ದೇವನಹಳ್ಳಿ: ಸಿದ್ಧವಾಯ್ತು ಕಸ ವಿಲೇವಾರಿ ಘಟಕ; ಜೂನ್ 15ರೊಳಗೆ ಘಟಕ ಉದ್ಘಾಟನೆ
6 ತಿಂಗಳ ಹಿಂದೆ ಗ್ರಾಪಂಯೂ ಮೂಲ ಭೂತ ಸೌಕರ್ಯ ವಂಚಿತವಾಗಿತ್ತು.
Team Udayavani, May 26, 2023, 3:34 PM IST
ದೇವನಹಳ್ಳಿ: ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿಸುವ ಸಲುವಾಗಿ ರಾಜ್ಯ ಸರಕಾರದ ಆದೇಶದಂತೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಿ, ಆರೋಗ್ಯಕರ ಮತ್ತು ಸ್ವಚ್ಛ ಗ್ರಾಮ ಪಂಚಾಯಿತಿಗಳನ್ನಾಗಿಸುವ ಉದ್ದೇಶದಿಂದ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲಾಗಿದೆ.
ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಗಡಿ ಗ್ರಾಮದಲ್ಲಿ ಸುಸಜ್ಜಿತ ವಾದ 80/40 ಅಡಿಗಳ ಖಾಲಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಿ, 9 ಬ್ಲಾಕ್ ಗಳನ್ನಾಗಿಸಿದ್ದು, ಘನ ತ್ಯಾಜ್ಯದ ಉಪಯುಕ್ತತೆ ಮತ್ತು ಕೊಂಡುಕೊಳ್ಳುವವರ ಅಗತ್ಯಕ್ಕೆ ಸಂಬಂಧಿಸಿದಂತೆ, ವಿವಿಧ ಹಂತದಲ್ಲಿ ಕಸವನ್ನು ವಿಂಗಡಿಸಿ ಶೇಖರಿಸಲಾಗುತ್ತಿದ್ದು, ಹಸಿ ಕಸ ವನ್ನು ಪ್ರತ್ಯೇಕಿಸಿ ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳನ್ನು ತೆಗೆದು ಕಾಂಪೋಸ್ಟ್ (ನರೇಗಾ) ಅಡಿಯಲ್ಲಿ 10/15 ಅಡಿಯ
ನಿರ್ಮಾಣಗೊಂಡ ತೊಟ್ಟಿಯಲ್ಲಿ ತುಂಬಿಸ ಲಾಗುತ್ತದೆ.
ತುಂಬಿದ ಕಸದ ಮೇಲೆ ಇಎಂ ಸಲ್ಯೂಷನ್ ಅನ್ನು ಸಿಂಪಡಿಸಿ ಹಸಿಕಸ ಕೊಳೆತು ಗೊಬ್ಬರ ವನ್ನಾಗಿಸಲಾಗುತ್ತಿದ್ದು, ಇದರಿಂದ ಪರಿಸರದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರದಂತೆ, ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಸಜ್ಜು ಗೊಳಿಸಲಾಗಿದೆ.
ಉದ್ಘಾಟನೆ ವಿಳಂಬಕ್ಕೆ ಕಾರಣ: ಕಳೆದ ಫೆಬ್ರವರಿಯಲ್ಲಿ ಘಟಕದ ಕಟ್ಟಡ ಕಾಮಗಾರಿ ಮುಕ್ತಯವಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿ ಯಲ್ಲಿದ್ದಿದ್ದರಿಂದ ಉದ್ಘಾಟನೆಗೆ ಅಡ್ಡಿಯಾಗಿ ವಿಳಂಬ ವಾಗಿತ್ತು. ಜೂ.15ರೊಳಗೆ ಸರಕಾರದ ಶಿಷ್ಟಾ ಚಾರದ ಅಡಿಯಲ್ಲಿ ಲೋಕಾರ್ಪಣೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ನಿರ್ವಹಣೆ ಹೇಗೆ ?
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಹಳ್ಳಿಗಳು ಬರಲಿದ್ದು, ಈಗಾಗಲೇ ಎಸ್‌ಬಿಎಂ ಯೋಜನೆಯಡಿಯಲ್ಲಿ ಮತ್ತು ದಾನಿಗಳ ಸಹಕಾರದಲ್ಲಿ ಕಸವಿಲೇವಾರಿ ಟ್ಯಾಕ್ಟರ್, ಮಾರುತಿ ಸುಪರ್ ಕ್ಯಾರಿ ವಾಹನ ಇದ್ದು, ಸ್ವ-ಸಹಾಯ ಸಂಘದ 6 ಜನ ಸದಸ್ಯರನ್ನು ಒಳಗೊಂಡಂತಹ ಸ್ವಚ್ಛತಾಗಾರರನ್ನು ಒಡಂಬಡಿಕೆ ಮೂಲಕ ನೇಮಿಸಿಕೊಂಡಿದ್ದು, ಪ್ರತಿ ಹಳ್ಳಿಯಿಂದ ಒಣ/ಹಸಿ ಕಸವನ್ನು ಸಂಗ್ರಹಿಸಿ, ವಾರದ 3 ದಿನ (ದಿನ ಬಿಟ್ಟು ದಿನ) ದಿನಚರಿ ಮೂಲಕ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿ ಕ್ರಮವಹಿಸಲಾಗಿದೆ.
6 ತಿಂಗಳ ಹಿಂದೆ ಗ್ರಾಪಂಯೂ ಮೂಲ ಭೂತ ಸೌಕರ್ಯ ವಂಚಿತವಾಗಿತ್ತು. ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಪಂನಲ್ಲಿದ್ದ ವರ್ಗ 1ರ ಸ್ವಂತ ಸಂಪನ್ಮೂಲವನ್ನು ಬಳಸಿ ಕೊಂಡು ಸುಸಜ್ಜಿತವಾದ ಹೈಟೆಕ್ ಗ್ರಂಥಾ ಲಯ ಮತ್ತು ತ್ಯಾಜ್ಯ ವಿಲೇವಾರಿ ಘಟಕವನ್ನು 2-3 ತಿಂಗಳಲ್ಲಿ ಪ್ರಾರಂಭಿಸಲು ಸಭೆಗಳನ್ನು ಕರೆದು ಸೂಕ್ತ ತೀರ್ಮಾನ ತೆಗೆದುಕೊಂಡು 4 ತಿಂಗಳ ಅವಧಿ ಯಲ್ಲಿ ಗ್ರಂಥಾಲಯ ಮತ್ತು ವಿಲೇವಾರಿ ಘಟಕವನ್ನು ನಿರ್ಮಾಣ ಮಾಡ ಲಾಗಿದೆ. ಈಗಾಗಲೇ ಗ್ರಂಥಾಲಯದಲ್ಲಿ
ಗ್ರಾಪಂ ವ್ಯಾಪ್ತಿಯ ನಾಗರೀಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದು, ಜೂ.15ರ ನಂತರ ಕಸ ವಿಲೇವಾರಿ ಘಟವೂ ಕಾರ್ಯ ನಿರ್ವಹಿಸಲು ಸ್ವಚ್ಛ ಗ್ರಾಪಂಯನ್ನಾಗಿಸಲು ನಾಗರೀಕರ ಸಹಕಾರ ನೀಡಬೇಕು.
● ಪ್ರಕಾಶ್.ಎಚ್, ಪಿಡಿಒ, ಜಾಲಿಗೆ ಗ್ರಾಪಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.