ಜಲಮೂಲಗಳ ಸಂರಕ್ಷಿಸಿಕೊಳ್ಳುವ ಅಗತ್ಯವಿದೆ
Team Udayavani, Feb 6, 2020, 5:51 PM IST
ದೊಡ್ಡಬಳ್ಳಾಪುರ : ವಾತಾವರಣದಲ್ಲಿ ತೇವಾಂಶ ಕಾಪಾಡಿಕೊಳ್ಳಬೇಕಿದ್ದು, ಮಾನವರಂತೆ ಇತರೆ ಜೀವ ಸಂಕುಲಗಳಿಗೂ ಭೂಮಿಯ ಮೇಲೆ ಜೀವಿಸುವ ಹಕ್ಕಿದೆ. ಈ ದಿಸೆಯಲ್ಲಿ ಜೀವ ವೈವಿಧ್ಯದ ಸಂರಕ್ಷಣೆಯಲ್ಲಿ ಇಂದಿನ ಪೀಳಿಗೆಯ ಪಾತ್ರ ಮಹತ್ವದ್ದಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ರಾಜಶೇಖರ್ ಅಭಿಪ್ರಾಯಪಟ್ಟರು.
ಡಬ್ಲ್ಯೂಡಬ್ಲ್ಯೂ ಎಫ್ – ಇಂಡಿಯಾ (ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್) ಸಂಸ್ಥೆಯ ವತಿಯಿಂದ ತಾಲೂಕಿನ ಶಿವಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ತೇವಾಂಶ ಭೂಮಿ ದಿನಾಚರಣೆ (ವರ್ಲ್ಡ್ ವೆಟ್ ಲ್ಯಾಂಡ್ ಡೇ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವ ಸಂಕುಲಕ್ಕೆ ನೀರಿನ ಅಗತ್ಯವಿದೆ. ಅಂತೆಯೇ ನೀರನ್ನು ಮಿತವಾಗಿ ಬಳಸುವ ಜವಾಬ್ದಾರಿಯಿದೆ. ಕಾಡುಗಳ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಅರಣ್ಯ ಹೆಚ್ಚಾಗಿರಬೇಕು. ಮನೆಗಳ ಮೇಲೆ ತಟ್ಟೆಯಾಕಾರದ ಪಾತ್ರೆಯಲ್ಲಿ ನೀರಿಡುವ ಮೂಲಕ ಪಕ್ಷಿಗಳ ನೀರಿನ ದಾಹವನ್ನು ನೀಗಿಸಲು ಸಲಹೆ ನೀಡಿದರು.
ಡಬ್ಲ್ಯೂಡಬ್ಲ್ಯೂ ಎಫ್ ನ ವೈ.ಟಿ.ಲೋಹಿತ್ ಮಾತನಾಡಿ, ಜಲಮೂಲಗಳ ಸುಸ್ಥಿರ ಬಳಕೆಗಾಗಿ 2 ಫೆಬ್ರವರಿ 1971 ರಲ್ಲಿ ಇರಾನ್ ದೇಶದ ರಾಮ್ಸರ್ ನಗರದಲ್ಲಿ ಅಂತಾರಾಷ್ಟ್ರೀಯ ಸಮಾವೇಶವೊಂದು ನಡೆಯಿತು, ಆ ದಿನದ ನೆನೆಪಿಗಾಗಿ ವಿಶ್ವ ತೇವಾಂಶ ಭೂಮಿ ದಿನಾಚರಣೆ ಆಚರಿಸಲಾಗುವುದು. ಈ ವರ್ಷದ ಧ್ಯೇಯ ವಾಕ್ಯ ಕೆರೆಗಳು ಮತ್ತು ಜೀವವೈವಿಧ್ಯತೆ’. ನಮ್ಮ ದೇಶದಲ್ಲಿ ರಾಮ್ಸರ್ ಮಾನ್ಯತೆ ಪಡೆದಿರುವ 37 ವಿವಿಧ ವರ್ಗದ ಜಲಮೂಲಗಳಿವೆ. ಜಲಮೂಲಗಳು ಜೀವವ್ಯವಿಧ್ಯತೆಯ ತಾಣವಾಗಿದ್ದು ಭೂಮಿಯ ಮೇಲಿನ ಶೇ.40ರಷ್ಟು ಸಸ್ಯ ಹಾಗೂ ಪ್ರಾಣಿ ವರ್ಗ ನೀರಿನಲ್ಲಿ ಹಾಗು ನೀರಿನ ಮೂಲಗಳ ಸುತ್ತ ಮುತ್ತ ಕೇಂದ್ರೀಕೃತವಾಗಿದೆ. ಇಂದು ಕಾಡುಗಳಿಗಿಂತ ಮೂರು ಪಟ್ಟು ವೇಗವಾಗಿ ಜಲಮೂಲಗಳು ನಾಶವಾಗುತ್ತಿವೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಚಿನ್ಮಯ್.ಸಿ ಮಳಿಯೆ ಮಕ್ಕಳಿಗೆ ಜೇಡ, ಕೀಟಗಳು ಹಾಗು ಜಲಮುಲಗಳ ಬಳಿ ಇರುವ ಜೀವವೈವಿಧ್ಯತೆಯ ಮಹತ್ವವನ್ನು ತಿಳಿಸಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ನವೋದಯ ಚಾರಿಟಬಲ್ ಟ್ರಸ್ಟ್‌ನ ಆರ್.ಜನಾರ್ಧನ, ಸುನಿಲ್ ಗೌಡ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.