ದೊಡ್ಡ ತುಮಕೂರು ಕೆರೆ ನೀರು ಕಲುಷಿತ
Team Udayavani, Jan 15, 2022, 12:37 PM IST
ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರಿನ ಕೆರೆಯಲ್ಲಿ ನಗರದ ಒಳಚರಂಡಿ ತ್ಯಾಜ್ಯ ನೀರು ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರು ಸೇರಿ ಕೆರೆ ನೀರು ಕಲುಷಿತವಾಗಿದ್ದು, ರಾಸಾಯನಿಕಯುಕ್ತ ನೀರು ಕಾರಣವಾಗಿರುವುದು ಪ್ರಯೋಗಾಲಯದಲ್ಲಿ ದೃಢಪಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶುದ್ಧೀಕರಣಕ್ಕೆ ಯಂತ್ರ ಅಳವಡಿಕೆ: ನಗರಸಭೆವ್ಯಾಪ್ತಿಯಲ್ಲಿನ ಒಳಚರಂಡಿ ನೀರು ಹರಿದ ಪರಿಣಾಮ ದೊಡ್ಡತುಮಕೂರು ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿವೆ. ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ನೀರುಒಳಚರಂಡಿ ಮೂಲಕ ಹರಿದು ಹೋಗಿ ಚಿಕ್ಕತುಮಕೂರು ಕೆರೆಗೆ ಸೇರುತ್ತದೆ. ಕೊಳಚೆ ನೀರನ್ನುಇಲ್ಲಿಂದ ಶುದ್ಧೀಕರಿಸಿ ಹೊರಬಿಡಲು ಯಂತ್ರಗಳನ್ನು ಸಹ ಅಳವಡಿಸಲಾಗಿದೆ.
ಪ್ರಯೋಗಾಲಯಕ್ಕೆ ರವಾನೆ: ಆದರೆ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಳಚರಂಡಿ ನೀರನ್ನು ಶುದ್ಧೀಕರಣ ಮಾಡದೆ ಹೊರಗೆ ಹರಿದು ಬಿಡಲಾಗುತ್ತಿದೆ. ಕೆರೆಯಲ್ಲಿನ ನೀರು ಕಪ್ಪು ಬಣ್ಣಕ್ಕೆತಿರುಗಿರುವ ಬಗ್ಗೆ ಹಾಗೂ ನೀರು ಕಲುಷಿತವಾಗಿದೆಯಾ ಎನ್ನುವ ಬಗ್ಗೆ ಪರೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಕುಡಿಯುವ ನೀರಿನ ಮಾದರಿ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ವಿಷಕಾರಿ ಅಂಶಗಳು: ಕೆರೆಯ ನೀರಿನಲ್ಲಿ 2.10ರಷ್ಟು ಫ್ಲೋರೈಡ್ ಸೇರಿದಂತೆ ಇತರೆ ವಿಷಕಾರಿ ಅಂಶಗಳುಸೇರಿವೆ ಎಂದು ಪ್ರಯೋಗಾಯಲದ ವರದಿ ಹೇಳಿದೆ.ಈ ಬಗ್ಗೆ ದೊಡ್ಡತುಮಕೂರು ಕೆರೆ ಹೋರಾಟ ಸಮಿತಿ ವತಿಯಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದೆ.
ಅರ್ಕಾವತಿ ನದಿ ಪಾತ್ರದಲ್ಲಿನ ಪ್ರಮುಖ ಕೆರೆಗಳಲ್ಲಿಒಂದಾಗಿರುವ ದೊಡ್ಡತುಮಕೂರು ಕೆರೆ ತುಂಬಿದಶಕಗಳೇ ಕಳೆದಿತ್ತು. ಈ ಬಾರಿ ಕೆರೆ ಕೋಡಿ ಬಿದ್ದಿದೆ.ಆದರೆ, ಕೆರೆಯ ನೀರು ಕಲುಷಿತವಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಗ್ರಾಮಸ್ಥರುದೂರಿದ್ದಾರೆ. ಗ್ರಾಮಸ್ಥರು ಪಾದಯಾತ್ರೆ ಮೂಲಕ ತೆರಳಿನಗರಸಭೆಗೆ ಮುತ್ತಿಗೆ ಹಾಕುವಲ್ಲಿ ಸಭೆಗಳನ್ನುನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಸರ್ವ ಸದಸ್ಯ ಸಭೆಯಲ್ಲೂ ಅನುಮೋದನೆಯಾಗಿದೆ.
ನಗರಸಭೆಯಿಂದ ಮನವರಿಕೆ: ಕೆರೆ ನೀರು ಕಲುಷಿ ತವಾಗಲು ಒಳಚರಂಡಿ ನೀರು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀ ನಾರಾ ಯಣ್, ಉಪಾಧ್ಯಕ್ಷೆ ಫರ್ಹಾನತಾಜ್ ಚಿಕ್ಕ ತುಮಕೂರು ಬಳಿ ಇರುವ ನಗರಸಭೆ ವ್ಯಾಪ್ತಿಯ ತ್ಯಾಜ್ಯನೀರು ಶುದ್ಧೀಕರಣ ಘಟಕಕ್ಕೆ ಅಧಿಕಾರಿಗ ಳೊಂದಿಗೆ ಭೇಟಿ ನೀಡಿ, ಶುದ್ಧೀಕರಣ ವಿಧಾನದಲ್ಲಿ ಯಾವುದೇಲೋಪವಿಲ್ಲ ಎಂದು ಮನವರಿಕೆ ಮಾಡಿ ಕೊಟ್ಟರು.
ನೈಸರ್ಗಿಕವಾಗಿ ಶುದ್ಧೀಕರಣ: ಈ ಕುರಿತು ಮಾಹಿತಿ ನೀಡಿದ ನಗರಸಭೆ ಎಇಇ ಶೇಖ್ ಫೀರೋಜ್,ಕಿರಿಯ ಅಭಿಯಂತರ ಚಂದ್ರಶೇಖರ್, ತ್ಯಾಜ್ಯ ನೀರು ಶುದ್ಧೀಕರಿಸುವ ವಿಧಾನವನ್ನು ವಿವರಿಸಿ, ಇಲ್ಲಿನ ಶುದ್ಧೀ ಕರಣ ಘಟಕದಲ್ಲಿ 6 ಹಂತದಲ್ಲಿ ಯಾವುದೇ ಯಂತ್ರದ ಸಹಾಯ ಇಲ್ಲದೆ ನೈಸರ್ಗಿಕವಾಗಿ ಶುದ್ಧೀಕರಿಸಿ ಕೆರೆಗೆ ಬಿಡಲಾಗುತ್ತಿದೆ.ನಗರದ ಒಳಚರಂಡಿಗೆ ವಿಷಯುಕ್ತ ನೀರನ್ನು ಆಚೆ ಬಿಡುತ್ತಿಲ್ಲ. ನಿಮ್ಮ ಕೆರೆ ವಿಷಯುಕ್ತ ವಾಗಲು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನೀರು ಕಾರಣವಾಗಿರಬಹುದು. ಈ ಹಿಂದೆ ರಸ್ತೆ ಕಾಮಗಾರಿ ನಡೆಯುತ್ತಿದ್ದಾಗ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಕೆಲಕಾಲ ಶುದ್ಧೀಕರಣಕ್ಕೆ ತೊಂದರೆ ಯಾಗಿತ್ತು. ಈ ಎಲ್ಲಾ ಸಮಸ್ಯೆಗಳು ಬಗೆಹರಿ ದಿದ್ದು, ಒಂದು ಪಂಪ್ ಮೋಟಾರ್ ಸಹ ಹೆಚ್ಚುವರಿ ಇದೆ. ಇಲ್ಲಿನ ಶುದ್ಧೀಕರಿಸಿದ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ನಮ್ಮದು ಲೋಪವಿದ್ದರೆ ಸರಿಪಡಿಸಿಕೊಳ್ಳಲಾಗುವುದು ಎಂದರು.
ನಮಗೆ ಶುದ್ಧವಾದ ನೀರು ಉಳಿಸದಿದ್ದರೆ ಹೋರಾಟ :
ನಗರದಲ್ಲಿ ಸಾಕಷ್ಟು ಜನಸಂಖ್ಯೆ ಇದ್ದು, ಅಲ್ಲಿನ ಒಳಚರಂಡಿ ವ್ಯವಸ್ಥೆ ಮೂಲಕ ಅವೈಜ್ಞಾನಿಕವಾಗಿ ಶುದ್ಧೀಕರಿಸಿ ಚಿಕ್ಕತುಮಕೂರು ಕೆರೆ ತುಂಬಿ ಕೋಡಿ ಹೋಗುವ ಮೂಲಕ ದೊಡ್ಡತುಮಕೂರು ಕೆರೆ ಸೇರುತ್ತಿದೆ. ಇದರೊಂದಿಗೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ಸಹ ಸೇರುತ್ತಿದೆ. 20 ವರ್ಷಗಳ ನಂತರ ಕೆರೆ ತುಂಬಿರುವ ಖುಷಿ ನಮಗೆ ಜೀವಂತವಾಗಿಲ್ಲ. ಇಲ್ಲಿನ ನೀರನ್ನು ಜನ ಜಾನುವಾರುಗಳು ಬಳಸದ ಹಾಗೆ ಹಾಗಿದೆ. ಅಂತರ್ಜಲವೂ ವಿಷಯುಕ್ತವಾಗುತ್ತಿದೆ. ಹೀಗಾಗಿ ನಗರಸಭೆಯ ಈ ವಿಧಾನದಿಂದ ಶುದ್ಧೀಕರಿಸಿದ ನೀರುನಮಗೆ ಬೇಡ, ಬಾಶೆಟ್ಟಿಹಳ್ಳಿ ವಿಷಯುಕ್ತ ನೀರು ಸಹ ಬೇಡ. ನಮಗೆ ಶುದ್ಧವಾದ ನೀರು ಉಳಿಸಿ.ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ದೊಡ್ಡತುಮಕೂರು ಗ್ರಾಮಸ್ಥರಾದ ಪಿ.ಆನಂದ್‌ಕುಮಾರ್, ವಸಂತ್‌ಕುಮಾರ್, ಟಿ.ಜಿ.ಮಂಜುನಾಥ್, ಎಸ್‌ಎಸ್‌ಟಿ ಮಂಜುನಾಥ್, ನಾಗರಾಜುಬಾಬು, ಸಿ.ರಾಮಕೃಷ್ಣ ತಿಳಿಸಿದರು.
ನಗರಸಭೆ ತ್ಯಾಜ್ಯ ನೀರು ಶುದ್ಧೀಕರಣ ಘಟಕದಿಂದ ವಿಷಯುಕ್ತ ನೀರುಕೆರೆಗಳಿಗೆ ಹೋಗುತ್ತಿಲ್ಲ. ಇಲ್ಲಿನ ಕೆರೆಗಳನೀರು ವಿಷಯುಕ್ತವಾಗಲು ಬಾಶೆಟ್ಟಿಹಳ್ಳಿಪಟ್ಟಣ ಪಂಚಾಯಿತಿಯಿಂದ ಹಾಗೂಕೈಗಾರಿಕೆಗಳು ಶುದ್ಧೀಕರಿಸದೆ ನೇರವಾಗಿ ಕೆರೆಗೆ ಬಿಡುತ್ತಿರು ವುದೇ ಕಾರಣ ಹೊರತುನಗರಸಭೆಯದ್ದಲ್ಲ. – ಸುಧಾರಾಣಿ, ನಗರಸಭೆ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.