ISRO: ಇಸ್ರೋಸಂಸ್ಥೆಯಲ್ಲಿ ದೊಡ್ಡಬಳ್ಳಾಪುರದ ವಿಜ್ಞಾನಿ
Team Udayavani, Aug 26, 2023, 12:12 PM IST
ದೊಡ್ಡಬಳ್ಳಾಪುರ: ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸುವ ಮೂಲಕ ಇಸೊ›à ವಿಜ್ಞಾನಿಗಳು ಜಾಗತಿಕವಾಗಿ ಇತಿಹಾಸ ಸೃಷ್ಟಿಸಿದ್ದು, ಇದಕ್ಕೆ ವಿಜ್ಞಾನಿ ಗಳ ಪರಿಶ್ರಮ ಮಹತ್ವದ್ದಾಗಿದೆ. ದೇಶದ ಹಲವಾರು ವಿಜ್ಞಾನಿಗಳೊಂದಿಗೆ ಕರ್ನಾಟಕದ ಅನೇಕ ವಿಜ್ಞಾ ನಿಗಳೂ ಕೂಡ ಈ ಮಹಾತ್ವಾಕಾಂಕ್ಷೆ ಯೋಜನೆಯಲ್ಲಿ ಭಾಗ ವಹಿಸಿದ್ದರು. ಇದರಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಇಬ್ಬರು ವಿಜ್ಞಾನಿಗಳಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಕೋಳೂರು ಗ್ರಾಮದ ವಿಜ್ಞಾನಿ ನರಸಿಂಹ ಮೂರ್ತಿ ಒಬ್ಬರಾಗಿದ್ದರೆ, ಮತ್ತೂಬ್ಬರು ದೊಡ್ಡಬಳ್ಳಾಪುರ ನಗರದ ಕರೇಹಳ್ಳಿ ನಿವಾಸಿ ಲಕ್ಷ್ಮೀದೇವಮ್ಮ ಕುಮಾರ್ ದಂಪತಿಗಳ ಪುತ್ರ ಗೌತಮ್ ಅವರು ಈ ಮಹತ್ವದ ಯೋಜನೆಯಲ್ಲಿ ಭಾಗಿಯಾದ ತಾಲೂಕಿನ ಎರಡನೇ ಸಾಧಕರಾಗಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿಇ (ಇನ್‌ಇಸಿ) ಪದವಿ ಪಡೆದಿರುವ 33 ವರ್ಷದ ವಿಜ್ಞಾನಿ ಗೌತಮ್ ಅವರು ಹಲವು ವರ್ಷಗಳಿಂದ ಇಸೊ›àದಲ್ಲಿ ಕೆಲಸ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.