Devanahalli: ಹೆದ್ದಾರಿ 207ರಲ್ಲಿ ಸಮಸ್ಯೆಗಳ ಸರಮಾಲೆ


Team Udayavani, Sep 10, 2023, 3:11 PM IST

Devanahalli: ಹೆದ್ದಾರಿ 207ರಲ್ಲಿ ಸಮಸ್ಯೆಗಳ ಸರಮಾಲೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದಾಬಾಸ್‌ ಪೇಟೆಯಿಂದ ಹೊಸಕೋಟೆವರೆಗೆ ನಿರ್ಮಾಣ ಆಗಿರುವ ರಾಷ್ಟ್ರೀಯ ಹೆದ್ದಾರಿ 207 ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಎಲ್ಲೆಡೆ ಸಮಸ್ಯೆ ಇದ್ದೆ ಇದೆ. ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ತಾಲೂಕಿನ ಸಾವಕನಹಳ್ಳಿ ಮತ್ತು ದೇವನಹಳ್ಳಿ ಪಟ್ಟಣದ ರಾಣಿ ವೃತ್ತ, ರಾಷ್ಟ್ರೀಯ ಹೆದ್ದಾರಿ ರಸ್ತೆ ಪರಿಶೀಲಿಸಿ ದರು. ಸಾವಕನಹಳ್ಳಿ ಗ್ರಾಮಸ್ಥರಿಂದ ಗ್ರಾಮ ಸಂಪರ್ಕ ಅವೈಜ್ಞಾನಿಕ ರಸ್ತೆ ಸಂಬಂಧ ಪಟ್ಟಂತೆ ಮನವಿ ಪತ್ರ ಸ್ಪೀಕರಿಸಿ ಮಾತನಾಡಿದರು. ಎಲ್ಲ ಕಡೆಗಳ ಲ್ಲಿಯೂ ಸಮಸ್ಯೆಯಿದೆ. ಪರಿ ಶೀಲಿಸಲಾಗುತ್ತಿದೆ. ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಸಮಸ್ಯೆ ನಿವಾರಣೆಗೆ ಒತ್ತು: ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಗ್ರಾಮಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ನಿಗ ವಹಿಸಬೇಕು. ರಸ್ತೆ ಪೂರ್ಣಗೊಂಡಿದ್ದರು ಸಹ ಸಹ ಸಮಸ್ಯೆ ಇರುವ ಕಡೆ ಬಗೆಹರಿಸಿಕೊಡಬೇಕು. ಸಾರ್ವ ಜನಿಕರಿಗೆ ಅನುಕೂಲ ಕಲ್ಪಿಸುವ ಕೆಲಸ ಆಗಬೇಕು. ಹೆದ್ದಾರಿ ಸಂಪರ್ಕ ಗ್ರಾಮಗಳಿಗೆ ತೊಂದರೆ ಆಗದಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗು ತ್ತದೆ. ಸಾಧ್ಯವಾದಷ್ಟು ಕ್ರಮ ವಹಿಸಲಾಗುತ್ತದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿರುತ್ತದೆ. ಸಾಧ್ಯವಾದರೆ ಅಧಿ ಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ಕೊಡುವ ಪ್ರಯತ್ನ ಮಾಡಲಾಗುತ್ತದೆ. ಈಗಾ ಗಲೇ ದಾಬಸ್‌ ಪೇಟೆಯಿಂದ ಹೊಸಕೋಟೆವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಪರಿಶೀಲನೆ ಮಾಡುತ್ತಿದ್ದೇನೆ. ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಸರ್ವಿಸ್‌ ರಸ್ತೆ ಅವೈಜ್ಞಾನಿಕ: ರಾಷ್ಟ್ರೀಯ ಹೆದ್ದಾರಿ 207ರ ಸಾವಕನಹಳ್ಳಿ, ಮಾಳಿಗೇನಹಳ್ಳಿ ಬಳಿ ನಿರ್ಮಾಣವಾಗಿರುವ ಸರ್ವಿಸ್‌ ರಸ್ತೆ ಅವೈ ಜ್ಞಾನಿಕವಾಗಿದೆ ಎಂದು ಆರೋಪಿಸಿ ಸರ್ವೀಸ್‌ ರಸ್ತೆ ಗ್ರಾಮಸ್ಥರ ಆಗ್ರಹದಂತೆ ಸರಿಪಡಿಸಿಕೊಡ ಬೇಕೆಂದು ಒತ್ತಾ ಯಿಸಿ ಸಾವಕನಹಳ್ಳಿ ಮತ್ತು ಮಾಳಿಗೇನಹಳ್ಳಿ ಸೇರಿದಂತೆ ಅಕ್ಕಪಕ್ಕದ ರೈತರು ಮತ್ತು ಸಾರ್ವಜನಿಕರು ಆಗ್ರಹಿ ಸಿದರು.

ಮೇಲ್ಸೇತುವೆ ಪರಿಶೀಲನೆ: ದೇವನಹಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 207ರ ಸಾವಕನಹಳ್ಳಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಗೇಟ್‌ ಬಳಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಿಕಿಹೊಳಿ, ಕೆ.ಎಚ್‌.ಮುನಿಯಪ್ಪ ಮತ್ತು ಶಾಸಕ ಶರತ್‌ ಬಚ್ಚೇಗೌಡ ಸೇರಿದಂತೆ ಜಿಲ್ಲಾಧಿಕಾರಿ ಎನ್‌.ಶಿವಶಂಕರ್‌ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು. ಸ್ಥಳದಲ್ಲಿ ರಸ್ತೆ ಕಾಮಗಾರಿ ಮತ್ತು ಸರ್ವಿಸ್‌ ರಸ್ತೆ ಸಂಪೂರ್ಣ ಮಾಹಿತಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯವಸ್ಥಾಪಕ ಜಗದೀಶ್‌ ಅವರೊಂ ದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು.

ಕಾಮಗಾರಿ ಸರಿಯಿಲ್ಲ: ಸಚಿವ ಸತೀಶ್‌ ಜಾರಿಕಿ ಹೊಳಿ ಹಾಗೂ ಕೆ.ಎಚ್‌.ಮುನಿಯಪ್ಪ ಅವರೊಂ ದಿಗೆ ಸ್ಥಳೀಯ ಕಾಂಗ್ರೆಸ್‌ ಮುಖಂಡ ಗ್ರಾಪಂ ಅಧ್ಯಕ್ಷ ಎಸ್‌ಪಿ ಮುನಿರಾಜ್‌ ಮಾತನಾಡಿ, ಹೆದ್ದಾರಿ ಕಾಮಗಾರಿ ಅವೈಜ್ಞಾನಿ ಕವಾಗಿದೆ. ನಾಮ ಫ‌ಲಕದಲ್ಲಿ ಹಾಕಿರುವ ದಿಕ್ಸೂಚಿಯಂತೆ ಕಾಮ ಗಾರಿ ಸರಿಯಾಗಿ ಮಾಡಿಲ್ಲ. ಸ್ಥಳೀಯವಾಗಿ ರೈತರಿಗೆ, ಜನರಿಗೆ ಸಾಕಷ್ಟು ಅನಾನುಕೂಲ ವಾಗುತ್ತಿದೆ. ಅಪಘಾತಗಳಿಗೂ ಕಾರಣವಾಗುತ್ತಿದೆ ಎಂದು ಮನವರಿಕೆ ಮಾಡಿದರು. ‌

ಜಿಲ್ಲಾಧಿಕಾರಿ ಎನ್‌.ಶಿವಶಂಕರ್‌, ಮಾಜಿ ಜಿಪಂ ಸದಸ್ಯ ಬಿ ರಾಜಣ್ಣ , ವಿಶ್ವನಾಥಪುರ ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆ.ಶ್ರೀನಿವಾಸ್‌, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಲೋಕೇಶ್‌, ಉಪವಿಭಾಗಾಧಿಕಾರಿ ಶ್ರೀನಿ ವಾಸ್‌, ತಹಶೀಲ್ದಾರ್‌ ಶಿವರಾಜ್, ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಕುಮಾರ್‌, ಉಪಾಧ್ಯಕ್ಷ ಶಾಂತ ಕುಮಾರ್‌, ಲೋಕೇಶ್‌, ಮಾಳಿಗೇನಹಳ್ಳಿ ಪ್ರಕಾಶ್‌, ಖಾದಿ ಬೋರ್ಡ್‌ ಮಾಜಿ ಅಧ್ಯಕ್ಷರಾದ ನಾಗೇಗೌಡ, ಶ್ರೀನಿವಾಸ್‌ ಮುಖಂಡರಾದ ದೇವರಾಜ್‌, ಮುನಿರಾಜ್‌, ಪ್ರಕಾಶ್‌, ಸುಧಾಕರ್‌, ಸಾವಕನಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಸ್ಥರಿದ್ದರು.

ಸಚಿವ ಸತೀಶ್‌ ಜಾರಕಿಹೊಳಿಗೆ ಭವ್ಯ ಸ್ವಾಗತ:

ಹೊಸಕೋಟೆ: ರಾಜ್ಯದ ಲೋಕೋಪಯೋಗಿ ಸಚಿವರಾದ ಸತೀಶ್‌ ಜಾರಕಿ ಹೊಳಿಯವರು ದಾಬಸ್‌ ಪೇಟೆಯಿಂದ ಚೆನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ವೇಳೆ ಸೂಲಿಬೆಲೆ ಸಮೀಪದಲ್ಲಿ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಬಿ.ವಿ.ಸತೀಶ್‌ ಗೌಡರು, ಸಚಿವರಿಗೆ ಹಾಗೂ ಶಾಸಕ ಶರತ್‌ ಬಚ್ಚೇಗೌಡರಿಗೆ ಸ್ವಾಗತ ಕೋರಿದರು. ಹಿರಿಯ ಮುಖಂಡರಾದ ಬಿ.ಎನ್‌. ಗೋಪಾಲಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ಮುತ್ಸಂದ್ರ ಆನಂದಪ್ಪ, ಹಸಿಗಾಳ ಜಗದೀಶ್‌, ಸಾದಪ್ಪನ ಹಳ್ಳಿ ನವೀನ್‌, ಲಕ್ಕೊಂಡಹಳ್ಳಿ ಆನಂದ್‌ ಇತರರು ಇದ್ದರು.

ಚನ್ನಹಳ್ಳಿಗೆ ಸಚಿವರಿಂದ ಸ್ಕೈವಾಕ್‌ ಭರವಸೆ:

ಚನ್ನರಾಯಪಟ್ಟಣ: ದೇವನಹಳ್ಳಿ ಮುಖಾಂತರ ಹೊಸಕೋಟೆ ಹೋಗುವ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ ನೀಡಿದ ವೇಳೆ ಚನ್ನಹಳ್ಳಿ ಗೇಟ್‌ ಬಳಿ ರಸ್ತೆಯಲ್ಲಿ ಅಂಡರ್‌ ಪಾಸ್‌ ಇಲ್ಲದ ಕಾರಣ ಚನ್ನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಂಡರ್‌ ಪಾಸ್‌ ಒದಗಿಸುವಂತೆ ಈ ಗ್ರಾಮದ ಅಕ್ಕಪಕ್ಕ ಇರುವ ದೊಡ್ಡ ಹೊಸಹಳ್ಳಿ, ಚಿಕ್ಕ ಹೊಸಹಳ್ಳಿ, ರೆಡ್ಡಿಹಳ್ಳಿ ಗ್ರಾಮಸ್ಥರಿಗೆ ಅನಾನೂಕೂಲವಾಗಿದೆ. ದೇವನಹಳ್ಳಿಗೆ ಬಸ್ಸಿಗೆ ಹೋಗ ಬೇಕಾದರೆ ಪ್ರಯಾಣಿಕರು ರಸ್ತೆ ದಾಟಿ ಬಸ್‌ ಹತ್ತುವುದಕ್ಕೆ ಹರ ಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಜಿಪಂ ಸದಸ್ಯ ಬಿ.ರಾಜಣ್ಣ ಸಚಿವರಿಗೆ ವಿವರಿಸಿದರು. ಸಚಿವರು ಈ ರಸ್ತೆಯಲ್ಲಿ ಸ್ಕೈ ವಾಕರ್‌ ನಿರ್ಮಾಣ ಮಾಡುವುದಕ್ಕೆ ಅಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು. ನಲ್ಲೂರು ಕ್ರಾಸ್‌ ಬಳಿ ಇರುವ ಟೋಲ್‌ ಹತ್ತಿರ ರೈತರು ಅಕ್ಕಪ ಕ್ಕದ ಜಮೀನಿಗೆ ಹೋಗಬೇಕಾದರೆ ಹೆದ್ದಾರಿ ಅವರು ರಸ್ತೆ ಬಿಡುತ್ತಿಲ್ಲ. ಸುತ್ತಲೂ ತಡೆಗೋಡೆ ಹಾಕಿಕೊಳ್ಳುತ್ತಿದ್ದಾರೆ ಎಂದು ಮನವಿ ಮಾಡಿದರು. ಇದರ ಬಗ್ಗೆ ಪರಿಶೀಲಿಸಿ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.