ಜಿಲ್ಲೆಯಲ್ಲಿ ಕಳೆಗಟ್ಟಿದ ಸಂಕ್ರಾಂತಿ ಸಂಭ್ರಮ
ಶಿವಗಂಗೆಯಲ್ಲಿ ನೆರೆದಿದ್ದ ಲಕ್ಷಾಂತರ ಭಕ್ತರು ಗಂಗಾಧರೇಶ್ವರದ ದರ್ಶನ ಪಡೆದು ಪುನೀತರಾದ ಭಕ್ತರು
Team Udayavani, Jan 16, 2020, 4:21 PM IST
ದೇವನಹಳ್ಳಿ: ರಾಸುಗಳ ಹಬ್ಬವೆಂದೇ ಬಿಂಬಿತವಾದ ಮಕರ ಸಂಕ್ರಮಣ ಸಂಭ್ರಮ ಮಂಗಳವಾರ ಕಳೆಗಟ್ಟಿತು. ತಾಲೂಕಿನಾದ್ಯಂತ ರೈತರು ರಾಸುಗಳಿಗೆ ಗೋಪೂಜೆ ಮಾಡಿ ಭಕ್ತಿಯಿಂದ ಆಚರಿಸಿದರು. ಸಂಜೆ ವೇಳೆ ರಾಸುಗಳನ್ನು ಕಿಚ್ಚು ಹಾಯುವ ಮೂಲಕ ಸಂಭ್ರಮ ಮುಗಿಲು ಮುಟ್ಟಿತು.
ಬೇವು-ಬೆಲ್ಲ ಹಂಚಿ ಶುಭಾಶಯ ವಿನಿಮಯ: ಜನರು ಬೇವು-ಬೆಲ್ಲ ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ತಾಲೂಕಿನಾದ್ಯಂತ ರಾಸುಗಳನ್ನು ವಿಶೇಷವಾಗಿ ಸಿಂಗರಿಸಿ, ಕೊಂಬುಗಳಿಗೆ ಬಣ್ಣ ಹಚ್ಚಿ, ಮನೆಗಳ ಎದುರು ಬಣ್ಣಬಣ್ಣದ ರಂಗವಲ್ಲಿ ಹಾಕಿ ಸಂಭ್ರಮಿಸಿ, ಬೇವು-ಬೆಲ್ಲ ಸೇವಿಸಿ ಸ್ನೇಹ ಸದ್ಭಾವನೆಯಿಂದ ಒಳ್ಳೊಳ್ಳೆ ಮಾತಾಡೋಣ ಎಂದು ಪರಸ್ಪರ ಶುಭಾಶಯ ಹಂಚಿಕೊಂಡರು.
ನಗರದ ಮರುಳು ಬಾಗಿಲಿನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಅದ್ಧೂರುಯಾಗಿ ಆಚರಿಸಿದರು. ಎತ್ತುಗಳಿಗೆ ಸಿಂಗರಿಸಿ ನಗರದ ಬೀದಿಗಳಲ್ಲಿ ವಾಲಗದ ವಾದ್ಯಗಳೊಂದಿಗೆ ಕೋಟೆಯಲ್ಲಿರುವ ವೇಣು ಗೋಪಾಲಸ್ವಾಮಿ ದೇವಾಲಯದಿಂದ ಬಜಾರ್ ರಸ್ತೆ ಮಾರ್ಗ ವಾಗಿ ಹಳೇ ಬಸ್ ನಿಲ್ದಾಣದಿಂದ ಮರುಳು
ಬಾಗಿಲಿನಲ್ಲಿ ಮೆರವಣಿಗೆ ಮಾಡಲಾಯಿತು.
ರಾಸುಗಳ ಮೆರವಣಿಗೆ: ರಸ್ತೆಯಲ್ಲಿ ಹುಲ್ಲಿಗೆ ಬೆಂಕಿ ಹಾಕಿ, ತಮ್ಮ ರಾಸುಗಳನ್ನು ಕಿಚ್ಚಿನಲ್ಲಿ ಹಾಯಿಸುವುದರ ಮೂಲಕ ರೈತರು ಹಬ್ಬವನ್ನು ಸಡಗರದಿಂದ ಸಂಭ್ರಮಿಸಿದರು. ವರ್ಷಕ್ಕಿಂತ ವರ್ಷ ಈ ಬಾರಿ ರಾಸುಗಳು ಕಿಚ್ಚು ಹಾಯಿಸುವವರ ಸಂಖ್ಯೆ ತೀರ ಕಡಿಮೆಯಾಗುತ್ತಿದೆ. ಪ್ರತಿ ಹಳ್ಳಿಯಲ್ಲೂ ಹಸುಗಳಿಗೆ ಪೂಜೆ ಮಾಡಿ, ಮೆರವಣಿಗೆ ಮೂಲಕ ಗ್ರಾಮಗಳಲ್ಲಿ ಹಸುಗಳಿಗೆ ಸಿಂಗಾರ ಮಾಡಿ, ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಬೆಂಕಿ ಇಟ್ಟು ಕಿಚ್ಚು ಹಾಯಿಸುವ ಪದ್ಧತಿ ಹಿರಿಯರ ಕಾಲದಿಂದ ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮನೆಗಳಿಂದ ಹೊರಬಂದು ಹಸುಗಳಿಗೆ ಅಲಂಕಾರ ಮಾಡಿರುವುದನ್ನು ನೋಡಲು ಕಾತುರದಿಂದ ಕಾದುಕುಳಿತಿರುತ್ತಾರೆ.
ಪಟ್ಟಣದ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ ,ತಾಲೂಕು ಜೆಡಿಎಸ್ ಕಾರ್ಯದರ್ಶಿ ಜಿ.ಎ.ರವೀಂದ್ರ, ಪುರಸಭೆ ಮಾಜಿ ಸದಸ್ಯ ಸೊಸೈಟಿ ಕುಮಾರ್, ಪ್ರೌಢ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ಟೌನ್ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್ ಬಾಬು, ಮುಖಂಡರಾದ ಪ್ರಕಾಶ್, ಪಿ ರವಿಕುಮಾರ್ ಗಜೇಂದ್ರ, ಮುನೀಂದ್ರ, ಚಿಂತಾಮಣಿ ಶ್ರೀನಿವಾಸ್, ಸತ್ಯನಾರಾಯಣ್, ಶ್ರೀನಿವಾಸ್, ಕೆ.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.
ಕಾಟಮರಾಯನಿಗೆ ಪೂಜೆ: ಅಂದಿನ ಕಾಲದಿಂದ ಕಾಟಮರಾಯನಿಗೆ ಪೂಜೆ ಮಾಡುವ ಸಂಪ್ರದಾಯವಿದೆ. ಹಿರಿಯರು ಮಾತಿನಂತೆ ಎತ್ತು, ಹಸುಗಳಿಗೆ ರೋಗರುಜಿನ ಬರದಂತೆ ನೋಡಿಕೊಳ್ಳಲೆಂದು ಈ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸುವ ನಂಬಿಕೆ ರೈತರಲ್ಲಿದೆ. ಕಾಟಮರಾಯನಿಗೆ ಅಲಂಕಾರ ಮಾಡಿ, ಪೂಜಾ ಕೈಂಕರ್ಯ ನಡೆಸುವುದುಂಟು. ಪೂಜೆಯ ನಂತರ ಪ್ರಸಾದ ವಿನಿಯೋಗ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.