ಅಂಗವಿಕಲರಿಗೂ ಶಿಕ್ಷಣ ಕೊಡಿಸಿ
Team Udayavani, Sep 27, 2018, 2:18 PM IST
ಹೊಸಕೋಟೆ: ಪೋಷಕರು ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ನಗರ ಸಭೆ ಅಧ್ಯಕ್ಷ ಎನ್.ಟಿ.ಹೇಮಂತಕುಮಾರ್ ಹೇಳಿದರು. ಪಟ್ಟಣದ ಜಿಕೆಬಿಎಂಎಸ್ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರದಲ್ಲಿ ಮಾತನಾಡಿದರು.
ಅಗತ್ಯ ಸೌಲಭ್ಯ ಕಲ್ಪಿಸುವೆ: ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಿದ ಸಹಾಯಧನ, ನಗರಸಭೆ ಸಂಗ್ರಹಿಸುವ ತೆರಿಗೆಯಂತಹ ಸಂಪನ್ಮೂಲದಲ್ಲಿ ಮೀಸಲಿಟ್ಟಿ ರುವ ನಿಧಿಯಡಿ ಅಂಗವಿಕಲರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ನಗರಸಭೆ ವ್ಯಾಪ್ತಿ ಅಂಗವಿಕಲ ವಿದ್ಯಾರ್ಥಿಗಳಿಗೆ, ಅರ್ಹ ವ್ಯಕ್ತಿಗಳಿಗೆ ಸಾಧನಾ ಸಲಕರಣೆ, ಸ್ವಾವಲಂಬಿ ಗಳಾಗಲು ಹೊಲಿಗೆ ಯಂತ್ರ, ಸ್ವಂತ ವ್ಯಾಪಾರ ಕೈಗೊಳ್ಳಲು 25 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ಶಾಸಕ ರ ಸಮ್ಮುಖದಲ್ಲಿ ಸೆ.28ರಂದು ನಗರ ಸಭೆ ಆವರಣದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಉತ್ತಮ ಸ್ಪಂದನೆ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಸರ್ಕಾರ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಕಳೆದ 18 ವರ್ಷಗಳಿಂದಲೂ ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಇಂತಹ ಶಿಬಿರ ಏರ್ಪಡಿಸುತ್ತಿದ್ದು ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು.
ಅಗತ್ಯ ತರಬೇತಿ: ಕ್ಷೇತ್ರ ಸಮನ್ವಯಾಧಿಕಾರಿ ಎಂ.ಲಲಿತಮ್ಮ, ತಾಲೂಕಿನಲ್ಲಿ 14 ವರ್ಷದೊಳಗಿನ ಒಟ್ಟು 527 ಅಂಗವಿಕಲ
ಮಕ್ಕಳಿದ್ದು ತೀವ್ರವಾದ ದೈಹಿಕ ನ್ಯೂನತೆಯುಳ್ಳ 19 ಮಕ್ಕಳಿಗೆ ತರಬೇತಿ ಪಡೆದ ಶಿಕ್ಷಕರಿಂದ ಗೃಹಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಅಗತ್ಯವಿರುವವರಿಗೆ ಉಚಿತ ಸಾಧನಾ ಸಲಕರಣೆ ವಿತರಿಸಿ, ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ನೆರವೇ ರಿಸಲಾಗುವುದು ಎಂದರು.
ಅನುದಾನ ಸದ್ಬಳಕೆ ಮಾಡಿಕೊಳ್ಳಿ: ತಾಪಂ ಅಧ್ಯಕ್ಷ ವಿ.ಸಿ.ಜಯದೇವಯ್ಯ, ಅಂಗವಿಕಲರು ಮಾನಸಿಕ ಸದೃಢರಾಗಲು ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ಮೀಸಲಿಟ್ಟಿರುವ ಅನುದಾನ ಸದುಪಯೋಗಪಡಿಸಿಕೊಳ್ಳಬೇ ಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ಕನ್ನಯ್ಯ, ಅಂಗವಿಕಲರು ಶಿಕ್ಷಣದಿಂದ ವಂಚಿತರಾಗ ಬಾರದು ಎಂಬ ಸದುದ್ದೇಶದಿಂದ ಜಾರಿಗೊಳಿ ಸುವ ಸಮನ್ವಯ ಶಿಕ್ಷಣ ಯೋಜನೆ ಪರಿಣಾ ಮಕಾರಿ ಎಂದರು. ಜಿಲ್ಲಾ ಸರ್ವಶಿಕ್ಷಣ ಅಭಿಯಾನ ಯೋಜನಾಧಿಕಾರಿ ನಾಗರಾಜೇಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಶಾಮಣ್ಣ, ಕಾರ್ಯ ಕ್ರಮ ಸಂಯೋಜಕ ಮುನಿರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.