![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 27, 2022, 2:38 PM IST
ದೇವನಹಳ್ಳಿ: ಜಮೀನೊಂದರ ಪೋಡಿ ದುರಸ್ತಿಗೆ ನಿರ್ದೇಶನವಿದ್ದರೂ ನಿಗದಿತ ಅವಧಿಯೊಳಗೆ ಆದೇಶ ಪಾಲನೆ ಮಾಡಲು ವಿಫಲರಾದ ದೇವನಹಳ್ಳಿ ತಹಶೀಲ್ದಾರ್‌ಗೆ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿದೆ.
ನ್ಯಾಯಮೂರ್ತಿಗಳಾದ ನ್ಯಾ.ಬಿ.ವೀರಪ್ಪ ಮತ್ತು ಎಂ.ಜಿ. ಉಮಾ ಅವರಿದ್ದ ದ್ವಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಅಡಿಯಲ್ಲಿ 50 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ತಾಲೂಕಿನ ಜಮೀನೊಂದರ ಸಂಬಂಧ ನಾರಾಯಣಸ್ವಾಮಿ ಎಂಬ ಅರ್ಜಿದಾರರು ಉಪ ವಿಭಾಗಾಧಿಕಾರಿ ಅವರ ಆದೇಶ ಪ್ರಶ್ನಿಸಿ ಕೋರ್ಟ್‌ನಲ್ಲಿ 2016ರಲ್ಲಿ ರಿಟ್ ಸಲ್ಲಿಸಿದ್ದು, ಜೂನ್, 2016ರಲ್ಲಿ ಪೋಡಿ ಮತ್ತು ದುರಸ್ತಿ ಕಾರ್ಯವನ್ನು 6 ತಿಂಗಳ ಒಳಗೆ ಮಾಡಲು ಕೋರ್ಟ್ ಮೊದಲಿಗೆ ನಿರ್ದೇಶನ ನೀಡಿದೆ. ಆದರೆ, ಕೋರ್ಟ್ ಆದೇಶ ಪಾಲನೆ ಮಾಡುವಲ್ಲಿ ಅಧಿಕಾರಿಗಳು ನಿರಾಸಕ್ತರಾಗಿದ್ದ ಕಾರಣ, ಪುನಃ ಅರ್ಜಿದಾರರು 2ನೇ
ರಿಟ್ ಅರ್ಜಿಯನ್ನು 2017ರಲ್ಲಿ ದಾಖಲು ಮಾಡಿ, ಶೀಘ್ರ ಪೋಡಿ ದುರಸ್ತಿ ಮಾಡುವಂತೆ ಮನವಿ ಸಲ್ಲಿದ್ದರು.
ಪ್ರಕರಣದ ವಿಚಾರಣೆ ಮಾಡಿದ ಏಕಸದಸ್ಯ ಪೀಠವು ಫೆ.2021ರಲ್ಲಿ ಆದೇಶ ನೀಡಿ ಶೀಘ್ರ ಆದೇಶ ಪಾಲನೆ ಮಾಡಲು ಸೂಚನೆ ನೀಡಿದೆ. ನ್ಯಾಯಾಲಯ ಆದೇಶ ದೃಢೀಕೃತ ಪ್ರತಿ ದೊರೆತ 2 ವಾರದ ಒಳಗೆ ದಂಡವನ್ನು
ವಾದಿಗಳಿಗೆ ಪಾವತಿ ಮಾಡಬೇಕು. ಇಲ್ಲದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ : ಭಾರತೀಯ ಸಮಾಜದಲ್ಲಿ ಸಂಸ್ಕೃತ ಭಾಷೆ ಕೊಡುಗೆ ಅಪಾರ: ರಾಜ್ಯಪಾಲ ಗೆಹ್ಲೋಟ್
ವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿವಾದಿತ ಜಮೀನಿನ ಪೋಡಿ ಮತ್ತು ದುರಸ್ತಿ ಕಾರ್ಯವನ್ನು ಮಾಡಲು ತಹಶೀಲ್ದಾರ್ 6 ತಿಂಗಳು ತಡ ಮಾಡಿದನ್ನು ಪ್ರಶ್ನಿಸಿ ಅರ್ಜಿದಾರರು ಡಿಸೆಂಬರ್ 2021ರಲ್ಲಿ ಪುನಃ
ಹೈಕೋರ್ಟ್ ಮೆಟ್ಟಿಲೇರಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದ ವಿಚಾರಣೆ ಮಾಡಿದ ದ್ವಿಸದಸ್ಯ ಪೀಠವು ವಾದಿಗಳಿಗೆ 2016ರಿಂದ ಇಲ್ಲಿಯವರೆಗೂ ಸಾಕಷ್ಟು ಮಾನಸಿಕ ತೊಂದರೆ ಯುಂಟಾಗಿದ್ದು, ನ್ಯಾಯಾಲಯ ಆದೇಶ ಪಾಲನೆ ಮಾಡಲು ಅಧಿಕಾರಿ ಳು ಹಿಂದೆಟು ಹಾಕಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಗಮನಿಸಿ, ನ್ಯಾಯಾಂಗ ನಿಂದನೆ ಕಲಂ 11 ಮತ್ತು 12ರ ಅಡಿಯಲ್ಲಿ 50 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.