ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಬೆಂ.ಗ್ರಾಮಾಂತರದ ವೈದ್ಯರ ನಡೆ ಗ್ರಾಪಂ ಕಡೆ ಕಾರ್ಯಕ್ರಮ
Team Udayavani, Jul 18, 2022, 1:28 PM IST
ದೇವನಹಳ್ಳಿ: ಕೊರೊನಾ ಸಂದರ್ಭದಲ್ಲಿ ಜಿಲ್ಲಾಡಳಿತವು ವೈದ್ಯರ ನಡೆ ಗ್ರಾಮಗಳ ಕಡೆ ಹಾಗೂ ಕಂದಾಯ ಇಲಾಖೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮಾದರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಪಂ ಇಡೀ ರಾಜ್ಯಕ್ಕೆ ಮಾದರಿಯಾಗುವ ವೈದ್ಯರ ನಡೆ ಗ್ರಾಪಂ ಕಡೆ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಜಿಲ್ಲಾಡಳಿತವು ಕೊರೊನಾ ಪರೀಕ್ಷೆ ಹೆಚ್ಚಿಸುವ ಉದ್ದೇಶದಿಂದ ಗ್ರಾಮಗಳಿಗೆ ಮೊಬೈಲ್ ವಾಹನಗಳ ಮೂಲಕ ಸ್ಥಳದಲ್ಲೇ ಕೊರೊನಾ ಪರೀಕ್ಷೆ ಮಾಡಿ ಕೊರೊನಾವನ್ನು ತಡೆಗಟ್ಟಲು ಶ್ರಮಿಸಿತ್ತು. ಗ್ರಾಮೀಣ ಜನರಿಗೆ ಆರೋಗ್ಯಸಮಸ್ಯೆ ಎದುರಿಸುತ್ತಿರುವುದರಿಂದ ಬೆಂ.ಗ್ರಾ. ಜಿಪಂ ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವೈದ್ಯರ ನಡೆ ಗ್ರಾಪಂ ಕಡೆ ನೂತನ ಕಾರ್ಯಕ್ರಮ ಮಾಡಿ ರಾಜ್ಯದಲ್ಲೇ ಈ ಕಾರ್ಯಕ್ರಮ ಗಮನ ಸೆಳೆಯುವಂತೆ ಆಗಿದೆ.
ಚಿಕಿತ್ಸೆ ಪಡೆಯಲು ಅನುಕೂಲ: ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ನಗರ ಪ್ರದೇಶದ ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ಇರುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಕಾಯಿಲೆಗಳನ್ನು ಪರೀಕ್ಷೆ ಮಾಡಿ ವೈದ್ಯರಿಂದ ಸಲಹೆ ಕೊಟ್ಟು ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯರನ್ನು ನೀಡುತ್ತಾರೆ. ಈ ಕಾರ್ಯಕ್ರಮದಲ್ಲಿ ಉತ್ತಮ, ಆರ್ಥಿಕವಾಗಿರುವ ಗ್ರಾಪಂ ಹಾಗೂ ದಾನಿಗಳ ಸಹಕಾರ ಸಿಎಸ್‌ಆರ್ ಅನುದಾನದಲ್ಲಿ ವೈದ್ಯರ ನಡೆ ಗ್ರಾಪಂ ಕಾರ್ಯಕ್ರಮ ಮಾಡಿಕೊಳ್ಳಬಹುದು. ಜು.19ರಂದು ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ವೈದ್ಯರ ನಡೆ ಗ್ರಾಪಂ ಕಡೆ ಚಾಲನೆ ನೀಡಲಾಗುತ್ತದೆ.
ಹಳ್ಳಿ ಜನರಿಗೆ ಸಹಕಾರಿ: ಆಯುಷ್ಮಾನ್ ಭಾರತ್, ಲಸಿಕಾ ಅಭಿಯಾನಗಳು, ಕ್ಷಯ ನಿಯಂತ್ರಣ ಸೇರಿ ದಂತೆ ಮಾನಸಿಕ ಆರೋಗ್ಯ, ಕಣ್ಣು, ಅಪೌಷ್ಟಿಕತೆ ಸೇರಿದಂತೆ ನಾನಾ ವಿಭಾಗೀಯ ಪರಿಣತರು ಭಾಗವಹಿ ಸುವ ಹಿನ್ನೆಲೆ ಆರೋಗ್ಯ ಸಮಸ್ಯೆ ಅನುಭಸುತ್ತಿರುವ ಹಳ್ಳಿ ಜನರಿಗೆ ಸಹಕಾರಿ ಯಾಗಲಿದೆ. ಚಿಕಿತ್ಸೆಗೂ ನೆರವು ಸಿಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದ ಕುಗ್ರಾಮಗಳಲ್ಲಿ ಒಂದುದಿನ ಜನರ ಆರೋಗ್ಯ ತಪಾಸಣೆ, ಸಾಂಕ್ರಾಮಿಕ ರೋಗಗಳಬಗ್ಗೆ ಜಾಗೃತಿ ಸೇರಿದಂತೆ ಸರ್ಕಾರದ ಆರೋಗ್ಯ ಇಲಾಖೆ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಆರೋಗ್ಯ ಜಾಗೃತಿ, ಉನ್ನತ ಚಿಕಿತ್ಸೆಗೆ ಸಹಕಾರಿ : ನಾಲ್ಕು ತಾಲೂಕು ತಾಪಂ ಇಒ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ತಲಾ 5 ಕುಗ್ರಾಮ ಆಯ್ಕೆ ಮಾಡಬೇಕು. ಗ್ರಾಮಗಳಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿದ ಬಳಿಕ ತಜ್ಞ ವೈದ್ಯ ಸಿಬ್ಬಂದಿ ಇಡೀ ದಿನ ಆರೋಗ್ಯ ಸೌಕರ್ಯನೀಡಬೇಕು. ಪ್ರಾಯೋಗಿಕ ಕಾರ್ಯಕ್ರಮ ದಿನ ನಿಗದಿ ನಂತರ ಗ್ರಾಮದ ಜನ ರಿಗೂ ಮಾಹಿತಿ ನೀಡಬೇಕು.ಅಧಿಕಾರಿಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಹಳ್ಳಿ ಜನರು ಮಾರಕ ರೋಗಗಳ ತಪಾಸಣೆಗೆ ಬೆಂಗಳೂರಿಗೆ ತೆರಳಲಾಗದೇ ಯಾವ ರೋಗವೆಂಬ ಮಾಹಿತಿಯೂ ಇಲ್ಲದೆ ನರಳುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಗಳಲ್ಲಿ ವೈದ್ಯರ ಭೇಟಿಯಿಂದ ಆರೋಗ್ಯ ಜಾಗೃತಿಗೆ, ಉನ್ನತ ಚಿಕಿತ್ಸೆಗೆ ಸಹಕಾರಿಯಾಗಲಿದೆ.
ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಜು.19ರಂದು ಜಿಪಂ ಸಿಇಒ ರೇವಣಪ್ಪ ನೇತೃತ್ವದಲ್ಲಿ ವೈದ್ಯರ ನಡೆ ಗ್ರಾಪಂ ಕಡೆ ಕಾರ್ಯಕ್ರಮಕ್ಕೆಚಾಲನೆ ನೀಡಲಾಗುತ್ತಿದೆ. ಗ್ರಾಮೀಣಪ್ರದೇಶದ ಜನರಿಗೆ ವಿವಿಧ ಕಾಯಿಲೆಗಳ ಬಗ್ಗೆ ಅರಿವು ಮೂಡಿಸುವುದು.ಕಾಯಿಲೆಗಳಿಗೆ ಪರೀಕ್ಷೆ ಮಾಡಿ ವೈದ್ಯರುಮಾರ್ಗದರ್ಶನ ನೀಡುತ್ತಾರೆ. ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕು. -ಮಲ್ಲೇಶ್, ಬೆಟ್ಟಕೋಟೆ ಪಿಡಿಒ
ಗ್ರಾಪಂ ವ್ಯಾಪ್ತಿಗಳಲ್ಲಿ ಜನರಿಗೆ ಆರೋಗ್ಯ ಸಮಸ್ಯೆ ಹಾಗೂ ಎಲ್ಲಾ ತರಹದಕಾಯಿಲೆಗಳಿಗೆ ಪರೀಕ್ಷೆ ಮಾಡಿಸಲು ವೈದ್ಯರನಡೆ ಗ್ರಾಪಂ ಕಡೆ ಎಂಬ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಸಂಪನ್ಮೂಲಇರುವ ಗ್ರಾಪಂ ಶಾಮಿಯಾನ, ಚೇರ್‌ಗಳವ್ಯವಸ್ಥೆ ಮಾಡಿ ಬರುವ ವೈದ್ಯರಿಗೆ ಅನುಕೂಲಕಲ್ಪಿಸಿ ಕೊಡಬೇಕು. ಪ್ರಾಯೋಗಿಕವಾಗಿಮಾಡುತ್ತಿದ್ದು, ಮುಂಬ ರುವ ದಿನಗಳಲ್ಲಿ ವಿಸ್ತರಣೆ ಮಾಡುವ ಉದ್ದೇಶವಿದೆ. – ಕೆ.ರೇವಣಪ್ಪ, ಜಿಪಂ ಸಿಇಒ
– ಎಸ್. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.