ಕೋರ್ಟ್ ಆದೇಶಕ್ಕೂ ತಲೆಬಾಗದ ಕುಟುಂಬ
Team Udayavani, Jun 6, 2023, 2:31 PM IST
ಚನ್ನರಾಯಪಟ್ಟಣ: ದೇವನಹಳ್ಳಿ ತಾಲೂಕಿನ ತಲೆಬಾಗದ ಕುಟುಂಬ ಬೂದಿಗೆರೆ ಗ್ರಾಮದಲ್ಲಿ ಆಸ್ತಿಗಾಗಿ ಜನ್ಮ ನೀಡಿದ ತಂದೆ-ತಾಯಿಯನ್ನೇ ಮಕ್ಕಳು ಬೀದಿಪಾಲು ಮಾಡಿ ಹೊರಹಾಕಿದ್ದಾರೆ.
ಇಳಿ ವಯಸ್ಸಿನಲ್ಲಿಯೂ ಪೋಷಕರಿಗೆ ಒಂದೊತ್ತು ಅನ್ನ ನೀಡಲು ಹಿಂದೇಟು ಹಾಕಿದ್ದ ಕಾರಣಕ್ಕೆ ತಾನು ಸಂಪಾದನೆ ಮಾಡಿದ ಆಸ್ತಿಯನ್ನು ಕೋರ್ಟ್ ಮೆಟ್ಟಿಲೇರಿ ಮರಳಿ ಪಡೆದರೂ ಆದೇಶವನ್ನು ಸಕಾಲದಲ್ಲಿ ಜಾರಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಸೂಕ್ತ ಸಮಯದಲ್ಲಿ ಆಸ್ತಿ ಭಾಗ ಮಾಡಿಲ್ಲ ಎಂದು ತಂದೆಯನ್ನೇ ಹೊರ ಹಾಕಿದ್ದನ್ನೂ ವಿರೋ ಧಿಸಿ, ಸಂತ್ರಸ್ತ ಹಿರಿಯ ಜೀವ ಪಾಪಣ್ಣ, ದೊಡ್ಡ ಬಳ್ಳಾಪುರದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಹಿರಿಯ ನಾಗರೀಕರ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ಮಕ್ಕಳು ಕಬ್ಜಾ ಮಾಡಿ ಕೊಂಡಿದ್ದ ಆಸ್ತಿಯನ್ನು ಮರಳಿ ಪಡೆಯಲು ಪ್ರಕರಣ ದಾಖಲಿಸಿ, ನ್ಯಾಯಾಲಯದ ಆದೇಶ ದಂತೆ ಮನೆ, ಅಂಗಡಿ ಸ್ವಲ್ಪ ಭೂಮಿ ಅವರಿಗೆ ಬಿಡಿಸಿ ಕೊಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಒಂದು ವರ್ಷದ ಹಿಂದೆಯೇ ನಿರ್ದೇಶನ ನೀಡಿರುತ್ತಾರೆ. ಬೂದಿಗೆರೆ ಗ್ರಾಪಂ ಕಚೇರಿ ಮುಂಭಾಗ ಹಿರಿಯ ನಾಗರಿಕ ಸಂತ್ರಸ್ತ ಪಾಪಣ್ಣ ಒಂಬಟ್ಟಿಯಾಗಿ ಗುರುವಾರ ಪ್ರತಿಭಟನೆ ನಡೆಸಿದರು.
ಉಪ ವಿಭಾಗಾಧಿಕಾರಿಗಳ ಆದೇಶವಾಗಿ ಒಂದು ವರ್ಷವಾದರೂ ಜಾರಿ ಮಾಡಲು ಗ್ರಾಪಂ ಅಧಿಕಾರಿಗಳು, ಕಂದಾಯ ಇಲಾಖೆ, ಪೊಲೀಸರು ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಗೋಗರೆದರೂ ಜೀವನ ನಿರ್ವಹಣೆಗೆ ಆಸ್ತಿ ಮರುಕಳಿಸುವಂತೆ ಒತ್ತಾಯಿಸಿದರು.
ಈ ಕುರಿತು ಚನ್ನರಾಯಪಟ್ಟಣ ಉಪತಹಶೀ ಲ್ದಾರ್ ಸುರೇಶ್ ಮಾತನಾಡಿ, ಈಗಾಗಲೇ ನ್ಯಾಯಾಲಯದ ಆದೇಶದಂತೆ ಪಾಪಣ ರವರ ಸ್ವತ್ತು ಬಿಡಿಸಿಕೊಡಲು ಈ ಹಿಂದೆ ಯತ್ನಿಸ ಲಾಗಿತ್ತು, ಅವರ ಮಕ್ಕಳು ಅಂಗಡಿಗಳಿಗೆ ಬೀಗ ಜಡಿದು ಹೋಗಿದ್ದರು, ಈ ಕುರಿತು ಚನ್ನ ರಾಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೂಮ್ಮೆ ಮೇಲಾಧಿಕಾರಿಗಳಿಂದ ನಿರ್ದೇಶನ ನೀಡಿದ್ದರ ಸಲುವಾಗಿ ಅವರ ಆಸ್ತಿಯನ್ನು ಮರು ಕಳಿಸಲು ಕಾರ್ಯಾಚರಣೆ ಮಾಡಿ ದ್ದೇವೆ ಎಂದರು.
‘ಪಾಪಣ್ಣರವರ ಮಕ್ಕಳಿಗೆ ಈಗಾ ಗಲೇ ದೂರ ವಾಣಿಯ ಮೂಲಕ ತಿಳಿಸಿದ್ದೇವೆ. ನೋಟಿಸ್ ನೀಡಿದ್ದರೂ ಅದಕ್ಕೆ ಸೂಕ್ತವಾಗಿ ಸ್ಪಂದಿ ಸಿಲ್ಲ, ಇಷ್ಟಾದರೂ ಮನೆ, ಅಂಗಡಿಯ ಒಳಗೆ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ, ನ್ಯಾಯಾ ಲಯದ ಆದೇಶದ ಅನ್ವಯ ಕರ್ತವ್ಯ ನಿರ್ವಹಣೆ ಮಾಡಿದ್ದೇವೆ. ಎಲ್ಲ ವಸ್ತುಗಳನ್ನು ತೆಗೆದು ಕೊಂಡು ಹೋಗಿ, ಪೂರ್ಣ ಪ್ರಮಾಣದಲ್ಲಿ ಪಾಪಣ್ಣರಿಗೆ ಸ್ವತ್ತು ಗಳನ್ನು ಒದಗಿಸುತ್ತೇವೆ’ ಎಂದು ಪಿಡಿಒ ನರ್ಮದಾ ತಿಳಿಸಿದರು.
ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿಯೂ 2 ದಿನ ಸಮಯ ನೀಡಿ, ಮತ್ತೂಮ್ಮೆ ಹಿರಿಯ ಜೀವಿ ಪಾಪಣ್ಣರನ್ನು ರಸ್ತೆಗೆ ದೂಡಿದ್ದಾರೆ.
ಅಳಲೇನು?: ಮಕ್ಕಳ ವಿರುದ್ಧವೇ ಪ್ರಕರಣ ಹೂಡಿ ತನ್ನ ಸ್ವಯಾರ್ಜಿತ ಸ್ವತ್ತನ್ನು ಪಡೆಯಲು ಹೋರಾಟ ಮಾಡುತ್ತಿರುವ ಪಾಪಣ್ಣ ಮಾತನಾಡಿ, ನನಗೆ ಒಟ್ಟು 8 ಜನ ಮಕ್ಕಳಿದ್ದಾರೆ. ಸ್ವಂತ ದುಡಿಮೆ ಯಿಂದಲೇ ಆಸ್ತಿ ಸಂಪಾದನೆ ಮಾಡಿ ದ್ದೇನೆ. ಇಳಿ ವಯಸ್ಸಿನಲ್ಲಿ ಆಸ್ತಿಗಾಗಿ ರಸ್ತೆಗೆ ದೂಡಿದ ಮಕ್ಕಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಆದೇಶ ಮಾಡಿಸಿಕೊಂಡು ಬಂದು ಒಂದು ವರ್ಷ ಕಳೆದರೂ ಇಂದಿಗೂ, ಅಧಿಕಾರಿಗಳ ಅಸಡ್ಡೆತನ ದಿಂದ ಸ್ವತ್ತು ಸುಪರ್ದಿಗೆ ಬಂದಿಲ್ಲ, ಈಗ ಇನ್ನೆರೆಡು ದಿನ ಸಮಯವನ್ನು ನನ್ನ ಮಕ್ಕಳಿಗೆ ನೀಡಿದ್ದಾರೆ’ ಎಂದು ಅಳಲು ತೊಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.