ಕೋವಿಡ್ ಸಂಕಷ್ಟದಲ್ಲೂ ದೇಶ ಮುನ್ನಡೆಸಿದ ಮೋದಿ
Team Udayavani, Jun 8, 2022, 3:02 PM IST
ದೊಡ್ಡಬಳ್ಳಾಪುರ: ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಸಬಲವನ್ನಾಗಿ ಮಾಡಿ ನೆರೆಯ ದೇಶಗಳಿಗೆ ನೆರವನನ್ನು ನೀಡುವ ಮಟ್ಟಕ್ಕೆ ಬೆಳೆಸಿದ ಹಿರಿಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠ ರಾಜ್ಯ ಸಂಚಾಲಕ ಸಮೀರ್ ಕಾಧಲ್ಕರ್ ಹೇಳಿದರು.
ನಗರದ ಕೆಎಂಎಚ್ ಕಲ್ಯಾಣ ಮಂದಿರದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತನಾಡಿದ ಅವರು, ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಹಲವಾರು ಕಾರಣಗಳಿವೆ. ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಪ್ರಭಾವ ಇಡೀ ವಿಶ್ವದ ಮೇಲೆ ಬಿದ್ದಿದೆ. ಹಲವಾರು ದೇಶ ಆರ್ಥಿಕವಾಗಿ ದಿವಾಳಿಯ ಅಂಚಿಗೆ ಬಂದು ನಿಂತಿವೆ. ಆದರೆ, ಇಂದು ಭಾರತ ನೆರೆಹೊರೆಯ ದೇಶಗಳಿಗೆ ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವಷ್ಟು ಸಮರ್ಥವಾಗಿದೆ ಎಂದರು.
ವಿಪಕ್ಷಗಳಿಂದ ಜನರಿಗೆ ತಪ್ಪು ಮಾಹಿತಿ: ಕೋವಿಡ್ ನಂತರದಲ್ಲಿ ಅಮೇರಿಕ ದೇಶವು ಸೇರಿದಂತೆ ಹಲವಾರು ಬಲಿಷ್ಠ ದೇಶಗಳಲ್ಲೂ ಆರ್ಥಿಕ ಏರುಪೇರು ಉಂಟಾಗಿವೆ. ಈ ಎಲ್ಲದರ ಪರಿಣಾ ಮವೇ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಆದರೆ, ವಿರೋಧ ಪಕ್ಷಗಳು ಜನರಿಗೆ ಸೂಕ್ತ ಮಾಹಿತಿ ನೀಡದೆ ಮರೆಮಾಚುವ ಮೂಲಕ ಅಪಪ್ರಚಾರ ಮಾಡ ಲು ಮುಂದಾಗಿವೆ. ವಿವಿಧ ಪ್ರಕಾಕೋಷ್ಠಗಳ ಪದಾಧಿ ಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಜನರ ಬಳಿ ನಿಂತು ಮಾತನಾಡಬೇಕು. ಆಗ ಮಾತ್ರ ವಿರೋಧಿ ಗಳ ಬಾಯಿ ಮುಚ್ಚಿಸಲು ಸಾಧ್ಯವಾಗಲಿದೆ ಎಂದರು.
ಆರೋಗ್ಯ ಸುಧಾರಣೆಗೆ ಸಹಕಾರಿ: ದೇಶದಲ್ಲಿ ನಾವೇ ಜನೌಷಧ ಕೇಂದ್ರಗಳನ್ನು ತೆರೆದಿದ್ದು ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಾರೆ. ಆದರೆ, ವಾಸ್ತವವೇ ಬೇರೆ ಇದೆ. ಕಾಂಗ್ರೆಸ್ ಪಕ್ಷದ ವತಿಯಿಂದ ತೆರೆಯ ಲಾಗಿದ್ದ ಬೆರಳೆಣಿಕೆಯಷ್ಟು ಜನೌಷಧ ಕೇಂದ್ರಗಳಿಗೆ ಸೂಕ್ತ ಔಷಧ ಸರಬರಾಜು ಇಲ್ಲದೆ ಬಾಗಿಲು ಮುಚ್ಚಿವ ಹಂತಕ್ಕೆ ಬಂದಿದ್ದವು. ಆದರೆ, ಇಂದು ದೇಶದಲ್ಲಿ 43 ಸಾವಿರ ಜನೌಷಧ ಕೇಂದ್ರಗಳಿಗೆ. ಜನರಿಗೆ ಅಗತ್ಯವಿರುವ ಎಲ್ಲ ರೀತಿಯ ಔಷಧಗಳನ್ನು ಅತ್ಯಂತ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಲಾಗಿದೆ. ಇದರಿಂದ ಬಡವರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ ಎಂದರು.
ಜನರಿಗೆ ಮನವರಿಕೆ ಮಾಡಿ: ಮಾಹಿತಿಯೇ ನಮ್ಮ ದೊಡ್ಡ ಶಕ್ತಿಯಾಗಬೇಕು. ಈ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಗಟ್ಟಿ ಕಾರ್ಯಕರ್ತರನ್ನು ಸಿದ್ಧಗೊಳಿಸುವ ಹೊಣೆಗಾರಿಕೆ ಪ್ರಕೋಷ್ಠಗಳ ಜವಾಬ್ದಾರಿಯಾಗಿದೆ. ಕೇವಲ ಸಮಾವೇಶಕ್ಕೆ ನಮ್ಮ ಕೆಲಸ ಮುಗಿಯಿತು ಎಂದು ಮೈ ಮರೆತು ಕುಳಿತುಕೊಳ್ಳುವಂತಿಲ್ಲ. ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಲ್ಲಿ ನಡೆದಿರುವ ಜನೋಪಯೋಗಿ ಕೆಲಸ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದಾಗಿದೆ ಎಂದರು.
ಫಲಾನುಭವಿಗಳ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಧೀರಜ್ ಮುನಿರಾಜು, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿ, ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ, ಪಂಚಾಯಿತ್ ರಾಜ್ ಪ್ರಕೋಷ್ಠ ಜಿಲ್ಲಾ ಸಂಚಾಲಕ ಕೆ.ಎಚ್. ವೆಂಕಟರಾಜು, ಮಾಧ್ಯಮ ಪ್ರಕೋಷ್ಠ ಜಿಲ್ಲಾ ಸಂಚಾಲಕ ಬಂತಿ ವೆಂಕಟೇಶ್, ಮುಖಂಡ ಅಶ್ವತ್ಥ ನಾರಾಯಣಕುಮಾರ್, ಉಮಾಮೇಶ್ವರಿ, ಶ್ರಮಿಕ ಸಂಕುಲ ಪ್ರಮುಖ್ ರಾಮಕಿಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.