ಸಂಚಾರ ಆಮ್ಲಜನಕ ಬಸ್‌ಗಳಿಗೆ ಚಾಲನೆ
Team Udayavani, May 27, 2021, 5:43 PM IST
ದೊಡ್ಡಬಳ್ಳಾಪುರ: ಭಾರತೀಯ ಜೈನ ಸಂಘಟನೆಯಿಂದ ರಾಜ್ಯ ಸಾರಿಗೆ ಸಂಸ್ಥೆ, ಪೌಂಡೇಷನ್ ಇಂಡಿಯಾ, ಆರೋಗ್ಯ ಇಲಾಖೆ ಸಹಯೋಗದಲ್ಲಿ ವ್ಯವಸ್ಥೆ ಮಾಡಿರುವ 6 ಆಮ್ಲಜನಕ ಸಂಚಾರ ಬಸ್‌ಗಳಿಗೆ ನಗರದ ರಾಜ್ಯ ಸಾರಿಗೆ ಸಂಸ್ಥೆಯ ಘಟಕದಲ್ಲಿಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಚಾಲನೆ ನೀಡಿದರು.
ಭಾರತೀಯ ಜೈನ ಸಂಘಟನೆಯ ಟ್ರಸ್ಟಿ ಹಾಗೂಸಂಸ್ಥೆಯ ಮಾಜಿ ಅಧ್ಯಕ್ಷ ಪ್ರಪುಲ್ ಬಾಯಿಮಾತನಾಡಿ, ಭಾರತೀಯ ಜೈನ ಸಂಘಟನೆಯಿಂದಸಂಸ್ಥೆಯ ಸ್ಥಾಪಕ ಶಾಂತಿಲಾಲ್ ಮುಫಾ, ಅಧ್ಯಕ್ಷರಾಜೇಂದ್ರ ಲೂಕಡ್ ಅವರ ಮಾರ್ಗದರ್ಶನದಲ್ಲಿಒಟ್ಟು 10 ಸಾವಿರ ಆಮ್ಲಜನಕ ಸಾಂದ್ರಕಗಳನ್ನುನೀಡಲಾಗಿದೆ.
ಬೆಂಗಳೂರಿಗೆ 125 ಆಮ್ಲಜನಕಸಾಂದ್ರಕಗಳನ್ನು ನೀಡಲಾಗಿದ್ದು, 35 ಬೆಡ್‌ಗಳಕ್ವಾರೆಂಟೈನ್ ಕೇಂದ್ರ ಸ್ಥಾಪಿಸಲಾಗಿದೆ. ಇಂದು ಬೆಂ.ಗ್ರಾಮಾಂತರ ಜಿಲ್ಲೆಗೆ 6ಬಸ್‌ಗಳಲ್ಲಿ ಆಮ್ಲಜನಕವ್ಯವಸ್ಥೆ ಮಾಡಲಾಗಿದೆ. ಪ್ರತಿ ಬಸ್‌ಗಳಲ್ಲಿ 2 ಬೆಡ್‌ಗಳು, 4 ಜನರಿಗೆ ಆಮ್ಲಜನಕ ವ್ಯವಸ್ಥೆ, ಆಮ್ಲಜನಕ ಸಾಂದ್ರಕಗಳ ಸೌಲಭ್ಯ ದೊರೆಯಲಿದೆ ಎಂದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ,ಕೊವಿಡ್ ನಿಯಂತ್ರಣದಲ್ಲಿ ಸರ್ಕಾರದೊಂದಿಗೆ ಸೇವಾಸಂಸ್ಥೆಗಳ ನೆರವಾದರೆ ಹೆಚ್ಚಿನ ಅನುಕೂಲವಾಗಲಿದ್ದು,ಭಾರತೀಯ ಜೈನ ಸಂಘಟನೆಯ ಈ ಕಾರ್ಯಅಭಿನಂದನೀಯ. ತಾಲೂಕಿಗೆ ಲಸಿಕೆ ಸರಬರಾಜುಕಡಿಮೆ ಆಗುತ್ತಿರುವ ದೂರುಗಳು ಬರುತ್ತಿದ್ದು, ಹೆಚ್ಚಿನಲಸಿಕೆ ಸರಬರಾಜು ಮಾಡಲು ಸಂಬಂಧಪಟ್ಟವರಿಗೆಮನವಿ ಮಾಡಲಾಗಿದೆ.ಎಂದರು.ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಭಾರತೀಯ ಜೈನ ಸಂಘಟನೆ ನೀಡಿರುವ 6 ಸಂಚಾರ ಆಮ್ಲಜನಕ ವಾಹನಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿಗೆ 2 , ನೆಲಮಂಗಲಕ್ಕೆ 2, ದೇವನಹಳ್ಳಿಹಾಗೂ ಹೊಸಕೋಟೆಗೆ ತಲಾ 1 ವಾಹನಗಳನ್ನುನೀಡಲಾಗುತ್ತಿದೆ ಎಂದರು.
ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಶಿಲ್ದಾರ್ ಟಿ.ಎಸ್.ಶಿವರಾಜ್, ಜಿಲ್ಲಾ ಆರೋಗ್ಯಾಧಿಕಾರಿಡಾ.ತಿಪ್ಪೇಸ್ವಾಮಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಡಾ.ರಮೇಶ್, ನಗರಸಭೆ ಪೌರಾಯುಕ್ತ ರಮೇಶ್.ಎಸ್. ಸುಣಗಾರ್, ಡಿಪೋ ವ್ಯವಸ್ಥಾಪಕಎಂ.ಬಿ.ಆನಂದ್, ಭಾರತೀಯ ಜೈನ ಸಂಘಟನೆಕರ್ನಾಟಕ ವೀಕ್ಷಕ ಓಂ ಪ್ರಕಾಶ್ ಲೂನಾವತ್,ಬೆಂಗಳೂರು ಅಧ್ಯಕ್ಷ ಸುರೇಶ್ ಕಾನೂಂಗಾ, ವಿಪತ್ತುನಿರ್ವಹಣೆ ವಿಭಾಗದ ಕಮಲೇಶ್ ಬಂಡಾರಿ,ಸಂಸ್ಥೆಯ ದೀಪಕ್ ದೋಕಾ, ಉತ್ತಮ್ ಬಾಂಟಿಯಾಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.