ದೊಡ್ಡಬಳ್ಳಾಪುರ ಕ್ಷೇತ್ರ: ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ
Team Udayavani, May 8, 2023, 2:14 PM IST
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ನೇಕಾರಿಕೆಗೆ ಪ್ರಸಿದ್ಧವಾಗಿದ್ದು, ರಾಜ್ಯ ರಾಜಕೀಯ ಕ್ಷೇತ್ರದಲ್ಲಿಯೂ ಸಹ ತನ್ನದೇ ಆದ ಅಸ್ತಿತ್ವ ಹೊಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಈ ಕ್ಷೇತ್ರ ಈ ಮೊದಲು ಅವಿಭಿಜಿತ ಬೆಂಗಳೂರು ಗ್ರಾಮಾಂತರದ 8 ತಾಲೂಕು ಗಳಲ್ಲಿ ಒಂದಾಗಿತ್ತು. ನಂತರ 2007ರಲ್ಲಿ 4 ತಾಲೂಕುಗಳ ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಾದರೂ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರಗಳ ನಡುವೆ ಜಿಲ್ಲಾ ಕೇಂದ್ರದ ವಿವಾದ ಇನ್ನೂ ಜೀವಂತ ವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 5 ಹೋಬಳಿ ಗಳಿದ್ದು, ತೂಬಗೆರೆ ಹೋಬಳಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದೆ.
ಕ್ಷೇತ್ರ ದಲ್ಲಿ 2,14,182 ಮತದಾರರಿದ್ದಾರೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶಗಳು ವಿಭಿನ್ನವಾಗಿಯೇ ನಡೆದುಕೊಂಡು ಬಂದಿವೆ. ಜಾತಿ, ವರ್ಗ ಆಧಾರಿತ ರಾಜಕಾರಣ ಇಲ್ಲಿ ನಡೆಯದಿದ್ದರೂ ಪಕ್ಷಾಂತರ ಪರ್ವ ಪ್ರತಿ ಚುನಾವಣೆಯಲ್ಲಿ ನಡೆದಿದೆ.
ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆನಂತರ ಪರಿಶಿಷ್ಟ ಜಾತಿ, ಲಿಂಗಾಯಿತ, ದೇವಾಂಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿರ್ಣಾಯಕರಾಗಿದ್ದಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಚುನಾವಣಾ ಕಣ ದಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಟಿ.ವೆಂಕಟರ ಮಣಯ್ಯ, ಬಿಜೆಪಿಯಿಂದ ಧೀರಜ್ ಮುನಿರಾಜು, ಜೆಡಿ ಎಸ್‌ನಿಂದ ಬಿ.ಮುನೇಗೌಡ, ಆಮ್ ಆದ್ಮಿ ಪಕ್ಷದಿಂದ ಪುರುಷೋತ್ತಮ, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಬಿ.ಶಿವಶಂಕರ್,ಉತ್ತಮ ಪ್ರಜಾಕೀಯ ಪಕ್ಷದಿಂದ ಎಂ.ರವಿ ಕುಮಾರ್, ಎಸ್.ಪಿಯಿಂದ ಎ.ವಿ.ನಾರಾ ಯಣ, ಬಿಎಸ್‌ಪಿಯಿಂದ ಬಿ.ಎಲ್.ಪಿಳ್ಳಪ್ಪ, ರಾಣಿ ಚೆನ್ನಮ್ಮ ಪಾರ್ಟಿಯಿಂದ ವೆಂಕಟರಾಜು ಜಿ.ಎಚ್ -ಜೈ ಮಹಾಭಾರತ್ ಪಕ್ಷದ ಎಂ.ಗಂಗಮ್ಮ ಪಕ್ಷೇತರ ಅಭ್ಯರ್ಥಿಗಳಾಗಿ ಜೆ.ಆನಂದಮೂರ್ತಿ, ಕುಮಾರ್ ರಾವ್ ಕಣದಲ್ಲಿದ್ದಾರೆ. ಜೈ ಮಹಾಭಾರತ್ ಪಕ್ಷದ ಎಂ.ಗಂಗಮ್ಮ ಕಣದಲ್ಲಿರುವ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದಾರೆ.
ಕ್ಷೇತ್ರದಲ್ಲಿ ಆರಂಭದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದರೂ ನಂತರ ಜನತಾ ಪರಿವಾರದಿಂದ ಆರ್.ಎಲ್. ಜಾಲಪ್ಪ ವಿಜೇತರಾಗಿ ನಂತರ ಕಾಂಗ್ರೆಸ್ ಸೇರಿದರು. ವಿ.ಕೃಷ್ಣಪ್ಪ ಜೆ.ನರಸಿಂಹಸ್ವಾಮಿ ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದರು. ಪ್ರಸ್ತುತ ಎರಡು ಬಾರಿ ಶಾಸಕರಾಗಿರುವ ಟಿ.ವೆಂಕಟರಮಣಯ್ಯ ಕಾಂಗ್ರೆಸ್ ಭದ್ರಕೋಟೆಯ ಬುನಾದಿ ಮೇಲೆ ಹ್ಯಾಟ್ರಿಕ್ ಜಯ ಸಾಧಿಸುವ ಹಂಬಲದಲ್ಲಿದ್ದರೆ. ಬಿಜೆಪಿಯ ಧೀರಜ್ ಮುನಿರಾಜು ಹಾಗೂ ಜೆಡಿಎಸ್‌ನ ಬಿ.ಮುನೇಗೌಡ ಪಕ್ಷಗಳ ಪ್ರಾಬಲ್ಯ ಹಾಗೂ ತಮ್ಮ ವರ್ಚಸ್ಸನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಒಕ್ಕಲಿಗ ಸಮುದಾಯ ದವರಾಗಿದ್ದು, ಈ ಸಮುದಾಯದ ಮತಗಳು ಯಾರ ಪಾಲಾಗಲಿವೆ ಎನ್ನುವ ಕುತೂಹಲವಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಪಕ್ಷಗಳ ನಡುವೆ ಸದ್ಯಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದರೊಂದಿಗೆ ಎಎಪಿ ಪಕ್ಷವೂ ಸಹ ಪ್ರಚಾರದಲ್ಲಿ ಮುಂದಿದೆ.
ಕಾಂಗ್ರೆಸ್ ರಾಜ್ಯ, ಕೇಂದ್ರ ಸರ್ಕಾರಗಳ ಜನ ವಿರೋಧಿ ನೀತಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿ ಯಲ್ಲಿ ತಾಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್ ನೀಡಿರುವ ಚುನಾ ವಣಾ ಭರವಸೆಗಳು ಜನರ ಮನಸ್ಸನ್ನು ಮುಟ್ಟಿವೆ. ತಾಲೂಕಿನಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಜನತೆ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ. – ಟಿ.ವೆಂಕಟರಮಣಯ್ಯ,ಕಾಂಗ್ರೆಸ್ ಅಭ್ಯರ್ಥಿ
ಹಲವಾರು ಸಾಮಾಜಿಕ ಸೇವೆಗಳ ಮೂಲಕ ಜನಮನದಲ್ಲಿ ಗುರುತಿಸಿ ಕೊಂಡಿದ್ದೇನೆ. ಕ್ಷೇತ್ರದ ಗ್ರಾಮ, ನಗ ರದ ಮೂಲ ಸೌಕರ್ಯಗಳು ಹಾಗೂ ವಿವಿಧ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ಅಭಿವೃದ್ಧಿ, ನನ್ನ ಸೇವಾ ಕಾರ್ಯಗಳು ಹಾಗೂ ಆಶಯಗಳಿಗೆ ಮತ ದಾರರು ಸ್ಪಂಧಿಸಿ ಗೆಲ್ಲಿಸುವ ವಿಶ್ವಾಸವಿದೆ. – ಧೀರಜ್ ಮುನಿರಾಜು,ಬಿಜೆಪಿ ಅಭ್ಯರ್ಥಿ
14 ವರ್ಷಗಳಿಂದ ಕ್ಷೇತ್ರದ ಒಡನಾಟದಲ್ಲಿದ್ದೇನೆ. ಮೂರು ಬಾರಿ ಸೋಲು ಕಂಡಿದ್ದರು ಸಹ ಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಸೇವೆ ಮಾಡಿದ್ದೇನೆ. ಕುಮಾರ ಸ್ವಾಮಿ ಪಂಚರತ್ನ ಯೋಜನೆಗಳು ಜನರ ಅಭಿವೃದ್ಧಿಗೆ ಪೂರಕವಾಗಿವೆ. ಈ ಬಾರಿ ಕ್ಷೇತ್ರದಲ್ಲಿ ಮತದಾರರ ಒಲವು ಜೆಡಿಎಸ್ ಪರವಾಗಿದ್ದು, ಗೆಲ್ಲುವ ವಿಶ್ವಾಸವಿದೆ. -ಬಿ.ಮುನೇಗೌಡ, ಜೆಡಿಎಸ್ ಅಭ್ಯರ್ಥಿ
– ಶ್ರೀಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.