ಕೀಟನಾಶಕ ಸಿಂಪಡಣೆಗೆ ಡ್ರೋಣ್‌ ವಿನ್ಯಾಸ


Team Udayavani, Feb 6, 2019, 6:39 AM IST

keeta.jpg

ನೆಲಮಂಗಲ: ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವದಿಂದಾಗಿ ಸರ್ಕಾರಿ ಶಾಲೆ ಗಳು ಬಾಗಿಲು ಮುಚ್ಚುವ ಅನಿವಾರ್ಯತೆ ಎದುರಾಗಿದೆ. ಆದರೆ, ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಅಸಾಧಾರಣ ಪ್ರತಿಭೆ ಜಗತ್ತಿನಲ್ಲಿ ವಜ್ರದಂತೆ ಹೊಳೆಯಲು ಸಿದ್ಧವಾಗಿದ್ದು, ತಾಲೂಕಿನ ಸರ್ಕಾರಿ ಶಾಲೆ ಯೊಂದರ ಬಡ ರೈತ ಕುಟುಂಬದ ವಿದ್ಯಾ ರ್ಥಿಗಳ ಸಾಧನೆ ಇಡೀ ದೇಶವೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ.

ತಾಲೂಕಿನ ಸೋಲದೇವನಹಳ್ಳಿಯ ವೈದ್ಯ ರತ್ನ ಲಕ್ಷ್ಮಮ್ಮ ಗಂಗಣ್ಣ ಸರ್ಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಂ.ಜನಾರ್ದನ್‌ ಹಾಗೂ ಎಂ.ಆರ್‌ ಮಧುಕುಮಾರ್‌ ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗಲು ಸೈಕಲ್‌ ಮತ್ತು ಡ್ರೋಣ್‌ಬಳಸಿ ಕೀಟನಾಶಕ ಸಿಂಪಡಿಸುವ ಹೊಸ ವಿಧಾನವನ್ನು ಪರಿಚಯಿಸಿದ್ದಾರೆ.

ವಿದ್ಯಾರ್ಥಿಗಳ ಈ ಹೊಸ ಅನ್ವೇಷಣೆ ಬೆಂಗಳೂರಿನಲ್ಲಿ ನಡೆದ ಭಾರತದ ದಕ್ಷಿಣ ವಲಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಇದೇ ಏಪ್ರಿಲ್‌ನಲ್ಲಿ ಅಮೇರಿಕದಲ್ಲಿ ನಡೆಯುವ ಅಂತಾ ರಾಷ್ಟ್ರೀಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ವಿಸ್ಮಯಕಾರಿ ಕೀಟನಾಶಕ ಸೈಕಲ್‌: ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಸಾಧಕ ವಿದ್ಯಾರ್ಥಿಗಳು ಹುಟ್ಟಿದ್ದು ಬಡ ರೈತ ಕುಟುಂಬದಲ್ಲಿ. ಆದರೂ, ದೇಶಕ್ಕೆ ನಮ್ಮ ದೊಂದು ಕೊಡುಗೆ ಇರಬೇಕೆಂಬ ಹಂಬಲ ವಿತ್ತು. ತಂದೆ ಕೃಷಿ ಚಟುವಟಿಕೆಯಲ್ಲಿ ಕಷ್ಟ ಪಡುತ್ತಿರುವುದನ್ನು ಮನಗಂಡಿದ್ದ ವಿದ್ಯಾ ರ್ಥಿಗಳು, ಸರ್ಕಾರಿ ಶಾಲೆಯಲ್ಲಿ ಕಲಿತ ವಿಜ್ಞಾನದ ಪಠ್ಯಕ್ರಮ ಹಾಗೂ ಮಂಡ್ಯ ಜಿಲ್ಲೆಯ ಪ್ರತಾಪ್‌ ಆವಿಷ್ಕರಿಸಿದ್ದ ಡ್ರೋಣ್‌ಏರ್‌ ಆ್ಯಂಬುಲೆನ್ಸ್‌ ಅನ್ನು ಮಾದರಿಯಾಗಿ ಟ್ಟುಕೊಂಡು ಸಾವಯವ ಕೃಷಿಯಲ್ಲಿ ರೈತ ರಿಗೆ ಪ್ರಯೋಜನವಾಗುವ ವಿಸ್ಮಯಕಾರಿ ಕೀಟನಾಶಕ ಸಿಂಪಡಿಸುವ ಹೊಸ ವಿಧಾನದ ಸೈಕಲ್‌ ಹಾಗೂ ಡ್ರೋಣ್‌ಸಿದ್ಧಪಡಿಸಿದ್ದಾರೆ.

ಸೈಕಲ್‌ ವಿಶೇಷತೆ: ಸರ್ಕಾರಿ ಪ್ರೌಢಶಾಲೆಯ ಜನಾರ್ದನ್‌ ಮತ್ತು ಮಧುಕುಮಾರ್‌ ರೈತ ರಿಗೆ ಪ್ರಯೋಜನವಾಗುವ ಮಾದರಿ ತಯಾ ರಿಸಬೇಕೆಂದು ಹಳೇ ಸೈಕಲ್‌ ಅನ್ನು ವಿನ್ಯಾಸ ಗೊಳಿಸಿ ಕೀಟನಾಶಕ ಸಿಂಪಡಿಸುವ ಪಂಪ್‌ ಅನ್ನು ಅಳವಡಿಸಲಾಗಿದೆ. ಇದರಿಂದ ಗಿಡ ಗಳ ಮೇಲಿನ ಭಾಗ, ಮಧ್ಯಮ ಹಾಗೂ ಕೆಳ ಹಂತಗಳಿಗೆ ಕೀಟನಾಶಕ ಸಿಂಪಡಿಸಲು ಬಹಳಷ್ಟು ಸಹಕಾರಿಯಾಗಿದೆ. ಇದರ ಜೊತೆ ಸೈಕಲ್‌ನಲ್ಲಿಯೇ ಕಳೆ ತೆಗೆಯುವುದು,

ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಲು, ಔಷಧಿ ತಯಾರಿಸುವ ಜೊತೆಗೆ ಕೀಟ ಬಾಧೆ ಯಿಲ್ಲದೇ ರೈತರು ನೆಮ್ಮದಿಯಿಂದ ಇರು ಬಹುದಾದ ಎಲ್ಲಾ ವಿಧಾನಗಳನ್ನು ಅಳವಡಿ ಸಲಾಗಿದೆ. ಈ ಕೀಟನಾಶಕ ಸಿಂಪಡಿಸುವ ಸೈಕಲ್‌ ತಯಾರಿಕೆಗೆ ವಿದ್ಯಾರ್ಥಿಗಳು ಕೇವಲ 5 ಸಾವಿರ ರೂ. ಖರ್ಚು ಮಾಡಿದ್ದು, ಹೆಚ್ಚು ಹಳೇ ವಸ್ತುಗಳನ್ನು ಬಳಸಿ ಸೈಕಲ್‌ ತಯಾರಿಸಿ ದ್ದಾರೆ. ಈ ನೂತನ ಪ್ರಯೋಗ ರೈತ ಸಮು ದಾಯಕ್ಕೆ ಬಹಳಷ್ಟು ಅನುಕೂಲಕರವಾಗಿದೆ ಎನ್ನುತ್ತಾನೆ ವಿದ್ಯಾರ್ಥಿ ಎಂ.ಜನಾರ್ದನ್‌

ಏನಿದು ಡ್ರೋಣ್‌?: ಜಗತ್ತಿನಲ್ಲಿ ಡ್ರೋಣ್‌ ಎಂದಾಕ್ಷಣ ಕ್ಯಾಮರಾ ನೆನಪಿಗೆ ಬರುತ್ತದೆ. ಆದರೆ, ಡ್ರೋಣ್‌ ಕೇವಲ ವೀಡಿಯೋ ಮತ್ತು ಫೋಟೋ ತೆಗೆಯಲು ಮಾತ್ರವಲ್ಲ ನಮ್ಮ ರಾಜ್ಯದ ಪ್ರತಾಪ್‌ ಏರ್‌ ಆ್ಯಂಬುಲೆನ್ಸ್‌ ರೀತಿಯಲ್ಲಿ ವಿನ್ಯಾಸಗೊಳಿಸಿ ಜಗತ್ತು ನಿಬ್ಬೆರ ಗಾಗುವಂತೆ ಮಾಡಿದ್ದ. ಆದರೆ, ಸರ್ಕಾರಿ ಶಾಲೆಯ ರೈತರ ಮಕ್ಕಳು ಡ್ರೋಣ್‌ ಬಳಸಿ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಬಹುದು, ಬಿತ್ತನೆ ಮಾಡಬಹುದು, ಬೆಂಕಿ ನಂದಿಸಬ ಹುದು ಎಂಬುದನ್ನು ಜಗತ್ತಿಗೆ ತಿಳಿಸಲು ಸಿದ್ಧರಾಗಿದ್ದಾರೆ.

ವಿದ್ಯಾರ್ಥಿಗಳು ತಯಾರಿಸಿ ರುವ ಮಾದರಿ ಡ್ರೋಣ್‌ ಒಂದು ಲೀಟರ್‌ ನೀರನ್ನು ಮೇಲೆತ್ತುವ ಸಾಮರ್ಥ್ಯ ಹೊಂದಿ ದ್ದು, ದ್ರಾಕ್ಷಿ ತೋಟ, ಕಾಫಿ, ತೆಂಗಿನ ಮರ ಹಾಗೂ ತೀರಾ ಎತ್ತರದ ಮರಗಳಿಗೆ ಕೀಟ ನಾಶಕ ಸಿಂಪಡಿಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಡ್ರೋಣ್‌ತಯಾ ರಿಸಲು 13 ಸಾವಿರ ರೂ.ಖರ್ಚು ಮಾಡ ಲಾಗಿದೆ. ಅಗ್ನಿಶಾಮಕ ದಳದವರು ಸಹ ಈ ಡ್ರೋಣ್‌ಬಳಸಬಹುದು. ಡ್ರೋಣ್‌ ಸಾಮ ರ್ಥ್ಯಕ್ಕೆ ಅನುಗುಣವಾಗಿ ನೀರಿನ ಶೇಖರಣೆ ಮಾಡಬಹುದು ಎನ್ನುತ್ತಾನೆ ವಿದ್ಯಾರ್ಥಿ ಎಂ.ಆರ್‌.ಮಧುಕುಮಾರ್‌

ಶಿಕ್ಷಕರ ಪ್ರೋತ್ಸಾಹ: ಸೋಲದೇವನಹಳ್ಳಿ ವೈದ್ಯರತ್ನ ಲಕ್ಷ್ಮಮ್ಮ ಗಂಗಣ್ಣ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಎಂ.ಜನಾರ್ದನ್‌ ತಂದೆ ಮುನಿರಾಜು, ತಾಯಿ ಲಕ್ಷ್ಮಿದೇವಿ ಮತ್ತೂಬ್ಬ ವಿದ್ಯಾರ್ಥಿ ಎಂ.ಆರ್‌.ಮಧು ಕುಮಾರ್‌ ತಂದೆ ರಾಮಕೃಷ್ಣ, ತಾಯಿ ಯಶೋಧಾ ಹಾ ಗೂ ಶಾಲೆ ವಿಜ್ಞಾನ ಶಿಕ್ಷಕಿ ಬಿ.ಎಸ್‌. ಪುಷ್ಪಾ, ಮುಖ್ಯ ಶಿಕ್ಷಕಿ ಟಿ. ದೇವಿಕಾ ಸೇರಿದಂತೆ ಶಾಲೆ ಎಲ್ಲಾ ಶಿಕ್ಷಕರು, ಸ್ನೇಹಿತರು ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಬೆನ್ನೆಲುಬಾಗಿದ್ದಾರೆ.

ಆಶ್ಚರ್ಯ: ವಿದ್ಯಾರ್ಥಿಗಳ ಪ್ರತಿಭೆಯ ಪರಿಚ ಯಕ್ಕಾಗಿ ಸರ್ಕಾರದ ಇಲಾಖೆಗಳಿಂದ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಆದರೆ, ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದ ಪ್ರಮಾ ಣ ಮಕ್ಕಳಿಗೆ ಒಂದು ಹೊತ್ತಿನ ಊಟಕ್ಕೂ ಸಾಕಾ ಗುವುದಿಲ್ಲ. ಇದೇ ಸರ್ಕಾರಿ ಪ್ರೌಢಶಾಲೆಯ ಜನಾರ್ದನ್‌ ಮತ್ತು ಮಧು ಕುಮಾರ್‌ ತಾಲೂ ಕು ಮಟ್ಟದಲ್ಲಿ ಗೆದ್ದಾಗ 50 ರೂ. ಬಹುಮಾನ ನೀಡಿ ದ್ದರಂತೆ.

ಜಿಲ್ಲಾ ಮಟ್ಟದಲ್ಲಿ 500 ರೂ., ರಾಜ್ಯ ಮಟ್ಟದಲ್ಲಿ 1,500 ರೂ., ದಕ್ಷಿಣ ವಲ ಯದಲ್ಲಿ 2 ಸಾವಿರ ರೂ.ಬಹುಮಾನ ವಾಗಿ ನೀಡಿದ್ದಾರೆ. ಸಾವಿರ ರೂ. ಖರ್ಚು ಮಾಡಿ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ನೀ ಡುವ ಬಹುಮಾನ ಅವರ ಬಸ್‌ ಚಾರ್ಜ್‌ಗೂ ಸಾಕಾಗದಿರುವುದು ಆಶ್ಚರ್ಯವೇ ಸರಿ. ಈಗ ಲಾದರೂ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳ ಪರಿಸ್ಥಿತಿ ತಿಳಿದು ಬಹುಮಾನದ ಪ್ರಮಾಣ ಹೆಚ್ಚಿಸಿ ಪ್ರೋತ್ಸಾಹ ನೀಡಿದರೆ ಅನುಕೂಲ ವಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

* ಕೊಟ್ರೇಶ್‌.ಆರ್‌

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ

Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು

Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು

Road Mishap: ಬೈಕ್‌ ವ್ಹೀಲಿಂಗ್‌ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು

Road Mishap: ಬೈಕ್‌ ವ್ಹೀಲಿಂಗ್‌ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.