ಜಿಪಂ, ತಾಪಂ ಚುನಾವಣೆಗಾಗಿ ಪಕ್ಷ ಸಂಘಟಿಸಿ
Team Udayavani, Jul 22, 2021, 5:51 PM IST
ದೇವನಹಳ್ಳಿ: ಜೆಡಿಎಸ್ ಪಕ್ಷದ ಕಾರ್ಯಕರ್ತರುಬೇರುಮಟ್ಟದಿಂದಲೇ ಪಕ್ಷ ಸಂಘಟಿಸಿ, ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಹಚ್ಚಿನಸ್ಥಾನ ಗಳಿಸಲು ಸಂಘಟಿತರಾಗಿ ಕೆಲಸ ಮಾಡಬೇಕುಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿತಿಳಿಸಿದರು.
ತಾಲೂಕಿನ ಜಾಲಿಗೆ ಗ್ರಾಮದ ಗ್ರಾಪಂ ಸದಸ್ಯಸುಬ್ರಹ್ಮಣ್ಯ ನಿವಾಸದ ಆವರಣದಲ್ಲಿ ದೇವನಹಳ್ಳಿವಿಧಾನಸಭಾಕ್ಷೇತ್ರದ ಜೆಡಿಎಸ್ ವತಿಯಿಂದ ನಡೆದಜಾಲಿಗೆ ಗ್ರಾಪಂ ವ್ಯಾಪ್ತಿಯ ಬೂತ್ ಸಮಿತಿ ರಚನೆಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿಮಾತನಾಡಿ, ಜಾಲಿಗೆ ಗ್ರಾಪಂ ವ್ಯಾಪ್ತಿಯಲ್ಲಿ 10ರಿಂದ 12 ಕೋಟಿಯಷ್ಟು ಅಭಿವೃದ್ಧಿ ಕಾರ್ಯಕ್ರಮ ಮಾಡಲಾಗಿದೆ.
ಪ್ರತಿ ಹಳ್ಳಿಗೆ 50 ಲಕ್ಷರೂ.ಗಳ ಕಾಮಗಾರಿ ಮಾಡಿಸಲಾಗಿದೆ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಾಲೂಕಿಗೆ ಹೆಚ್ಚಿನ ಅನುದಾನ ತಂದು ಪ್ರತಿಹೋಬಳಿಗೂ ಸಮಾನ ಅನುದಾನ, ಸಾಮಾಜಿಕನ್ಯಾಯ ನೀಡಲಾಗಿದೆ ಎಂದರು.
ರೈತರಿಗಾಗಿ ನೀರಾವರಿ: ಜಿಲ್ಲಾ ಜೆಡಿಎಸ್ ಅಧ್ಯಕ್ಷಬಿ.ಮುನೇಗೌಡ ಮಾತನಾಡಿ, ಬಿಜೆಪಿ ಸರ್ಕಾರಬಂದು 7 ವರ್ಷವಾದರೂ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿಲ್ಲ. ರಾಜ್ಯದಲ್ಲಿ ತೈಲ ಬೆಲೆಗಗನಕ್ಕೆರುತ್ತಿದೆ. ಯಾವುದೇ ಅಭಿವೃದ್ಧಿ ಆಗಿಲ್ಲ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗರೈತರ ಅನುಕೂಲಕ್ಕಾಗಿ ನೀರಾವರಿಗೆ ಆದ್ಯತೆನೀಡಿದ್ದರು ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆಬರಬೇಕಾದರೆ ಬೂತ್ ಮಟ್ಟದಿಂದ ಪಕ್ಷವನ್ನುಬಲಪಡಿಸಬೇಕು. ಇದಕ್ಕಾಗಿ ಗ್ರಾಪಂ ವ್ಯಾಪ್ತಿಯಮುಖಂಡರು, ಕಾರ್ಯಕರ್ತರು ಸಭೆ ನಡೆಸಿ,ಗ್ರಾಮಗಳಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗೆಬೂತ್ ಕಮಿಟಿಯಿಂದ ಮಾಹಿತಿ ಶಾಸಕರಿಗೆನೀಡಿದರೆ ಶೀಘ್ರದಲ್ಲೇ ಅಭಿವೃದ್ಧಿಗೆ ಆದ್ಯತೆನೀಡುತ್ತಾರೆ ಎಂದರು.
ತಾಲೂಕುಜೆಡಿಎಸ್‌ಉಪಾಧ್ಯಕ್ಷಹನುಮಂತಪ್ಪ,ಕಾರ್ಯಾಧ್ಯಕ್ಷ ಲಕ್ಷ ¾ಣ್, ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ರವೀಂದ್ರ, ಕಲ್ಯಾಣ್‌ಕುಮಾರ್‌ಬಾಬು, ಕಾರ್ಯದರ್ಶಿ ಶೈಲಜಾ, ಖಜಾಂಚಿಮಹೇಶ್, ಡಿಸಿಸಿ ನಿರ್ದೇಶಕರಾದ ಸೊಣ್ಣಪ್ಪ,ಕಾಮೇನಹಳ್ಳಿ ರಮೇಶ್, ಮುಖಂಡ ತಿಂಡ್ಲುಬಾಬು, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷಮಂಡಿಬೆಲೆ ರಾಜಣ್ಣ, ಗ್ರಾಪಂ ಸದಸ್ಯರಾದಸುಬ್ರಮಣಿ, ಭವ್ಯಪ್ರಶಾಂತ್, ರಾಧಮ್ಮ,ಕೆಂಪರಾಜು, ನಾಗೇಶ್, ಆನಂದ್, ವಿಎಸ್‌ಎಸ್‌ಎನ್ ಅಧ್ಯಕ್ಷ ರಾಜಣ್ಣ, ತಾಲೂಕು ಎಸ್‌ಟಿ ಘಟಕದಅಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ತಾಲೂಕುಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿಟಿ.ರವಿ, ಮುಖಂಡರಾದ ರಾಮಣ್ಣ, ಬಚ್ಚಣ್ಣ,ಅಪ್ಪಯಣ್ಣ, ಹನುಮಂತೇಗೌಡ, ಕೆಂಪರಾಜು,ಭಾಗ್ಯಮ್ಮ, ಪಟ್ಟಾಬಿ, ವೆಂಕಟೇಶ್, ಅಪ್ಪಣ್ಣಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.