ಶಾಲಾ ಆರಂಭಕ್ಕೆ ಅಗತ್ಯ ಕ್ರಮ: ಬಿಇಒ ಕೆ.ಸಿ.ರಮೇಶ್‌

ತರಗತಿ ಆರಂಭಕ್ಕೆ ಮುಂದಾದ ಸರ್ಕಾರದಕ್ರಮಕ್ಕೆ ಸ್ವಾಗತ; ಕೋವಿಡ್‌ ಮಾರ್ಗಸೂಚಿ ಅನ್ವಯ ತರಗತಿ ಪ್ರಾರಂಭ

Team Udayavani, Aug 20, 2021, 6:47 PM IST

ಶಾಲಾ ಆರಂಭಕ್ಕೆ ಅಗತ್ಯ ಕ್ರಮ: ಬಿಇಒ ಕೆ.ಸಿ.ರಮೇಶ್‌

ನೆಲಮಂಗಲ: ಕೋವಿಡ್‌ ಮಹಾಮಾರಿಯಿಂದಾಗಿ ಸ್ಥಗಿತಗೊಂಡಿರುವ ಶಾಲಾ-ಕಾಲೇಜುಗಳು ಹಂತ-ಹಂತವಾಗಿ ಪ್ರಾರಂಭವಾಗುತ್ತಿರುವುದು ತಾಲೂಕಿನ ವಿದ್ಯಾರ್ಥಿಗಳಲ್ಲಷ್ಟೇ ಅಲ್ಲದೆ ಶಿಕ್ಷಕರು ಮತ್ತು ಪೋಷಕರಲ್ಲಿ ಸಂತಸ ಮೂಡಿಸಿದೆ.

ತಾಲೂಕಿನಲ್ಲಿ ಸರ್ಕಾರಿ 11, ಅನುದಾನಿತ19 ಹಾಗೂ 28 ಖಾಸಗಿ ಪ್ರೌಢಶಾಲೆಗಳು ಸೇರಿ ಒಟ್ಟಾರೆ 58 ಪ್ರೌಢಶಾಲೆಗಳಿವೆ. 9, 10ನೇ ತರಗತಿಗೆ ಸೇರಿದ ಆರು ಸಾವಿರ ವಿದ್ಯಾರ್ಥಿಗಳಿದ್ದು, ಶಾಲಾ ಆವರಣ ಮತ್ತು ತರಗತಿಗಳಲ್ಲಿ ಸರ್ಕಾರದ ಕೋವಿಡ್‌ ಮಾರ್ಗಸೂಚಿ ಅನ್ವಯ ತರಗತಿ ಆರಂಭಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿದ್ಯಾರ್ಥಿಗಳು, ಪೋಷಕರು ಸ್ವಾಗತಿಸಿದ್ದಾರೆ.

ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್‌ ಶಾಲೆಗಳ ಮುಖ್ಯ ಶಿಕ್ಷಕರ ಜೊತೆ ಸಭೆ ನಡೆಸಿ ನೀತಿ-ನಿಯಮ ಅಳವಡಿಕೆಯ ಕುರಿತು ಸೂಚನೆ ನೀಡಿದ್ದಾರೆ. ಅಲ್ಲದೇ ಶಿಕ್ಷಕರು ವಿದ್ಯಾರ್ಥಿಗಳ ಪೋಷಕರಿಗೆ ಸರ್ಕಾರದ ಎಸ್‌ಪಿ ನಿಯಮ ಅಲ್ಲದೇ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪೋಷಕರಿಂದ ಒಪ್ಪಿಗೆ ಪತ್ರ ಸ್ವೀಕರಿಸಿ ಶಾಲಾ ಆರಂಭಿಸಲು ತಾಲೂಕಿನ ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ.

ಇದನ್ನೂ ಓದಿ:ರವಿಚಂದ್ರನ್ ಚಿನ್ನದ ಹೃದಯದ ವ್ಯಕ್ತಿ : ನಟ ಜಗ್ಗೇಶ್ ಹೀಗೇ ಹೇಳಿದ್ದೇಕೆ ?

ಕಾಳಜಿ: ಒಂದೂವರೆ ವರ್ಷದ ಬಳಿಕ ಶಾಲೆ ಆರಂಭವಾಗುತ್ತಿದ್ದು ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿಸಲಾಗಿದ್ದು, ಶಾಲೆಗೆ
ಹಾಜರಾಗಲಿರುವ ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ನಡೆಸಲಿದೆ. ಥರ್ಮಲ್‌ ಸ್ಕ್ಯಾನ್‌ ಮತ್ತು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿ ಆರೋಗ್ಯದಲ್ಲಿ ವ್ಯತ್ಯಯವಾದರೇ ಸೂಕ್ತ ಕ್ರಮ ವಹಿಸಲು ಶಿಕ್ಷಕರಿಗೆ ತಿಳಿಸುವಂತೆ ಸೂಚಿಸಲಾಗಿದೆ ಎಂದು ಬಿಇಒ ಕೆ.ಸಿ.ರಮೇಶ್‌ ತಿಳಿಸಿದ್ದಾರೆ.

ಬಿಸಿ ಊಟಕ್ಕೆ ಬ್ರೇಕ್‌: ಸೋಮವಾರ ಪ್ರಾರಂಭವಾಗುವ 9 ಮತ್ತು 10ನೇ ತರಗತಿಯ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಬಿಸಿಯೂಟ ನೀಡುವ ವ್ಯವಸ್ಥೆಗೆ ಬ್ರೇಕ್‌ ಹಾಕಲಾಗಿದೆ, ಕೋವಿಡ್‌ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತಿತ್ತು. ಕೋವಿಡ್‌  ಹಿನ್ನೆಲೆ ಬಿಸಿಯೂಟದ ವ್ಯವಸ್ಥೆ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಒಟ್ಟಾರೆ ಶಿಕ್ಷಣ ಸಚಿವರು ಹೇಳಿರುವಂತೆ ಶೇ.2ಕ್ಕೂ ಹೆಚ್ಚು ಸೋಂಕು ಕಂಡುಬಂದರೆ ಶಾಲೆಗಳಿಗೆ ರಜಾ ಘೋಷಿಸಬೇಕೆಂದು ಹೇಳಲಾಗಿದೆ. ಶಾಲೆ ಆರಂಭವಾದ ಬಳಿಕ ಕೋವಿಡ್‌ ಮಹಾಮಾರಿ ಯಾವ ರೀತಿ ಸ್ವರೂಪ ಪಡೆಯಲಿದೆ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮಕ್ಕಳು ಸುರಕ್ಷಿತವಾಗಿರಲಿ ಎಂಬುದೇ ನಮ್ಮ ಆಶಯ.

ಮಾರ್ಗಸೂಚಿ ಪಾಲನೆ
ತಾಲೂಕಿನಲ್ಲಿ ಸೋಮವಾರದಿಂದ 9 ಮತ್ತು 10ನೇ ತರಗತಿಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸರಕಾರದ ಎಸ್‌ಒಪಿಯನ್ನುಕಟ್ಟುನಿಟ್ಟಾಗಿ
ಜಾರಿಮಾಡಲಾಗಿದೆ, ಪ್ರತಿಯೊಂದು ತರಗತಿಯಲ್ಲಿ 15 ರಿಂದ 20 ಮಕ್ಕಳನ್ನು 3ರಿಂದ 6ಅಡಿ ಅಂತರದಲ್ಲಿಕುಳಿತುಕೊಳ್ಳಲು ವ್ಯವಸ್ಥೆ
ಮಾಡಲಾಗಿದೆ. ಎಲ್ಲ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಿ ಸರ್ಕಾರದ ನೀತಿ-ನಿಯಮದ ಬಗ್ಗೆ ಅರಿವು
ಮೂಡಿಸಲಾಗಿದೆ. ಪ್ರತಿ 10 ಮಕ್ಕಳಿಗೆ ಒಬ್ಬರು ಶಿಕ್ಷರನ್ನು ಆರೋಗ್ಯ ಮೇಲ್ವಿಚಾರಕರ ಜವಾಬ್ದಾರಿ ನೀಡಲಾಗಿದೆ. ಒಂದು ವಾರಗಳಕಾಲ ನಿತ್ಯ
ತರಗತಿಗಳನ್ನು ನಡೆಸಲಾಗುತಿದ್ದು ನಂತರದ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರುತ್ತದೆ ಅದನ್ನು ಇಲಾಖೆ ಅಧಿಕಾರಿಗಳಿಗೆ ವರದಿ ನೀಡಲಾಗುತ್ತದೆ ಎಂದು ಉದಯವಾಣಿಗೆಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್‌ ಮಾಹಿತಿ ನೀಡಿದರು.

 – ಕೊಟ್ರೇಶ್‌.ಆರ್‌

ಟಾಪ್ ನ್ಯೂಸ್

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

1-huli

Pilikula: 2 ಮರಿಗಳಿಗೆ ಜನ್ಮ ನೀಡಿದ ಹುಲಿ ರಾಣಿ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.