ ನೋಡಲು ಅವಕಾಶ ಇರುತ್ತದೆ.
ಅದರಲ್ಲಿ ಗಮನಿಸಿ ಖಾತರಿ ಮಾಡಿಕೊಳ್ಳುವುದಕ್ಕೆ ಈ ಬಾರಿ ಇನ್ನೊಂದು ಯಂತ್ರವು ಇರುತ್ತದೆ ಎಂದು ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿ ವೇಣುಗೋಪಾಲ್ ಮಾಹಿತಿ ನೀಡಿದರು. ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಸರ್ಕಲ್‌ನಲ್ಲಿ ಮತಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಮತಯಂತ್ರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಗ್ರಾಮಗಳಲ್ಲಿ ತಿಳಿವಳಿಕೆ ನೀಡಲಾಗಿದೆ.
ಈಗಾಗಲೇ ಬೆಟ್ಟಕೋಟೆ, ಬಾಲೇಪುರ, ಗಂಗವಾರ ಚೌಡಪ್ಪನಹಳ್ಳಿ ಇತರ ಗ್ರಾಮಗಳಲ್ಲಿ ಮತಯಂತ್ರದ ಮೂಲಕ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಅರಿವು ಮೂಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ನಲ್ಲೂರು ಗ್ರಾಮ ಲೆಕ್ಕಾಧಿಕಾರಿ ಗೌತಮ್, ಸಹಾಯಕ ಸಂತೋಷ್, ವೆಂಕಟೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.