Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ
Team Udayavani, Aug 29, 2024, 11:57 AM IST
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ನೌಕರ ನನ್ನು ಚಾಕುವಿನಿಂದ ಇರಿದು ಕೊಲೆಗೈ ದಿರುವ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಸಿಬ್ಬಂದಿ ರಾಮಕೃಷ್ಣ (45) ಮೃತ ವ್ಯಕ್ತಿ. ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ಯಲ್ಲಿ ಹತ್ಯೆಗೈದು ಪರಾರಿಯಾಗಲು ಯತ್ನಿಸಿದ ಆರೋಪಿ ರಮೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?: ವಿವಾಹಿತ ರಾಮಕೃಷ್ಣ ವಿಮಾನ ನಿಲ್ದಾಣದಲ್ಲಿ ಟ್ರೈ ಎಳೆಯುವ ಕೆಲಸ ನಿರ್ವಹಿಸುತ್ತಿದ್ದ. ಮಧುಗಿರಿ ತಿಮ್ಮನಹಳ್ಳಿ ಮೂಲದ ಬಸ್ ನಿರ್ವಾಹಕ ರಮೇಶ್ ಮತ್ತು ಸುನೀತಾ ಮದುವೆಯಾಗಿ 20 ವರ್ಷಗಳಾಗಿದ್ದವು. ಈ ನಡುವೆ, 3 ವರ್ಷಗಳ ಹಿಂದೆ ಸುನೀತಾಗೆ ರಾಮಕೃಷ್ಣ ಫೋನ್ ಮೂಲಕ ಪರಿಚಯವಾಗಿದ್ದರು. ಪರಿಚಯದ ನಂತರ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಈ ವಿಚಾರ ಗಂಡ ರಮೇಶ್ ತಿಳಿದು ಇಬ್ಬರ ನಡುವೆ ಅನೈತಿಕ ಸಂಬಂಧವಿದೆ ಎಂದು ರಾಮಕೃಷ್ಣನ ಜತೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಸುನೀತಾ- ರಮೇಶ್ ನಡುವೆ ವೈಮನಸ್ಸು ಉಂಟಾಗಿ ಇಬ್ಬರೂ ಬೇರೆಯಾಗಿದ್ದರು. ಕಳೆದ 3 ವರ್ಷಗಳಿಂದ ರಮೇಶ್ ದ್ವೇಷ ಇಟ್ಟುಕೊಂಡಿದ್ದು, ಈ ದ್ವೇಷದಿಂದಾಗಿ ರಾಮಕೃಷ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.