24 ಶಾಲೆಗಳ 956 ಶಾಲಾ ಮಕ್ಕಳಿಗೆ ಕಲಿಕಾ ಪರಿಕರ ವಿತರಣೆ
Team Udayavani, Dec 24, 2017, 2:14 PM IST
ದೇವನಹಳ್ಳಿ: ಆರ್ಥಿಕವಾಗಿ ಪ್ರಬಲರಾದವರು ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಸಹಾಯ ಮಾಡಿದರೆ
ಅನುಕೂಲವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ದೇವಿ ಹೇಳಿದರು.
ನಗರದ ಗುರುಭವನದಲ್ಲಿ ಸೋನಿ ಇಂಡಿಯಾ ಸಾಫ್ಟ್ ವೇರ್ ಸೆಂಟರ್ ಮತ್ತು ರಾಜಸ್ಥಾನ ಕಾಸ್ಮೋ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಟೈ, ಬೆಲ್ಟ್, ಸಮವಸ್ತ್ರ, ನೋಟ್ ಪುಸ್ತಕ, ಷೂ, ವಿತರಣಾ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದ ಅವರು, ತಾಲೂಕಿನ ಸಾದಹಳ್ಳಿ ಮತ್ತು ದೊಡ್ಡಸಣ್ಣೆ ಕ್ಲಸ್ಟರ್‌ನ 24 ಶಾಲೆಗಳ ಸುಮಾರು 956 ಮಕ್ಕಳಿಗೆ ಸೋನಿ ಇಂಡಿಯಾ ಸಾಫ್ಟ್ ವೇರ್ ಸೆಂಟರ್ ಮತ್ತು ರಾಜಸ್ಥಾನ ಕಾಸ್ಮೋಫೌಂಡೇಶನ್ ಸಹಯೋಗದಲ್ಲಿ ಸಮವಸ್ತ್ರ ಮತ್ತು ಟೈ, ಬೆಲ್ಟ್, ನೋಟ್‌ಪುಸ್ತಕ, ಷೂ, ಇತರೆಗಳನ್ನು ನೀಡುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ನೀಡುತ್ತಿರುವುದು ಹೆಮ್ಮೆಯ
ವಿಷಯವಾಗಿದೆ. ಮುಂದಿನ ವರ್ಷದಲ್ಲಿ ಎಲ್ಲಾ ಕ್ಲಸ್ಟರ್‌ಗಳಿಗೂ ವಿಸ್ತರಿಸಿದರೆ ಆ ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಬೆಂಗಳೂರು ನಗರ ಕೇಂದ್ರ ರೋಟರಿ ಸಂಸ್ಥೆಯ ಸಂತೋಷ್ ಕ್ರೇಜಿವಾಲ್ ಮಾತನಾಡಿ, 2006 ರಿಂದ ಸರ್ಕಾರಿ
ಶಾಲೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇವೆ ಎಂದರು. ರಾಜಸ್ಥಾನ ಕಾಸ್ಮೋಕ್ಲಬ್ ಅಧ್ಯಕ್ಷ ಮೋತಿಲಾಲ್ ಗೋಟ್‌ವಾಟ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ವಿದ್ಯಾಭ್ಯಾಸದ ಪರಿಕರ ನೀಡುತ್ತಿದ್ದೇವೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಅತ್ಯಂತ ಕ್ರೀಯಾಶೀಲರಾಗಿ ಮುಂದಿನ ಭವಿಷ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು ಎಂದರು.
ಆರ್‌ಸಿಸಿ ಕಂಪನಿ ಕಾರ್ಯದರ್ಶಿ ಅಶೀಷ್ ಶಕ್ಲೀಚ್, ಜಂಟಿ ಕಾರ್ಯದರ್ಶಿ ಕೀರ್ತಿರಾಜ್, ಬೋಮ್ ಸಾಲಿ, ಸದಸ್ಯರಾದ
ಕೀರ್ತಿಕುಮಾರ್ ಚೋಪ್ರ, ಕುಮಾರ್ ಪಾಲ್ ಜೈನ್, ಸಂದೀಪ್ ಕೋತಾರಿ, ಸುರೇಂದ್ರ ರಾಂಪುರಿ, ಅಮಿತ್ ಮೆಹೆತಾ, ಸೌರಭ್ ಮೆಹತಾ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಸಿಆರ್‌ಪಿ ಗಜೇಂದ್ರ, ಶಿವಕುಮಾರ್, ನೀಲಕಂಠ ಗಾವಂಕರ್, ಮುನಿರಾಜು ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.