ಮನೆಗಳಿಗೆ ಗುಣಮಟ್ಟದ ನೀರು ಪೂರೈಕೆ
Team Udayavani, May 1, 2020, 6:27 PM IST
ರಾಮನಗರ: ಗ್ರಾಮೀಣ ಭಾಗದ ಮನೆಗಳಿಗೆ ನಿರ್ದಿಷ್ಟ ಪಡಿಸಲಾದ ಪರಿಮಾಣ ಹಾಗೂ ಗುಣಮಟ್ಟದ ನೀರನ್ನು ನಲ್ಲಿಗಳ ಸಂಪರ್ಕದ ಮೂಲಕ ನಿಯಮಿತವಾಗಿ ಒದಗಿಸುವುದು ಜಲ ಜಿವನ್ ಮಿಷನ್ ಯೋಜನೆಯ ಉದ್ದೇಶವಾಗಿದ್ದು, ಜಿಲ್ಲಾ ಪಂಚಾಯಿತಿ ಭವನದಲ್ಲಿ ಈ ಕುರಿತು ಒಂದು ದಿನ ಕಾರ್ಯಾಗಾರ ನಡೆಯಿತು. ಜಲ ಜೀವನ್ ಮಿಷನ್ ಯೋಜನೆಯ ಸಿದ್ಧತೆ
ಮಾಡಿಕೊಳ್ಳಲು ಜಿಪಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈ ಕಾರ್ಯಾಗಾರ ಹಮ್ಮಿಕೊಂಡಿದ್ದವು. ಪಿಡಿಒ ಅಧಿಕಾರಿಗಳು, 4 ತಾಪಂಗಳ ಇಒಗಳು, ಗ್ರಾ.ಕು.ನೀರಿನ ನೈರ್ಮಲ್ಯ ಉಪ-ವಿಭಾಗ ಅಧಿಕಾರಿಗಳಿಗೆ ಹಾಗೂ ಶಾಖಾಧಿಕಾರಿಗಳಿಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಗ್ರಾಮೀಣ ಭಾಗದ ಮನೆಗಳಿಗೆ ನಳ ಸಂಪರ್ಕದ ಮೂಲಕ ಸಮಾನವಾಗಿ ನಿಗದಿತ ಪರಿಮಾಣದ ಅಂದರೆ ಪ್ರತಿ ದಿನ ಪ್ರತಿ ವ್ಯಕ್ತಿಗೆ 55 ಲೀಟರ್‌ನಂತೆ ಗುಣಮಟ್ಟದ ನೀರನ್ನು (ಬಿಐಎಸ್: 10,500) ನಿರಂತರವಾಗಿ ಬಹುಕಾಲದವರೆಗೆ ಒದಗಿಸಬೇಕಾಗಿದೆ. ಗ್ರಾಮದ ನೀರು ಸರಬರಾಜು ಮೂಲ ಸೌಕರ್ಯಗಳು, ಹಾಲಿ ಇರುವ ಯೋಜನೆಯ ಮರು ಸುಧಾರಣೆ, ಹಾಲಿಯಿರುವ ಜಲಮೂಲಗಳು
ಹಾಗೂ ಇತರ ಭಾಗ ಬಲವರ್ಧನೆಗೊಳಿಸಬೇಕು ಎಂದು ಕಾರ್ಯಾಗಾರದಲ್ಲಿ ಅಧಿಕಾರಿಗಳಿಗೆ ತಿಳಿಸಲಾಯಿತು.
ಜಿಪಂ ಸಿಇಒ ಇಕ್ರಂ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ್ ಮಾತನಾಡಿ, ಭರವಸೆಯಿಂದ ಸಿಕ್ಕುವ ಶುದ್ಧ ನೀರು ಮಾನವನ ಅಭಿವೃದ್ಧಿಗೆ ಪೂರಕ.
ಶುದ್ಧ ಕುಡಿವ ನೀರು ಒದಗಿಸುವುದರಿಂದ ಗ್ರಾಮೀಣರ ಆರೋಗ್ಯ ಸುಧಾರಿಸಬಹುದು ಎಂದರು. ಜಿಪಂ ಕಾರ್ಯದರ್ಶಿ ಉಮೇಶ್ ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.