ಶ್ರೀಮೌಕ್ತಿಕಾಂಬ ದೇವಿ ಕರಗ: 850 ಕೆ.ಜಿ. ಹೂವಿನಲ್ಲಿ ರಸ್ತೆ ಮೇಲೆ ಚಕ್ರದ ಅಲಂಕಾರ


Team Udayavani, May 18, 2022, 2:34 PM IST

ಶ್ರೀಮೌಕ್ತಿಕಾಂಬ ದೇವಿ ಕರಗ: 850 ಕೆ.ಜಿ. ಹೂವಿನಲ್ಲಿ ರಸ್ತೆ ಮೇಲೆ ಚಕ್ರದ ಅಲಂಕಾರ

ದೇವನಹಳ್ಳಿ: ಶ್ರೀಮೌಕ್ತಿಕಾಂಬ ದೇವಿ ಕರಗ ಮಹೋತ್ಸವದ ಪ್ರಯುಕ್ತ ಪಟ್ಟಣದ ಪರ್ವತಪುರ ರಸ್ತೆಯಲ್ಲಿನ ಮರಳುಬಾಗಿಲಿನಲ್ಲಿ 850 ಕೆ.ಜಿ.ಹೂವಿನಲ್ಲಿ ಕರಗಕ್ಕೆ ವಿಶೇಷ ರೀತಿಯ ಚಕ್ರದವಿನ್ಯಾಸ ಮಾಡಲಾಗಿತ್ತು. ಕರಗ ನೋಡಲು ಬಂದ ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗ ಹೊತ್ತು ಮೆರವಣೆಗೆ ನಡೆಸಿದ ಪೂಜಾರಿ ರವಿಕುಮಾರ್‌ಸುಮಾರು 4 ನಿಮಿಷಗಳ ಕಾಲ ಹೂವಿನ ಮೇಲೆ ನೃತ್ಯ ಮಾಡಿದರು. ಈ ವೇಳೆ ಸಹಸ್ರಾರು ಭಕ್ತರು ಚಪ್ಪಾಳೆ ತಟ್ಟಿ ಈ ಧಾರ್ಮಿಕ ವೈಭವ ಕಣ್ತುಂಬಿಕೊಂಡರು.

1.5 ಟನ್‌ನ ಎಲ್ಲಾ ತರಹದ ಹೂವುಗಳನ್ನು ಅಲಂಕಾರದ ರೀತಿಯಲ್ಲಿ ರಸ್ತೆಯಲ್ಲಿ ಮಾಡಲಾಗಿತ್ತು. ಮಲ್ಲಿಗೆ 250 ಕೆ.ಜಿ., ಚೆಂಡುಹೂವು 250 ಕೆ.ಜಿ., ಕನಕಾಂಬರ 150 ಕೆ.ಜಿ.,ಬಟನ್ಸ್‌ ರೋಜ್‌ 250 ಕೆ.ಜಿ., ಕೆಂದೇರಿ ಹೂವು100 ಕೆ.ಜಿ ಹಾಗೂ ಇತರೆ ಹೂಗಳನ್ನು ಹಾಕುವುದರಮೂಲಕ ವಿಜೃಂಭಣೆಯಿಂದ ಮಾಡಲಾಗಿತ್ತು.ಎರಡೂವರೆ ಲಕ್ಷ ರೂ.ಗೂ ಅಧಿಕ ಮೌಲ್ಯದ ಬಿಡಿಹೂವುಗಳಿಂದ ರಸ್ತೆಯಲ್ಲಿ ಹಾಕಿ, ರಂಗೋಲಿ ಚಿತ್ರದಆಕೃತಿಯ ಮೂಲಕ ಹೂಗಳನ್ನು ಹಾಸಿ ಕರಗವನ್ನುವಿಶೇಷವಾಗಿ ಸ್ವಾಗತಿಸಿದರು. ಇದಕ್ಕೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ವಿ.ನಾರಾಯಣ್‌ ಮತ್ತು ಸ್ನೇಹಿತರು, ವೆಂಕಟರಾಯಪ್ಪ ಕುಟುಂಬದವರು ಸಹಕರಿಸಿದರು.

ಉತ್ತಮ ಮಳೆ, ಸಮೃದ್ಧ ಜೀವನಕ್ಕೆ ಪ್ರಾರ್ಥನೆ:ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಗೋಪಾಲ್‌ ಮಾತನಾಡಿ, ಸತತ 7ನೇ ವರ್ಷದಿಂದಕರಗ ಪ್ರಯುಕ್ತ ಹೂವಿನ ಅಲಂಕಾರವನ್ನು ಮಾಡಿ,ಕರಗ ನಡೆದಾಡುವಂತೆ ಮಾಡಲಾಗುತ್ತಿದೆ. ಮೌಕ್ತಿಕಾಂಭ ಅಮ್ಮನವರು ಕೊರೊನಾವನ್ನು ಈಪ್ರಪಂಚದಿಂದಲೇ ಮುಕ್ತಿಗೊಳಿಸಿ, ಎಂದಿನಂತೆಧಾರ್ಮಿಕ ಕಾರ್ಯಗಳು ನಡೆಯುವಂತೆ ಆಗಲಿ.ಕೊರೊನಾ ಇದ್ದಿದ್ದರಿಂದ ಧಾರ್ಮಿಕ ಕಾರ್ಯಗಳು ನಡೆದಿರಲಿಲ್ಲ. ಈ ವರ್ಷ ಕೊರೊನಾಇಳಿಮುಖವಾಗಿರುವುದರಿಂದ ಅದ್ಧೂರಿಯಾಗಿಕರಗ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ರೈತರಿಗೆಕಾಲಕಾಲಕ್ಕೆ ಉತ್ತಮ ಮಳೆ, ಸಮೃದ್ಧ ಜೀವನಸಾಗಿಸುವಂತೆ ಆಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.

ಪ್ರಮುಖರಾದ ವಿ.ಶ್ರೀನಿವಾಸ್‌, ವಿ.ನಾರಾಯಣಸ್ವಾಮಿ, ವಿ.ಗೋಪಾಲ್‌, ವಾಸು, ಮಂಜುನಾಥ್‌ ಇದ್ದರು.

 

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.